ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿರುವ ಜಿಲ್ಲಾ ಉಸ್ತುವಾರಿ ಸಚಿವರು ಅಭಿವೃದ್ಧಿಗೆ ಗಮನ ಹರಿಸಲಿ

0
30

ಕಲಬುರಗಿ: ಇತ್ತಿಚಿಗೆ ಜಿಲ್ಲೆಯ ಉಸ್ತುವಾರಿ ಸಚಿವರು ಕೇವಲ ಆರೋಪ ಮತ್ತು ಪ್ರತ್ಯಾರೋಪಗಳಲ್ಲಿ ತೋಡಗಿಕೊಂಡಿದ್ದಾರೆಯೇ ಎನ್ನುವುದು ಇತ್ತೀಚಿನ ಅವರ ಹೇಳಿಕೆಗಳಿಂದ ತಿಳಿದು ಬರುತ್ತಿವೆ. ಕೂಡಲೇ ಆರೋಪಗಳಿಗೆ ಉತ್ತರಿಸುವ ಬದಲು ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಒತ್ತ ನೀಡಬೇಕು ಎಂದು ವಿಶ್ವಕರ್ಮ ಹೋರಾಟ ಸಮಿತಿಯ ಅಧ್ಯಕ್ಷ ದೇವೇಂದ್ರ ದೇಸಾಯಿಕಲ್ಲೂರ ಒತ್ತಾಯಿಸಿದ್ದಾರೆ.

ಒಂದು ವರ್ಷದಿಂದ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಯಾವುದೇ ಅಭಿವೃದ್ಧಿ ಮಾಡಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ಅನೇಕ ಸಮಸ್ಯೆಗಳು ಇದ್ದರೂ ಯಾವುದೇ ಸಚಿವರು ಗಮನ ಹರಿಸುತ್ತಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಬಿಸಲು ಇದ್ದರು. ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ, ಜಾನುವಾರುಗಳಿಗೆ ನೀರು, ಮೇವಿನ ವ್ಯವಸ್ಥೆ ಮಾಡುವ ಕೆಲಸ ಸರ್ಕಾರದಿರುತ್ತದೆ. ಆದರೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಆರೋಪ ಪ್ರತ್ಯಾರೋಪಗಳಲ್ಲಿ ಕಾಲ ಹರಣ ಮಾಡುತ್ತಿರುವುದು ಎಷ್ಟು ಸರಿ? ವಿರೋಧ ಪಕ್ಷದವರು ಆಡಳಿತ ಪಕ್ಷಗಳಿಗೆ ಟೀಕೆ ಮಾಡುವುದು, ಲೋಪಗಳನ್ನು ಎತ್ತಿ ತೋರಿಸುವದು ಅವರ ಕೆಲಸವಾಗಿದೆ.

Contact Your\'s Advertisement; 9902492681

ಲೋಪಗಳನ್ನು ಸರಿಪಡಿಸಿಕೊಂಡು ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡಬೇಕಾಗಿರುವ ಅಧಿಕಾರದಲ್ಲಿ ಇರುವ ಪಕ್ಷದವರದಾಗಿರುತ್ತದೆ. ಆದರೆ ವಿರೋಧ ಪಕ್ಷಗಳ ಮಾತಿಗೆ ಪ್ರತ್ಯೂತ್ತರ ನೀಡುವುದರಲ್ಲಿಯೇ ಸಚಿವ ಕಾಲ ಹರಣ ಮಾಡುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇದರಿಂದಾಗಿ ಅಭಿವೃದ್ಧಿಯ ಕಡೆ ಹೆಚ್ಚಿನ ಒತ್ತ ನೀಡುವುದ ಯಾವಾಗ? ಜನರ ಸಮಸ್ಯಗಳಗೆ ಸ್ಪಂಧಿಸುವದು ಯಾವಾಗ? ಎನ್ನುವ ಪ್ರಶ್ನೆಗಳು ಮತದಾರರಲ್ಲಿ ತಾನಾಗಿಯೇ ಬರುತ್ತದೆ.

ಕಲಬುರಗಿ ಜಿಲ್ಲೆಯಲ್ಲಿ ಬಹುತೇಕ ಪ್ರಮುಖ ರಸ್ತೆಗಳು ಅಲ್ಲಲ್ಲಿ ಡಾಂಬರು ಕಿತ್ತಿ ಹೋಗುತ್ತಿವೆ. ಇನ್ನೂ ಮಳೆಗಾಲ ಸಮೀಪಿಸುತ್ತಿದೆ. ಹಾಳಾದ ರಸ್ತೆಗಳು ಚರಂಡಿಗಳು ಈಗಲೇ ದುರಸ್ಥಿ ಮಾಡಿದರೆ ಮಳೆಗಾಲದಲ್ಲಿ ಜನರಿಗೆ ಆಗುವ ತೊಂದರೆಗಳನ್ನು ತಪ್ಪಿಸಬಹುದಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಪ್ರಿಯಾಂಕ್ ಖರ್ಗೆಯವರು ಒಂದು ದಿನವು ಜನರ ಸಮಸ್ಯೆಗಳ ಕುರಿತು ಚಿಂತನೆ ಮಾಡಿಲಿಲ್ಲ. ಕಲಬುರಗಿ ನಗರದಲ್ಲಿ ಅನೇಕ ಚರಂಡಿಗಳ ಕಾಮಗಾರಿ ಅರ್ಧಕ್ಕೆ ನಿಂತಿವೆ.

ಅನೇಕ ಬಡವಾಣಗಳಲ್ಲಿ ಮಳೆ ನೀರು ಮನೆಯೊಳಗೆ ಬರುತ್ತದೆ. ಇಂತಹ ಅನೇಕ ಸಮಸ್ಯಗಳಿಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಮತದಾನ ಮುಗಿದ ಮೇಲೆ ಅಭಿವೃದ್ಧಿ ಕಾರ್ಯ ಮಾಡಬಹುದು ಎಂದು ಚುನಾವಣಾ ಆಯೋಗ ಸ್ಪಷ್ಟ ಪಡಿಸಿದೆ. ಆದರೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಬೆಂಗಳೂರು ಬಿಟ್ಟು ಕಲಬುರಗಿಗೆ ಅತೀ ವಿರಳವಾಗಿ ಬಂದು ಹೋಗುತ್ತಿರುವುದು ಸಹಜವಾಗಿ ಜನರಲ್ಲಿ ಆಕ್ರೋಶಕ್ಕೆ ಕಾರಣವಾಗುತ್ತದೆ.

ಮಳೆಗಾಳ ಆರಂಭ ಆಗುವುದಕ್ಕೂ ಮುಂಚೆ ಕೂಡಲೆ ಜಿಲ್ಲೆಯಲ್ಲಿ ನೆರೆಯಿಂದಾಗಿ ಆಗುವ ತೊಂದರೆಗಳ ಕುರಿತು ಮಾಹಿತಿ ಪಡೆದುಕೊಳ್ಳಲಿ. ಅಭಿವೃದ್ಧಿ ಕಡೆ ಹೆಚ್ಚಿನ ಒಲವು ನೀಡಲಿ ಎಂದು ದೇವೇಂದ್ರ ದೇಸಾಯಿಕಲ್ಲೂರ ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here