“ಪಾಶ” ಕಿರುಚಿತ್ರ ಬಿಡುಗಡೆ 28ರಂದು

0
161

“ಪಾಶ” ಕಿರುಚಿತ್ರವು ಕಲಬುರಗಿ ಕಲಾವಿದರೆಲ್ಲ ಸೇರಿಕೊಂಡು ತಯಾರಿಸಿದ್ದಾರೆ. “ಗಧಾಗ್ರಜ ಫಿಲಂಸ್” ಅಡಿಯಲ್ಲಿ ಈ ಕಿರುಚಿತ್ರ ಹೊರಹೋಮ್ಮಿದೆ.

ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಕಲಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿರುವ “ಲಕ್ಷ್ಮೀಕಾಂತ ಜೋಶಿ” ಅವರು
ಚಿತ್ರಕಥೆ, ಸಂಭಾಷಣೆ ಬರೆದು ಚೊಚ್ಚಲ ನಿರ್ದೇಶನ ಮಾಡಿದ್ದಾರೆ.

Contact Your\'s Advertisement; 9902492681

ಈ ಕಿರುಚಿತ್ರದ ಮೂಲಕಥೆ ಜನಪ್ರಿಯ ಹಿರಿಯ ಸಾಹಿತಿಗಳಾದ ಜೋಗಿ ( ಗಿರೀಶರಾವ್ ಹತ್ವಾರ್ ) ಅವರ “ಲೈಫ್ ಇಸ್ ಬ್ಯುಟಿಫುಲ್” ಕೃತಿಯ ಒಂದು ಕಥೆಯಾಧಾರಿತವಾಗಿರುವುದು ಈ ಕಿರುಚಿತ್ರದ ಜೀವಾಳ.

ಈ ಕಿರುಚಿತ್ರ ಈಗಿನ ಕಾಲದ ಜಡ ಮನಸ್ಥಿತಿಯನ್ನು ಪ್ರಶ್ನಿಸುವ ಹಾಗೂ ವಿಚಾರ ವಿಮರ್ಶೆಗಳಿಗೆ ಒಳಪಡಿಸುವ ಪ್ರಯತ್ನ ಮಾಡಲಿದೆ. ಹೊಸತನದ ಶೈಲಿಯೊಂದಿಗೆ ಅರ್ಥಗರ್ಭಿತ ಸಂಭಾಷಣೆ ಹೊಂದಿರುವ ಈ ಕಿರುಚಿತ್ರ ಗಂಭೀರ ನಿರೂಪಣೆಯಲ್ಲಿ ಸಾಗಲಿದ್ದು ಪ್ರೇಕ್ಷಕ ಪ್ರಭುಗಳು ತಮ್ಮ ವೀಕ್ಷಣೆಗೆ ಭಂಗ ಬರದಂಥ ಜಾಗದಲ್ಲಿ ಕುಳಿತುಕೊಂಡು ಈ ಪಾಶ ಕಿರುಚಿತ್ರವನ್ನು ಆನಂದಿಸಬೇಕೆಂದು ನಿರ್ದೇಶಕರಾದ ಲಕ್ಷ್ಮೀಕಾಂತ ಜೋಶಿ ಮನವಿ ಮಾಡಿದ್ದಾರೆ.

ಈ “ಪಾಶ” ಕಿರುಚಿತ್ರ ವಿಭಿನ್ನ ವಿಭಾಗಳಲ್ಲಿ ಒಟ್ಟು ಒಂಭತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದು ಕಲಬುರಗಿ ಇತಿಹಾಸದಲ್ಲೇ ಮೊಟ್ಟ ಮೊದಲ ಕಿರುಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

“ಪಾಶ” ಬೆಂಗಳೂರಿನ “ವಿಡಿಯೋಟೇಪ್ ಫಿಲ್ಮ್ ಫೆಸ್ಟಿವಲ್” ನಲ್ಲಿ ‘ಉತ್ತಮ ಸಾಮಾಜಿಕ ಸಂದೇಶ’ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

ಅದೇ ರೀತಿ ಕೊಲ್ಕತ್ತಾದ ಪ್ರತಿಷ್ಠಿತ “ಭಾರತೀಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವ”ದಲ್ಲಿ “ಉತ್ತಮ ಕನ್ನಡ ಕಿರುಚಿತ್ರ” ಹಾಗೂ ಮುಂಬೈನ “ಜಾಶ್ನೆ ಚಲನಚಿತ್ರೋತ್ಸವ” ದಲ್ಲಿಯೂ ಉತ್ತಮ ಕನ್ನಡ ಕಿರುಚಿತ್ರ” ಪ್ರಶಸ್ತಿ ಪಡೆದಿದೆ.
ಹಾಗೂ ಮಹಾರಾಷ್ಟ್ರದ “ರೀಲ್ಸ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ” ಉತ್ತಮ ಕಿರುಚಿತ್ರ ” ವಿಭಾಗದಲ್ಲಿ ತನ್ನ ಛಾಪು ಮೂಡಿಸಿದೆ , ಮತ್ತು ಆನ್ ಲೈನ್ ಫೆಸ್ಟಿವಲ್ ಗಳಾದ “ಡೈಮಂಡ್ ಅಂತರಾಷ್ಟ್ರೀಯ ಚಲನಚಿತ್ರೋತ್ಸವ” ದಲ್ಲಿ “ಉತ್ತಮ ಕತೆ” “ಉತ್ತಮ ಕಿರುಚಿತ್ರ “ಹಾಗೂ “ಐಕಾನಿಕ್ ಶಾರ್ಟ್ ಸಿನಿ ಅವಾರ್ಡ್ಸ್” ನಲ್ಲಿಯೂ “ಉತ್ತಮ ಕತೆ” , “ಉತ್ತಮ ಪ್ರಾಯೋಗಿಕ ಕಿರುಚಿತ್ರ” , “ಉತ್ತಮ ಕನ್ನಡ ಕಿರುಚಿತ್ರ” ವಿಭಾಗದಲ್ಲಿ ಜಯಭೇರಿ ಭಾರಿಸಿದೆ.

ಈ ಕಿರುಚಿತ್ರ ಇದೇ ತಿಂಗಳು 28 ರಂದು ಎ ಟು ಮೂವೀಸ್ ಯೌಟ್ಯೂಬ್ ಚಾನೆಲ್ ನಲ್ಲಿ ಬೆಳಿಗ್ಗೆ 9:30 ಗಂಟೆಗೆ ಬಿಡುಗಡೆಯಾಗಲಿದೆ.

ಮುಖ್ಯಪಾತ್ರದಲ್ಲಿ ಕಿರುತೆರೆಯ ಹಿರಿಯ ನಟ ವಿಜಯ ಕುಲಕರ್ಣಿ ನಟಿಸಿದ್ದರೆ , ಕಲರ್ಸ್ ಕನ್ನಡ ವಾಹಿನಿಯ , ಕಾಮಿಡಿ ಕಂಪನಿ ಖ್ಯಾತಿಯ ಸೋಮಶಂಕರ್ ಬಿರಾದಾರ ಅವರು ಪ್ರಮುಖ ಪಾತ್ರವೊಂದರಲ್ಲಿ ತೆರೆ ಹಂಚಿಕೊಂಡಿದ್ದಾರೆ.

ರಂಗಾಯಣ ಕಲಾವಿದರಾದ ಉಮೇಶ್ ಪಾಟೀಲ್ , ಶ್ರೀನಿವಾಸ ದೋರನಳ್ಳಿ , ಕೌಶಿಕ್ ಕುಲಕರ್ಣಿ , ಪ್ರದೀಪ ಬೆಳಮಗಿ , ರಿಷಿಕೇಶ ಕುಲಕರ್ಣಿ , ನೀಲಾಂಬಿಕಾ , ಲಕ್ಷ್ಮೀ ಅಥಣಿ ತಾರಾಗಣದಲ್ಲಿದ್ದಾರೆ. ಕುಮಾರಿ ಸ್ಪೂರ್ತಿ ಅಥಣಿ , ಸ್ನೇಹ , ಕಾವ್ಯ , ವೈಷ್ಣವಿ ಬಾಲ ಕಲಾವಿದೆಯರಾಗಿ ಅಭಿನಯಿಸಿದ್ದಾರೆ.

ಚಿತ್ರಕ್ಕೆ ಸಹ ನಿರ್ದೇಶಕರಾಗಿ ಸೋಮಶಂಕರ್ ಬಿರಾದಾರ , ಸಹಾಯಕ ನಿರ್ದೇಶಕರಾಗಿ ಅಂಬರೀಶ್ ಮರಾಠಾ ಕಾರ್ಯ ನಿರ್ವಹಿಸಿದ್ದಾರೆ.

ಛಾಯಾಗ್ರಾಹಕರಾಗಿ ರಾಘು ಮರೆನೂರ , ಸಂಕಲನ ಓಂಕಾರ ಮತ್ತು ಭಾಗ್ಯೇಶ್ ಪಾಟೀಲ್ ಜಂಟಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಗೂ ಹಂಸಲೇಖ ಅವರ ಗರಡಿಯಲ್ಲಿ ಪಳಗಿದ ಸುಚೀನ್ ಶರ್ಮಾ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.

ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ಲಕ್ಷ್ಮೀಕಾಂತ ಜೋಶಿ , ನಟರಾದ ವಿಜಯ್ ಕುಲಕರ್ಣಿ , ಕೌಶಿಕ್ ಕುಲಕರ್ಣಿ , ರಾಹುಲ್ ಕಟ್ಟಿ , ಅಂಬರೀಷ್ ಮರಾಠ , ನೀಲಾಂಬಿಕಾ, ಪ್ರದೀಪ್ ಬೆಳಮಗಿ ಹಾಗೂ ಛಾಯಾಗ್ರಾಹಕ ರಾಘು ಮರೆನೂರ್ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here