ಕಲಬುರಗಿ; ನಗರದ ಕಾಳೆ ಲೇಔಟ್ ನಲ್ಲಿರುವ ದಿ ಆಟ೯ ಇಂಟಿಗ್ರೇಶನ ಚಿತ್ರಕಲಾ ಮಹಾವಿದ್ಯಾಲಯದ ಅಂಕುರ ಆಟ೯ ಗ್ಯಾಲರಿಯಲ್ಲಿ ಕನ್ನಡ ನಾಡಿನ ಖ್ಯಾತ ಚಿಂತಕರು, ಬರಹಗಾರ ಹಾಗೂ ಖ್ಯಾತ ಹಿರಿಯಚಿತ್ರಕಲಾವಿದ ಡಾ. ಡಿ,ಎ,ಉಪಾದ್ಯ ಅವರು ಲಲಿತಕಲೆಗಳು ಮನುಷ್ಯನ ಭಾವನೆಗಳನ್ನು ಅರಳಿಸುತ್ತವೆ. ಕಲೆಗಳಲ್ಲಿ ಅನೇಕ ಪ್ರಕಾರಗಳಿವೆ. ಅವುಗಳೆಂದರೆ ಪ್ರದಶ೯ನ ಕಲೆಗಳು, ಔಪಯೋಗಿಕ ಕಲೆಗಳು, ಪ್ರಚಾರಕ ಕಲೆಗಳು ಲಲಿತಕಲೆಗಳು ಹಾಗೇ ವಾಸ್ತುಶಿಲ್ಪ ಲಲಿತಕಲೆಗಳಲ್ಲಿ ಚಿತ್ರಕಲೆ, ಶಿಲ್ಪಕಲೆ, ಸಂಗೀತ ಹಾಗೂ ಸಾಹಿತ್ಯ ಕಲೆಗಳು ಸೇರಿವೆಯೆಂದು ಹೇಳಿದರು.
“ದೃಶಕಲೆಗಳ ಒಂದು ತೌಲನಿಕ ಅಧ್ಯಯನ “ ಎಂಬ ವಿಷಯದ ಉಪನ್ಯಾಸದಲ್ಲಿ ಭಾಗವಹಿಸಿ ಪ್ರದಶ೯ನ ಉದ್ಘಾಟಿಸಿ ಅನಿಸಿಕೆಯನ್ನು ವ್ಯಕ್ತಪಡಿಸಿದರು, ಮೈಸೂರಿನ ಪ್ರಖ್ಯಾತ ಚಿತ್ರಕಲಾ ಮಹಾವಿದ್ಯಾಲಯ ಕಾವಾದಲ್ಲಿ ಸೂಮಾರು ಮೂರು ದಶಕಗಳಕಾಲ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಅನೇಕ ಕಲಾಸಾಹಿತ್ಯ ಕೃತಿಗಳನ್ನುರಚಿಸಿದ್ದಾರೆ, ಉಪನ್ಯಾಸದನಂತರ ವಿದ್ಯಾಥಿ೯ಗಳ ಪ್ರಶ್ನೆಗಳಿಗೆ ಸಮಪ೯ಕವಾಗಿ ಉತ್ತರಗಳನ್ನು ನೀಡಿ ವಿದ್ಯಾಥಿ೯ಗಳನ್ನು ಹುರಿದುಂಬಿಸಿದರು.
ನಾಡಿನ ಕಲಾವಿದರು, ಮಹಾವಿದ್ಯಾಲಯದ ವಿದ್ಯಾಥಿ೯ಗಳು ಭಾಗವಹಿಸಿದ್ದರು. ಪ್ರಾಂಶುಪಾಲ ಎಂ,ಹೆಚ್,ಬೆಳಮಗಿ ಅಧ್ಯಕ್ಷತೆವಹಿಸಿದ್ದರು.
ಮುಖ್ಯ ಅತಿಥಿ ಹಿರಿಯ ಚಿತ್ರಕಲಾವಿದ ಮೋಹನ ಸೀತನೂರ ವೇದಿಕೆ ಮೇಲೆ ಇದ್ದರು. ಬಿ,ಎನ್,ಪಾಟೀಲ ಸ್ವಾಗತಿಸಿದರು.
ಡಾ ಅಶೋಕ ಶೆಟಗಾರ ನಿರೂಪಿದರು. ಪರಶುರಾಮ,ಪಿ. ಬಿ,ವಿ,ಕಮಾಜಿ. ನಿಂಗಪ್ಪಾ,ಡಿ,ಕೇರಿ. ಶರಣಗೌಡಪಾಟೀಲ, ಆನಂದ ಸಂಗೋಳಗಿ, ವೀರಪ್ಪರಾಜೋಳಿ ಹಾಗೂ ಮಹಾನಂದ ಮುಂತಾದವರು ಇದ್ದರು.