ರಾಜ್ಯದಲ್ಲಿ ಹೊಸ ಯೋಜನೆ ಘೋಷಿಸದ ನಿಷ್ಕ್ರಿಯ ಸರಕಾರ: ಬಿ ವೈ ವಿಜಯೇಂದ್ರ

0
31

ಕಲಬುರಗಿ: ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ ಮತ್ತು ಸರಕಾರದ ಶೂನ್ಯ ಸಾಧನೆ ಬಗ್ಗೆ ಜನಸಾಮಾನ್ಯರಿಂದ ಹಿಡಿದು ಎಲ್ಲರೂ ಬಿಡಿ ಶಾಪ ಹಾಕುತ್ತಿದ್ದಾರೆ ಅಭಿವೃದ್ಧಿ ಕೆಲಸ ಕಾರ್ಯಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದೆ ಮುಖ್ಯಮಂತ್ರಿ ಸೇರಿದಂತೆ ಯಾವುದೇ ಸಚಿವರು ಗುದ್ದಲಿ ಪೂಜೆ ಶಂಕುಸ್ಥಾಪನೆ ಹೊಸ ಯೋಜನೆ ಘೋಷಿಸದ ನಿಷ್ಕ್ರಿಯ ಸರಕಾರವಾಗಿದೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಹೇಳಿದ್ದಾರೆ.

ಮಂಗಳವಾರ ಬಿಜೆಪಿ ಅಭ್ಯರ್ಥಿ ಅಮರ್ನಾಥ್ ಪಾಟೀಲ್ ಪರ ಪ್ರಚಾರಕ್ಕೆ ಆಗಮಿಸಿ ಅವರ ನಿವಾಸದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಭೀಕರ ಬರಗಾಲವಿದ್ದರೂ ರೈತರಿಗೆ ನೆರವಾಗದೆ ಕೇಂದ್ರ ಸರ್ಕಾರವು ನೀಡಿದ ಪರಿಹಾರ ಧನವನ್ನು ರೈತರಿಗೆ ಸರಿಯಾಗಿ ವಿತರಿಸದೆ ಕಾಂಗ್ರೆಸ್ ಸರ್ಕಾರ ರೈತ ಪರವಾಗಿ ಇಲ್ಲ ಎಂಬುದು ಸಾಬೀತಾಗಿದೆ. ಹೈನುಗಾರಿಕೆ ಅಭಿವೃದ್ಧಿಗಾಗಿ 800 ಕೋಟಿ ಅನುದಾನ ನೀಡದೆ ರೈತರನ್ನು ವಂಚಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು ಮುಖ್ಯಮಂತ್ರಿ ಗೃಹಮಂತ್ರಿ ಇದ್ದಾರೋ ಇಲ್ಲವೋ ಹಾಗೂ ಚುನಾಯಿತ ಸರ್ಕಾರ ಎಲ್ಲಿದೆ? ಎನ್ನುವಂತಾಗಿದೆ ಎಂದು ಆರೋಪಿಸಿದರು.

Contact Your\'s Advertisement; 9902492681

ಚನ್ನಗಿರಿ ಠಾಣೆಗೆ ಮುತ್ತಿಗೆ ಹಾಕಿ ದಾಂಧಲೆ ಎಬ್ಬಿಸಿದ ಘಟನೆಯಿಂದ ಈ ರಾಜ್ಯದಲ್ಲಿ ಪೊಲೀಸರಿಗೆ ಕೂಡ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್ ಸರಕಾರದ ತುಷ್ಟೀಕರಣ ನೀತಿಯಿಂದ ಜನತೆ ಬೇಸತ್ತಿದ್ದಾರೆ ಎಂದು ಟೀಕಿಸಿದರು.

ಕಳೆದ ಬಾರಿ ಕಾರಣಾಂತರಗಳಿಂದ ಟಿಕೆಟ್ ವಂಚಿತರಾಗಿ ಪಕ್ಷ ಪರಾಭವಗೊಂಡಿತ್ತು. ಈ ಬಾರಿ ಪಕ್ಷದ ವರಿಷ್ಠರು ಅಮರನಾಥ್ ಪಾಟೀಲರಿಗೆ ಮರುವಾವಕಾಶ ನೀಡಿದ್ದು ಪದವೀಧರ ಹಾಗೂ ಶಿಕ್ಷಕರ ಬಗ್ಗೆ ಉತ್ತಮ ಸ್ಪಂದನೆ ತೋರಿದ ಅವರ ಪರವಾಗಿ ಈಶಾನ್ಯ ಕರ್ನಾಟಕದಲ್ಲಿ ಉತ್ತಮ ವಾತಾವರಣವಿದ್ದು ಗೆಲುವು ಸಾಧಿಸುವುದು ನಿಶ್ಚಿತ ಎಂದರು.

ವಿಧಾನ ಪರಿಷತ್ ಚುನಾವಣೆಯನ್ನು ಬಿಜೆಪಿ – ಜೆಡಿಎಸ್ ಮೈತ್ರಿಕೂಟವು ಗಂಭೀರವಾಗಿ ಪರಿಗಣಿಸಿದ್ದು ದೊಡ್ಡ ಅಂತರದಲ್ಲಿ ಈಶಾನ್ಯ ಕರ್ನಾಟಕದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಭ್ಯರ್ಥಿ ಅಮರನಾಥ ಪಾಟೀಲ್ ಮಾಜಿ ಸಚಿವರಾದ ಮುರುಗೇಶ್ ನಿರಾಣಿ ಬಿಜೆಪಿ ಹಿರಿಯ ಮುಖಂಡ ವಿಧಾನ ಪರಿಷತ್ ಸದಸ್ಯ ಎನ್ ರವಿ ಕುಮಾರ್, ವಿಧಾನ ಪರಿಷತ್ ಉಪ ನಾಯಕರಾದ ಸುನಿಲ್ ವಲ್ಲಾಪುರೆ, ವಿಧಾನ ಪರಿಷತ್ ಸದಸ್ಯರಾದ ಶಶಿಲ್ ಜಿ ನಮೋಶಿ, ಶಾಸಕ ಬಸವರಾಜ್ ಮತ್ತಿಮೂಡು,ಡಾ. ಅವಿನಾಶ್ ಜಾಧವ್, ಬಿಜೆಪಿ ಗ್ರಾಮೀಣ ಅಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೇವಾಡಗಿ, ಬಿಜೆಪಿಯ ಹಿರಿಯ ನಾಯಕರಾದ ಸುರೇಶ್ ಆರ್. ಸಜ್ಜನ್, ಅವ್ವಣ್ಣ ಮ್ಯಾಕೇರಿ ಮತ್ತಿತರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here