ಜಗದಾಂಬಾ ಶಾಲೆ ವಿರುದ್ಧ ಕ್ರಮಕ್ಕೆ ಆಗ್ರಹ

0
23

ಕಲಬುರಗಿ: ತಾಲೂಕಿನ ಖಣದಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಇಟಗಾ ಕೆ ಗ್ರಾಮದ ಸರ್ಕಾರಿ ‌ಅನುದಾನಿತ ಜಗದಾಂಬಾ ಕಿರಿಯ ಪ್ರಾಥಮಿಕ ಶಾಲೆಯು ಮಕ್ಕಳ ಜೀವನದ ಜೊತೆಗೆ ಚೆಲ್ಲಾಟವಾಡುತ್ತಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ಗುಂಡು ಚವ್ಹಾಣ ಆರೋಪಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಟಿ ‌ನಡೆಸಿ ಮಾತನಾಡಿದ ಅವರು, ಇಟಗಾ ಕೆ ಗ್ರಾಮದ ಜಗದಾಂಬಾ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 30 ರಿಂದ 40 ಜನ ವಿದ್ಯಾರ್ಥಿಗಳು ಓದುತ್ತಿದ್ದು, ಶಾಲೆಯಲ್ಲಿ ಕೇವಲ ಒಬ್ಬ ಶಿಕ್ಷಕ ಮಾತ್ರ ಇದ್ದಾರೆ. ಹೀಗಾಗಿ ಸರಿಯಾಗಿ ತರಗತಿ‌ ನಡೆಸಲಾಗುತ್ತಿಲ್ಲ. ಪೋಷಕರು ಮಕ್ಕಳನ್ನು ಬೇರೆ ಶಾಲೆಗೆ ಸೇರ್ಪಡೆ ‌ಮಾಡುತ್ತಿದೆ ನಮಗೆ ಟಿಸಿ ಕೋಡಿ ಎಂದರು ಕೊಡುತ್ತಿಲ್ಲ.‌ ಅಲ್ಲದೆ, ಶಾಲೆಯ ಕೋಣೆಯಲ್ಲಿ ಮಾಜಿ ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಎತ್ತುಗಳಿಗೆ ಬೇಕಾಗುವ ಮೇವು ಶೇಖರಣೆ ಮಾಡಿದ್ದಾರೆ. ಇದನ್ನು ಕೇಳಲು ಹೋದವರ ಮೇಲೆಯೆ ದಬ್ಬಾಳಿಕೆ ಶೋಷಣೆ ಮಾಡಲಾಗುತ್ತಿದೆ ಎಂದು ದೂರಿದರು.

Contact Your\'s Advertisement; 9902492681

ಕೊಡಲೆ ಸಂಭಂದಿಸಿದ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಾಸಕರು ಈ ಕುರಿತು ಕ್ರಮ ಜರುಗಿಸಿ ಶಾಲೆಯನ್ನು ಬಂದ್ ಮಾಡಿಸುವುದರ ಜೊತೆಗೆ ಗ್ರಾಮದಲ್ಲಿ ಸರ್ಕಾರಿ ‌ಶಾಲೆ ಪ್ರಾರಂಭಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದರು.

ಸುದ್ದಿಗೋಷ್ಟಿಯಲ್ಲಿ ಇಟಗಾ ಕೆ ಗ್ರಾಮದ ಮಹೇಶ್ ಹೂಗಾರ, ರವಿ ರಾಠೋಡ್, ಪಾಂಡು ರಾಠೋಡ್, ದತ್ತಾತ್ರೇಯ‌ ಸೇರಿದಂತೆ ‌ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here