ಜೇವರ್ಗಿ: ಜೇವರ್ಗಿ ಸರಕಾರಿ ಶಾಲೆಯ ಅವ್ಯವಸ್ಥೆ ಸರಿಪಡಿಸಲು ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾ ಇದರ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮುಬೀನ್ ಅಹ್ಮದ್ ಆಗ್ರಹಿಸಿದ್ದಾರೆ.
ಇಲ್ಲಿನ ಮುಖ್ಯ ರಸ್ತೆಯಲ್ಲಿರುವ ಸರಕಾರಿ(ಕನ್ಯಾ) ಹಿರಿಯ ಪ್ರಾಥಮಿಕ ಶಾಲೆಯು ಸರಿಯಾದ ವ್ಯವಸ್ಥೆಯಿಲ್ಲದೆ ಶೋಚನೀಯ ಪರಿಸ್ಥಿತಿಯಲ್ಲಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಹಾಗೂ ಆಡಳಿತಗಾರರು ಗಮನಹರಿಸಬೇಕಾಗಿದೆ. ಯಾಕೆಂದರೆ ಕಳೆದ ಹದಿನೈದು ವರ್ಷಗಳಿಂದ ಈ ಶಾಲೆಯ ಹಾಗೂ ಆವರಣದ ಸುವ್ಯವಸ್ಥೆ ಯ ಬಗ್ಗೆ ತೀರಾ ಆಡಳಿತಗಾರರು ಗಮನ ಹರಿಸದೆ ತೀರಾ ನಿರ್ಲಕ್ಷ್ಯ ವಹಿಸಲಾಗಿದೆ. ಮಳೆಗಾಲ ಬಂದರೆ ಸಾಕು ತರಗತಿಯಲ್ಲಿ ನೀರು ಸೋರಿಕೆಯಾಗಲು ಪ್ರಾರಂಭವಾಗುತ್ತದೆ.
ಆವರಣವೂ ನೀರಿನಿಂದಾವೃತವಾಗಿ ಅಪಾಯಕಾರಿ ಸ್ಥಿತಿ ನಿರ್ಮಾಣವಾಗುತ್ತದೆ. ವಿಧ್ಯಾರ್ಥಿಗಳ ಜೀವಕ್ಕೂ ಅಪಾಯವಾಗುವ ಸಾಧ್ಯತೆಯಿದೆ. ಸಂಭಾವ್ಯ ಅನಾಹುತದಿಂದ ತಪ್ಪಿಸಲು ಆಡಳಿತಗಾರರು ಈ ಶಾಲೆಗೆ ತುರ್ತಾಗಿ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಬೇಕೆಂದು.
ಅವರು ಮಾತನಾಡುತ್ತಾ ಇದು ಬಹಳ ಹಳೆಯ ಪುರಾತನ ಶಾಲೆಯಾಗಿದ್ದು ಲಕ್ಷಾಂತರ ವಿಧ್ಯಾರ್ಥಿಗಳು ಇಲ್ಲಿಂದ ಶಿಕ್ಷಣ ಪಡೆದು ಉನ್ನತ ಉದ್ಯೋಗದಲ್ಲಿದ್ದಾರೆ. ಸರ್ಕಾರಿ ಹುದ್ದಗಳಲ್ಲೂ ಇದ್ದಾರೆ. ಸಂಬಂಧ ಪಟ್ಟವರು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದರಿಂದ ಅಡುಗೆ ಕೋಣೆಯು ಕುಸಿಯುವ ಹಂತದಲ್ಲಿದೆ. ನಿಂತ ನೀರಿನಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗವೂ ಬರುವ ಸಾಧ್ಯತೆಯಿದೆ.
ಮಕ್ಕಳು ಶಿಕ್ಷಕರು ಜೀವಭಯದಿಂದ ಓಡಾಡಬೇಕಾದ ಪರಿಸ್ಥಿತಿ ಉದ್ಭವಿಸಿದೆ. ಶಿಕ್ಷಣದ ಮಹತ್ವದ ಬಗ್ಗೆ ಮಾತನಾಡುವಾಗಶಾಲೆಯ. ಶೈಕ್ಷಣಿಕ ಸಂಸ್ಥೆಗಳ ಉಳಿವಿಗಾಗಿ ಅಭಿವೃದ್ಧಿಗಾಗಿ ಶ್ರಮಿಸಬೇಕಾಗಿದೆ. ಇದಕ್ಕೆ ಸಂಬಂಧಿಸಿದ ಆಡಳಿತಗಾರರು ಈ ಬಗ್ಗೆ ಮುತುವರ್ಜಿಯಿಂದ ಪರಿಶೀಲಿಸಿ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಬೇಕೆಂದು ಅವರು ಒತ್ತಾಯಿಸಿದರು.