ಕಲ್ಯಾಣ ಕರ್ನಾಟಕ ಭಾಗದ ನೇಕಾರರನ್ನು ನಿರ್ಲಕ್ಷಿಸಿದ ಸರ್ಕಾರಗಳ ನೀತಿಗೆ ಖಂಡನೆ

0
110

ಕಲಬುರಗಿ; ಆನಂದ ನಾರೋಣಿ, ಅಧ್ಯಕ್ಷರು, ನವ ಕಲ್ಯಾಣ ಕರ್ನಾಟಕ ಛಾಯಾಗ್ರಾಹಕ ಸೇವಾ ಸಂಘ, ಸಗರ ನಾಡಿನಲ್ಲಿ ಜನಿಸಿ, ವಿಶ್ವವೇ ತಲೆ ಬಾಗಿಸುವಂತಹ ವಚನ ಸಾಹಿತ್ಯ ಹಾಗೂ ಈ ಭಾಗದ ನಶಿಸಿ ಹೋಗುತ್ತಿರುವ ಕಲೆ ಯನ್ನು ರಕ್ಷಿಸಿ, ಜಗತ್ತಿಗೆ ಪರಿಚಯಿಸುವ ಕಾರ್ಯ ಮಾಡುತ್ತಿರುವ ಮತ್ತು ನೀಡುತ್ತಿರುವ ನೇಕಾರ ಸಮುದಾಯವನ್ನು ಕಳೆದ ಎರಡು ದಶಕಗಳಿಂದ ನಿರ್ಲಕ್ಷ ಮಾಡುತ್ತಿರುವ ಆಳಿದ ಎಲ್ಲಾ ಸರಕಾರದ ನಿಲುವಿಗೆ ಉಗ್ರವಾಗಿ ಖಂಡಿಸುವ ಶಕ್ತಿಯು ಕೂಡಾ ಇರದ ಏಕೈಕ ಸಮಾಜವೇ ನೇಕಾರ ಸಮಾಜ ಎಂದು ಖ್ಯಾತ ಹವ್ಯಾಸಿ ಕಲಾವಿದ ಡಾ. ಎಮ್. ಡಿ. ಮಿಣಜಗಿ ತಮ್ಮ ಮನದಾಳದ ಮಾತು ಹೇಳಿದರು.

ಸಂದರ್ಭದಲ್ಲಿ ನವ ಕಲ್ಯಾಣ ಕರ್ನಾಟಕ ಛಾಯಾಗ್ರಾಹಕ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡ ಗೃಹ ಸನ್ಮಾನ ಕಾರ್ಯಕ್ರಮದಲ್ಲಿ, ಮೊದಲಿಗೆ, ಸಂಘದ ಕಾರ್ಯದರ್ಶಿ ರಾಜು ಕೋಷ್ಟಿ ಎಲ್ಲರನ್ನೂ ಸ್ವಾಗತಿಸಿದರು.

Contact Your\'s Advertisement; 9902492681

ಅತಿಥಿಯಾಗಿ ಪಾಲ್ಗೊಂಡ ಸದ್ಗುರು ಶ್ರೀ ದಾಸಿಮಯ್ಯ ಕಾನೂನು ಸೇವಾ ಸಂಘದ ಸಂಸ್ಥಾಪಕ ಅಧ್ಯಕ್ಷರು ಹಾಗೂ ಹೈಕೋರ್ಟ್ ವಕೀಲರಾದ ಶಿವಲಿಂಗಪ್ಪಾ ಅಷ್ಟಗಿ ಯವರು ಕಲಾವಿದ ಡಾ. ಎಮ್. ಡಿ. ಮಿಣಜಗಿ ಮತ್ತು ಶ್ರೀಮತಿ ದಾಕ್ಷಯಣಿ ದಂಪತಿ ಗಳಿಬ್ಬರನ್ನೂ ನೇಕಾರ ಬಳಗದ ವತಿಯಿಂದ ಸನ್ಮಾನಿಸಿ, ಮಾತನಾಡುತ್ತಾ, ನೇಕಾರರ ಸಂತತಿ ನಶಿಸಿ ಹೋಗುತ್ತಿರುವ ಈ ಕಾಲ ಘಟ್ಟದಲ್ಲಿ ಪ್ರೋತ್ಸಾಹಿಸುವ ಕಾರ್ಯ ಮಾಡಬೇಕಾಗಿ ಬಂದಿದೆ, ಕಾರಣ, ಸಮಸ್ತ ಮಾನವ ಕುಲಕೋಟಿಗೆ ವಸ್ತ್ರ ನೀಡಿದ ಜನಾಂಗವನ್ನು ಬೇರೆ ಬೇರೆ ಸಮುದಾಯಗಳು ಕೂಡಾ ಎಲ್ಲಾ ರೀತಿಯಲ್ಲಿ ಸಹಕರಿಸುವ ಕಾರ್ಯಗಳು ಆಗಬೇಕು ಎಂದು ತಿಳಿಸಿದರು.

ಈ ಗೃಹ ಸನ್ಮಾನ ಕಾರ್ಯಕ್ರಮದಲ್ಲಿ ಖ್ಯಾತ ಇತಿಹಾಸ ಕಲೆ, ಛಾಯಾಗ್ರಾಹಕರಾದ ನಾರಾಯಣ ಜೋಷಿ, ಜಿಲ್ಲಾ ನೇಕಾರ ಪಟ್ಟಸಾಲಿ ಸಮಾಜದ ಹಿರಿಯರಾದ ಸುಭಾಷ್ ಪ್ಯಾಟಿ, ಜಿಲ್ಲಾ ನೇಕಾರ ದೇವಸಾಲಿ ಸಮಾಜದ ಖ್ಯಾತ ಉದ್ಯಮಿಗಳಾದ ಮಲ್ಲಿನಾಥ ಬಡ್ದುರ, ಜಿಲ್ಲಾ ನೇಕಾರ ತೊಗಟವೀರ ಸಮಾಜದ ಶ್ರೀನಿವಾಸ ಬಲಪೂರ, ಜಿಲ್ಲಾ ನೇಕಾರ ಹಟಗಾರ ಸಮಾಜ ಸಂಚಾಲಕ ನ್ಯಾಯವಾದಿ ಜೇನವೆರಿ ವಿನೋದ ಕುಮಾರ, ಶರಣ ಪ್ರಸಾದ, ಚಂದ್ರಕಾಂತ ನಾಗನಹಳ್ಳಿ, ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here