ಶಿಕ್ಷಣದಿಂದ ಜಗತ್ತಿಗೆ ಬೆಳಕು; ರಾಠೋಡ

0
122

ಕಲಬುರಗಿ: ಮಾಹಗಾಂವ-ಜ್ಯೋತಿ ಒಂದು ಮನೆಯನ್ನು ಬೆಳಗಿದರೆ ಶಿಕ್ಷಣ ಇಡಿ ಜಗತ್ತನ್ನೇ ಬೆಳಗುತ್ತದೆ ಎಂದು ಜಿಲ್ಲಾ ಕೃಷಿ ತರಬೇತಿ ಅಧಿಕಾರಿಗಳಾದ ಡಾ ಅನೀಲಕುಮಾರ ರಾಠೋಡ ರವರು ಬುದ್ದವಾಸಿ ಶ್ರೀಮತಿ ಕಾಶಮ್ಮ ಗಂಜಗಿರಿ ರವರ 11 ನೇ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಿತು.

ಈ ವೇಳೆ ಚಿಗುರು ಅನಾಥಾಶ್ರಮದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ತಾಯಿ ತಂದೆ ಇಲ್ಲದವರು ಅನಾಥರಲ್ಲಾ ತಾಯಿ ತಂದೆ ಮಾತು ಕೇಳದೆ ಅಲೆದಾಡುವ ಮಕ್ಕಳೇ ನಿಜವಾದ ಅನಾಥರು ಆದ್ದರಿಂದ ತಾವುಗಳು ಎದೆಗುಂದದೆ ಸದೃಢ ಮನಸ್ಸನಿಂದ ಶಿಕ್ಷಣ ಪಡೆದು ಮುಂದೆ ಬಂದು ತಮ್ಮಂತ ಅನೇಕ ಮಕ್ಕಳಿಗೆ ಆಸರೆಯಾಗಬೇಕೆಂದು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿದರು.

Contact Your\'s Advertisement; 9902492681

ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಸುಭಾಷ್ ಪಾರಾ ಯುವ ಉದ್ದಿಮೇದಾರರಾದ ಸಿದ್ದು ಡಿಗ್ಗಿ ಶಿಕ್ಷಕರಾದ ಪರಮೇಶ್ವರ ಗಂಜಗಿರಿ ಮುಖ್ಯಗುರುಗಳಾದ ಶಾಂತಪ್ಪ ಸಿಡ್ಲ್ ಮೌಂಟ್ ಕಾಲೇಜೀನ ಪ್ರಾಂಶುಪಾಲರಾದ ಹಾಗೂ ಸಾಹಿತಿಗಳಾದ ಮಾಹದೇವ ಬಡಾ ಕಾಶಿರಾಂ ದೇಗಲ್ಮಡಿ ಮಾತನಾಡಿದರು.

ಮುಖ್ಯಗುರುಗಳಾದ ಅಶೋಕ ಹೋಸಮನಿ ಶ್ರೀ ಸಂಜೀವಿನಿ ವೃದ್ದಾಶ್ರಮ ಮತ್ತು ಅನಾಥಾಶ್ರಮದ ಸಂಸ್ಥಾಪಕರಾದ ಶರಣು ಕಮಠಾಣ ಶ್ರೀಮತಿ ತುಳಜಮ್ಮ ಗಂಜಗಿರಿ ಶ್ರೀಮತಿ ಕವಿತಾ ವಿ ಚಿಮ್ಮನಕಟ್ಟಿ ಶ್ರೀಮತಿ ಸುಜಾತ ಗಂಜಗಿರಿ ನಿತೀಷವರ್ಧನ ಪರಿವಾರದ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here