ಕಾಡು ಬೆಳೆಸಿ, ಸಮುದಾಯ ಉಳಿಸಿ: ನ್ಯಾಯಾಧೀಶ ಶ್ರೀನಿವಾಸ ನವಲೆ

0
36

ಕಲಬುರಗಿ: ಕಾಡು ಬೆಳೆಸಿ ಪರಿಸರವನ್ನು ಸಂರಕ್ಚಿಸುವ ಮೂಲಕ ನಾವುಗಳು ನಮ್ಮ ಸಮುದಾಯವನ್ನು ರಕ್ಚಿಸೋಣ ಎಂದು ಕಲಬುರಗಿಯ ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಶ್ರೀನಿವಾಸ ನವಲೆ ಅವರು ಹೇಳಿದರು.

ನಗರದ ಶ್ರೀ ಸೇಟ್ ಶಂಕರಲಾಲ್ ಲಾಹೋಟಿ ಕಾನೂನು ಮಹಾವಿದ್ಯಾಲಯದಲ್ಲಿ ರಾ.ಸೇ.ಯೋ ಚಟುವಟಿಕೆಗಳ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.

Contact Your\'s Advertisement; 9902492681

ಮುಂದುವರೆದು ಮಾತನಾಡಿದ ಅವರು ರಾ.ಸೇ.ಯೋ ಸೇವಾ ಮನೋಭಾವ ಬೆಳೆಸುತ್ತದೆ ಎಂದು ಮೊದಲು ನಾವು ನಮ್ಮ ಸಮುದಾಯ, ನಮ್ಮ ಊರುಗಳನ್ನು ನಾವಿರುವ ಪರಿಸರವನ್ನು ಶುದ್ದವಾಗಿರಿಸಿಕೊಳ್ಳೋಣ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀಮತಿ ವಿ.ಜಿ.ಮಹಿಳಾ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ರು ಹಾಗೂ ರಾ.ಸೇ.ಯೋ ನೊಡಲ್ ಅಧಿಕಾರಿಗಳಾದ ಡಾ.ಮಹೇಶ ಗಂವ್ಹಾರ ರಾ.ಸೇ.ಯೋ.ನಡೆದು ಬಂದ ದಾರಿ ಅದರ ಉದ್ದೇಶ ಹಾಗೂ ಮಹತ್ವವನ್ನು ಕುರಿತು ಉಪನ್ಯಾಸ ನೀಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀಮತಿ ಮಹೇಶ್ವರಿ ಹಿರೇಮಠ ವಹಿಸಿಕೊಂಡಿದ್ದರು.

ಇದೇ ಸಂದರ್ಭದಲ್ಲಿ ತರಗತಿ ಪ್ರತಿನಿಧಿಗಳಾಗಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸತ್ಕರಿಸಲಾಯಿತು . ರಾ.ಸೇ.ಯೋ. ಕಾರ್ಯಕ್ರಮಾಧಿಕಾರಿ ಡಾ.ಜ್ಯೋತಿ ಕಾಡಾದಿ ಸ್ವಾಗತಿಸಿದರು .ಕುಮಾರಿ ಲಕ್ಚ್ಮೀ ಬಿರಾದಾರ ವಂದಿಸಿದರು .ಕುಮಾರಿ. ವೈಷ್ಣವಿ ಕೋರಿ ನಿರುಪಿಸಿದರು. ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಬೋಧಕ ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here