ಸುರಪುರ: ತಾಲೂಕಿನಾದ್ಯಂತ ಕಾರ್ಮಿಕ ಇಲಾಖೆಯಲ್ಲಿ ನಕಲಿ ಕಟ್ಟಡ ಕಾರ್ಮಿಕರ ನೊಂದಣಿ ಕಾರ್ಡ್ಗಳು ಹೆಚ್ಚಾಗಿದ್ದು ಕೂಡಲೇ ಅವುಗಳನ್ನು ಪತ್ತೆ ಹಚ್ಚಿ ರದ್ದುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ಯುವ ರಕ್ಷಣಾ ವೇದಿಕೆ ಮುಖಂಡರು ಆಗ್ರಹಿಸಿದರು.
ನಗರದ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಮುಖಂಡರು,ಇಂದು ನಕಲಿ ಕಾರ್ಮಿಕರ ಕಾರ್ಡ್ಗಳ ಹಾವಳಿ ಹೆಚ್ಚಾಗಿದೆ,ಇದರಿಂದ ಸರಕಾರದ ಸೌಲಭ್ಯಗಳು ನಕಲಿ ಕಾರ್ಡ್ ಪಡೆದುಕೊಂಡವರ ಪಾಲಾಗುತ್ತಿದ್ದು,ನೈಜ ಕಟ್ಟಡ ಕಾರ್ಮಿಕರಿಗೆ ಸೌಲಭ್ಯ ಸಿಗದೆ ವಂಚಿತರಾಗುತ್ತಿದ್ದಾರೆ,ಆದ್ದರಿಂದ ಕೂಡಲೇ ನಕಲಿ ಕಾರ್ಡ್ಗಳನ್ನು ಪತ್ತೆ ಹಚ್ಚಿ ರದ್ದುಗೊಳಿಸುವ ಜೊತೆಗೆ ಕಾರ್ಡ್ ಪಡೆದವರ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ನಂತರ ಕಾರ್ಮಿಕರ ಅಧಿಕಾರಿಗಳಿಗೆ ಬರೆದ ಮನವಿಯನ್ನು ಕಚೇರಿ ಸಿರಸ್ತೆದಾರರ ಮೂಲಕ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಸಂತೋಷ ಭೂಮಶೆಟ್ಟಿ,ಉಪಾಧ್ಯಕ್ಷ ಸುನಿಲಕುಮಾರ ಸೂಗೂರ,ವಿನೋದಕುಮಾರ್,ತಾ.ಅಧ್ಯಕ್ಷ ಮೌನೇಶ,ಕಾರ್ಯದರ್ಶಿ ದೇವರಾಜ ಸೇರಿದಂತೆ ಇತರರಿದ್ದರು.