ಸೇಡಂ: ಪಟ್ಟಣದ ಹೃದಯ ಭಾಗದಿಂದ ಬಿರ್ಲಾ ಒಡೆತನದ ಮೆ. ವಾಸವದತ್ತಾ ಸಿಮೆಂಟ್ ಕಾರ್ಖಾನೆಗೆ ಹಾದು ಹೋಗಿರುವ ರೈಲು ಹಳಿ ವಿರುದ್ಧ ಸ್ಥಳೀಯರು ಭುಗಿಲೆದ್ದಿದ್ದಾರೆ. ಪ್ರತಿನಿತ್ಯ ಒಂದಿಲ್ಲೊAದು ರೀತಿಯಲ್ಲಿ ಕಾರ್ಖಾನೆಯಿಂದ ಸಮಸ್ಯೆಗೆ ತುತ್ತಾಗುತ್ತಲೆ ಬಂದಿದ್ದು, ಈಗ ಹೋರಾಟದ ಹಾದಿ ತುಳಿದಿದ್ದಾರೆ.
ವಾಸವದತ್ತಾ ಸಿಮೆಂಟ್ ಕಾರ್ಖಾನೆಯ ರೈಲು ಹಳಿಯಲ್ಲಿ ಸಂಚರಿಸುವ ರೈಲುಗಳ ಸಮಯ ಬದಲಾಯಿಸುವಂತೆ ಒತ್ತಾಯಿಸಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಸೇಡಮ್ ಜನಹಿತ ರಕ್ಷಣಾ ಸಮಿತಿ ವತಿಯಿಂದ ಸಹಾಯಕ ಆಯುಕ್ತರ ಮುಖಾಂತರ ಮನವಿ ಪತ್ರ ಸಲ್ಲಿಸಲಾಗಿದೆ.
ಶಾಲಾ ಕಾಲೇಜು ಸಮಯದಲ್ಲೆ ಹೆಚ್ಚಿನ ರೈಲು ಸಂಚಾರ ಮಾಡಲಾಗುತ್ತಿದೆ.
ಒಂದು ರೈಲು ಪಟ್ಟಣದ ಹೃದಯಭಾಗದಿಂದ ಹಾದು ವಾಸವದತ್ತಾ ಸಿಮೆಂಟ್ ಕಾರ್ಖಾನೆ ಸೇರಬೇಕಾದರೆ ಕನಿಷ್ಠ ೩೦ ನಿಮಿಷ ಹಿಡಿಯುತ್ತಿದೆ. ಇದರಿಂದ ಪಟ್ಟಣದ ಒಳಭಾಗದಲ್ಲಿರುವ ಆಸ್ಪತ್ರೆಯ ರೋಗಿಗಳ ಸಾವು ನೋವಿನ ಪ್ರಶ್ನೆಯಾಗಿ ಉಲ್ಬಣಿಸಿದೆ ಜೊತೆಗೆ ಸರಕಾರಿ ಕಚೇರಿಗಳು, ಪ್ರಮುಖ ಮಾರುಕಟ್ಟೆ ಪ್ರದೇಶ, ಪಟ್ಟಣದ ಭಾಗಶಃ ನಿವಾಸಿಗಳು ರೈಲು ಹಳಿಯಿಂದ ತೊಂದರೆಗೆ ಒಳಗಾಗಿದ್ದಾರೆ.
ಕೂಡಲೇ ರೈಲು ಸಂಚಾರವನ್ನು ಹಗಲಿನಲ್ಲಿ ನಿರ್ಬಂಧಿಸಿ, ರಾತ್ರಿ ೧೧ ಗಂಟೆಯಿAದ ಬೆಳಗ್ಗೆ ೫ ಗಂಟೆವರೆಗೆ ಮಾತ್ರ ಸಂಚರಿಸಲು ರೈಲ್ವೆ ಇಲಾಖೆ ಅನುಮತಿ ನೀಡಬೇಕು ಇಲ್ಲವಾದಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಹಾಗೂ ರೈಲ್ ರೋಕೊ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಸಲಾಗಿದೆ.
ಸೇಡಂ ಪಟ್ಟಣದ ಮುಖ್ಯ ರಸ್ತೆ, ಕೆಇಬಿ ಕಾಲೋನಿ, ವೆಂಕಟೇಶ್ವರ ನಗರ ಈ ಮೂರು ಭಾಗಗಳಲ್ಲಿ ರೈಲು ಸಂಚರಿಸುತ್ತದೆ. ಪಟ್ಟಣದ ಒಂದು ಭಾಗದಲ್ಲಿ ಸರಕಾರಿ ಆಸ್ಪತ್ರೆ, ರೈಲು ನಿಲ್ದಾಣ, ಸರಕಾರಿ ಕಿರಿಯ, ಹಿರಿಯ, ಪ್ರೌಢ ಶಾಲೆಗಳು, ಸರಕಾರಿ ಹಾಗೂ ಖಾಸಗಿ ಪಿಯು ಮತ್ತು ಡಿಗ್ರಿ ಕಾಲೇಜುಗಳು, ಸರಕಾರಿ ಕಚೇರಿಗಳು, ಮಿನಿ ವಿಧಾನ ಸೌಧ, ಪ್ರಮುಖ ವ್ಯಾಪಾರಗಳು, ತರಕಾರಿ ಮಾರುಕಟ್ಟೆ ಹೀಗೆ ಹತ್ತು ಹಲವಾರು ಸ್ಥಳಗಳು ಇವೆ. ಅಲ್ಲದೆ ಸೇಡಂ ಪಟ್ಟಣದಲ್ಲಿ ವಾಸಿಸುವ ಶೇ. ೭೦% ಜನ ರೈಲ್ವೆ ಹಳಿಯ ಒಂದೆಡೆಯಲ್ಲೆ ವಾಸಿಸುತ್ತಾರೆ. ಇನ್ನೊಂದೆಡೆ ಬಸ್ ನಿಲ್ದಾಣ, ಹೊಸ ಹೊಸ ಬಡಾವಣೆಗಳು ಇವೆ.
ಹಗಲಲ್ಲಿ ಅಂದರೆ ಶಾಲಾ ಕಾಲೇಜು ಹಾಗೂ ಸರಕಾರಿ ಕಚೇರಿಗಳು ಪ್ರಾರಂಭವಾಗುವ ಸಂದರ್ಭದಲ್ಲಿ ವಾಸವದತ್ತಾ ಸಿಮೆಂಟ್ ಕಾರ್ಖಾನೆಗೆ ರೈಲು ನಿಲ್ದಾಣದಿಂದ ಹಾಗೂ ಕಾರ್ಖಾನೆಯಿಂದ ರೈಲು ನಿಲ್ದಾಣದ ಕಡೆಗೆ ಅನೇಕ ಗೂಡ್ಸ್ ರೈಲುಗಳು ಮುಖ್ಯ ರಸ್ತೆಯಲ್ಲಿನ ರೈಲ್ವೆ ಗೇಟ್, ಕೆಇಬಿ ಕಾಲೋನಿ ರೈಲ್ವೆ ಗೇಟ್ ಹಾಗೂ ವೆಂಕಟೇಶ್ವರ ನಗರ ರೈಲ್ವೆ ಗೇಟ್ ಮಾರ್ಗವಾಗಿ ಸಂಚರಿಸುವದರಿAದ ಸಾರ್ವಜನಿಕರಿಗೆ ತೀವ್ರ ತೊಂದರೆ ಎದುರಾಗುತ್ತದೆ.
ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಸಮಯಕ್ಕೆ ಸರಿಯಾಗಿ ತೆರಳಲು ಆಗದಂತಾಗಿದೆ. ಇದರಿಂದ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಸರಕಾರಿ ಕಚೇರಿಗಳಿಗೆ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ತಲುಪಲು ಆಗದ ಕಾರಣ ಸಾರ್ವಜನಿಕರ ಕೆಲಸ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತಿವೆ.
“ಸರಿಯಾದ ಸಮಯಕ್ಕೆ ರೋಗಿಗಳು ಆಸ್ಪತ್ರೆಗೆ ತೆರಳಲು ಸಾಧ್ಯವಾಗದೆ ಸಾವು ನೋವುಗಳಾಗುತ್ತಿವೆ.” ಇನ್ನೊಂದೆಡೆ ತುರ್ತು ಪರಿಸ್ಥಿತಿಯಲ್ಲಿ ಜಿಲ್ಲಾಸ್ಪತ್ರೆಗೆ ರೋಗಿಗಳನ್ನು ಅಂಬುಲೆನ್ಸ್ ಮೂಲಕ ಸಾಗಿಸುವಾಗ ಗೂಡ್ಸ್ ರೈಲು ಸಂಚರಿಸಿದ ಕಾರಣ ಜೀವಹಾನಿಯಾಗುವ ಸಂಭವಗಳು ಕಂಡುಬAದಿವೆ.
ಬಿರ್ಲಾ ಒಡೆತನದ ವಾಸವದತ್ತಾ ಸಿಮೆಂಟ್ ಕಾರ್ಖಾನೆಗೆ ಕಲ್ಪಿಸಿರುವ ರೈಲು ಸೌಕರ್ಯ ಕೇವಲ ಕಾರ್ಖಾನೆಯವರಿಗೆ ಮಾತ್ರ ವರವಾಗಿದ್ದು, ಸಾರ್ವಜನಿಕರ ಜೀವನಕ್ಕೆ ಶಾಪವಾಗಿ ಕಾಡುತ್ತಿದೆ. ರೈಲ್ವೆ ಹಳಿ ಸಂಪೂರ್ಣವಾಗಿ ಅವೈಜ್ಞಾನಿಕವಾಗಿದ್ದು, ಇದರಿಂದಾಗುತ್ತಿರುವ ಅನಾಹುತಗಳಿಗೆ ಸರಕಾರಗಳೇ ಹೊಣೆ ಎಂದರೂ ತಪ್ಪಾಗಲಾರದು. ಜೂನ್ ೩೦ ಒಳಗಾಗಿ ಮೆ|| ವಾಸವದತ್ತಾ ಸಿಮೆಂಟ್ ಕಾರ್ಖಾನೆಗೆ ಕಲ್ಪಿಸಿರುವ ರೈಲು ಸಂಚಾರ ವ್ಯವಸ್ಥೆಯನ್ನು ತಡೆಹಿಡಿಯಬೇಕು ಮತ್ತು ರಾತ್ರಿ ೧೧ ಗಂಟೆಯಿAದ ಬೆಳಗ್ಗೆ ೫ ಗಂಟೆಯವರೆಗೆ ಮಾತ್ರ ಗೂಡ್ಸ್ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಬೇಕು ಇಲ್ಲವಾದಲ್ಲಿ ನಂತರ ಬೃಹತ್ ಸಾರ್ವಜನಿಕ ರೈಲು ತಡೆ” ಮತ್ತು “ಆಮರಣಾಂತ ಉಪವಾಸ ಸತ್ಯಾಗ್ರಹ” ಹಮ್ಮಿಕೊಳ್ಳಲಾಗುವುದು ಎಂದುನ ಒತ್ತಾಯಿಸಲಾಗಿದೆ.
ಈ ಸಮಯದಲ್ಲಿ ನಮೋ ಬುದ್ಧ ಸೇವಾ ಕೇಂದ್ರದ ಅಧ್ಯಕ್ಷ ರಾಜು ಕಟ್ಟಿ, ಸಮಾಜ ಸೇವಕ ಅನಂತ ದೇಶಕ, ಕೋಲಿ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನ ಮೆಕ್ಯಾನಿಕ್, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಸಂಘದ ಅಧ್ಯಕ್ಷ ವಿಜಯಕುಮಾರ ಸೂರವಾರ, ವಕೀಲರ ಸಂಘದ ಕಾರ್ಯದರ್ಶಿ ವಸಂತ ಪೂಜಾರಿ, ಉದ್ಯಮಿ ಬಾಬುರಾವ ಮಿಸ್ಕಿನ್, ದತ್ತಾತ್ರೇಯ ಐನಾಪೂರ, ಸುನೀಲಕುಮಾರ ಕೊಳ್ಳಿ, ಲಕ್ಷö್ಮಣ ಭೋವಿ, ವಕೀಲ ಉದಯಕುಮಾರ ಹಾಗೂ ಸಾಮಾಜಿಕ ಕಾರ್ಯಕರ್ತ, ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಶಿವಕುಮಾರ ಅಪ್ಪಾಜಿ ಇದ್ದರು.
ಒಂದೇ ಆರ್.ಟಿ.ಐ. ಅರ್ಜಿಗೆ ಎರಡೆರಡು ಉತ್ತರ
ವಾಸವದತ್ತಾ ಸಿಮೆಂಟ್ ಕಾರ್ಖಾನೆಗೆ ರೈಲ್ವೆ ಇಲಾಖೆಯಿಂದ ಯಾವ ಸಮಯದಲ್ಲಿ ರೈಲು ಸಂಚರಿಸಲು ಅನುಮತಿ ನೀಡಲಾಗಿದೆ ಎಂದು ಆರ್.ಟಿ.ಐ. ಅಡಿ ಮಾಹಿತಿ ಕೇಳಲಾಗಿದ್ದು, ಒಂದೇ ಅರ್ಜಿಗೆ ಎರಡೆರಡು ಉತ್ತರ ಸಿಕ್ಕಿವೆ. ಒಂದೆಡೆ ಯಾವಾಗ ಬೇಕಾದರೂ ರೈಲು ಓಡಿಸಬಹುದು ಎಂದು ಇನ್ನೊಂದರಲ್ಲಿ ಕಾರ್ಖಾನೆಯ ಲೋಡಿಂಗ್ ಮತ್ತು ಅನಲೋಡಿಂಗ್ ಅನುಗುಣವಾಗಿ ಅನುಮತಿಸಿದೆ ಎಂದು ಉತ್ತರ ನೀಡಲಾಗಿದೆ. ಅಲ್ಲದೆ ಆಗಸ್ಟ್ ತಿಂಗಳಲ್ಲಿ ೫೧ ರೇಕ್ ಲೋಡ್ ಆಗಿದ್ದು, ೪೦ ಅನಲೋಡ್ ಆಗಿವೆಯಂತೆ.
ರೈಲು ಹಳಿ ವಿರುದ್ಧ ಯಾರೇ ಧ್ವನಿ ಎತ್ತಲಿ ಅವರ ಧ್ವನಿ ಅಡಗಿಸುವ ಕುತಂತ್ರ ವಾಸವದತ್ತಾ ಸಿಮೆಂಟ್ ಕಾರ್ಖಾನೆ ಮಾಡುತ್ತಾ ಬಂದಿದೆ. ಆದರೆ ಈಗ ಪ್ರಾಣ ಒತ್ತೆಯಿಟ್ಟು ಹೋರಾಟಕ್ಕೆ ಮುಂದಾಗಲಾಗಿದೆ. – ಶಿವಕುಮಾರ ಅಪ್ಪಾಜಿ, ಸದಸ್ಯರು, ಸೇಡಮ್ ಜನಹಿತ ರಕ್ಷಣಾ ಸಮಿತಿ.