ಬದುಕಿರುವ ತನಕ ರಕ್ತದಾನ- ಬದುಕಿನ ನಂತರ ನೇತ್ರದಾನ

0
41

ಕಲಬುರಗಿ: ವಿವಿಧ ಬಗೆಯ ವಿಕಲಾಂಗ ವ್ಯಕ್ತಿಗಳನ್ನು ರಾಷ್ಟ್ರದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ ಸಮದೃಷ್ಟಿ ಕ್ಷಮತಾವಿಕಾಸ ಮತ್ತು ಅನುಸಂಧಾನ ಮಂಡಲ (ಸಕ್ಷಮ) ಎಂಬ ಸಂಸ್ಥೆಯನ್ನು ಮಹಾರಾಷ್ಟ್ರದ ನಾಗಪುರನಲ್ಲಿ 20 ಜೂನ್, 2008ರಂದು ಸ್ಥಾಪಿಸಲಾಯಿತು. ವಿಶೇಷಚೇತನರಲ್ಲಿ ಧನಾತ್ಮಕ ಶಕ್ತಿ ತುಂಬುವುದೇ ಸಕ್ಷಮದ ಧ್ಯೇಯವಾಗಿದೆ.

ಸಕ್ಷಮ ಉತ್ತರ ಕರ್ನಾಟಕ ಪ್ರಾಂತದ ಕಲಬುರಗಿ ಜಿಲ್ಲಾ ಶಾಖೆಯ ವತಿಯಿಂದ ಗುರುವಾರ ನಗರದ ಆಳಂದ ರಸ್ತೆಯಲ್ಲಿರುವ ಶೃವಣ ನ್ಯೂನತೆ ಮಕ್ಕಳ ಸರಕಾರಿ ಶಾಲೆಯ ಆವರಣದಲ್ಲಿ ಅಂಧ ಮಕ್ಕಳಿಂದ ಸಸಿಗಳನ್ನು ನೇಡುವುದರ ಮೂಲಕ 16ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಲಾಯಿತು.

Contact Your\'s Advertisement; 9902492681

ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕಲಬುರಗಿ ಜಿಲ್ಲಾಧ್ಯಕ್ಷ ಬಸವರಾಜ ಹೆಳವರ ಯಾಳಗಿ ಪರಸ್ಪರ ಸಹಾಯ ಮಾಡುವುದೇ ಭಾರತೀಯ ಸಂಸ್ಕೃತಿ. ದೇಶವೇ ನಮ್ಮ ಕುಟುಂಬ ಎಂದು ಕೆಲಸ ಮಾಡುವ ಅನೇಕ ಮನಸುಗಳಿವೆ. ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮರ ಗಿಡಗಳನ್ನು ಹೆಚ್ಚು ಹೆಚ್ಚಾಗಿ ಬೆಳೆಸುವ ಮೂಲಕ ಪ್ರಕೃತಿಗೆ ನಮ್ಮ ಕೊಡುಗೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಅದೇ ರೀತಿಯಾಗಿ ರಕ್ತದಾನ ಮತ್ತು ನೇತ್ರದಾನದ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪ್ರೊ. ಹೆಚ್.ಬಿ ಪಾಟೀಲ್, ಸುನಿಲಕುಮಾರ ವಂಟಿ, ಅಸ್ಲಾಂ ಶೇಖ್, ಮಲ್ಲಿಕಾರ್ಜುನ ಕುಮಸಿ, ಶಾಂತಪ್ಪ ಕ್ಯಾತನ್, ನಿತಿನ್ ರಂಗದಾಳ, ಜಗದೀಶ್, ಜಗದೀಶ್ ನಾಯಕ, ಬಾಳು ಜಾದವ, ಶಾಂತಗೌಡ, ನಾಗಯ್ಯ ಸ್ವಾಮಿ ಹಾಗೂ ಇನ್ನಿತರರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here