ಕಲಬುರಗಿ: ಬಾವಿಯ ನೀರಿನಲ್ಲಿ ಜಲ ಯೋಗಾಸನ ಪ್ರದರ್ಶನ ಮಾಡಿ ಗಮನ ಸೆಳೆದ ಮಾಜಿ ಗ್ರಾ.ಪಂ ಅಧ್ಯಕ್ಷ

0
49

ಕಲಬುರಗಿ: ವಿಶ್ವ ಯೋಗ ದಿನಾಚರಣೆ ಅಂಗವಾಗಿ ನಂದಿಕೂರ ಗ್ರಾಮ ಪಂಚಾಯತ್ ನ ಹಾಲಿ ಸದಸ್ಯ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ಪವನಕುಮಾರ ಬಿ.ವಳಕೇರಿ ಅವರು ನಂದಿಕೂರ ಗ್ರಾಮದ ಮಲ್ಲೇಶಪ್ಪ ಏವೂರ ಅವರ ಹೊಲದಲ್ಲಿರುವ ಬಾವಿಯಲ್ಲಿ ಇಂದು ಬೆಳ್ಳಿಗ್ಗೆ 7 ಗಂಟೆಯಿಂದ 8 ಗಂಟೆ ವರೆಗೆ ಒಂದು ಗಂಟೆ ಕಾಲ ಜಲ ಯೋಗ ಕೈಗೊಂಡು ಯೋಗ ಆಸನಗಳನ್ನು ಪ್ರದರ್ಶನ ಮಾಡಿದರು.

‘ಈ ಜಲ ಯೋಗಾಸನದ ನಂತರ ಮಾತನಾಡಿದ ಅವರು, ಕಳೆದ ಇಪ್ಪತ್ತು ವರ್ಷಗಳಿಂದ ನಾನು ಈ ಯೋಗಾಸನ ಮಾಡುತ್ತಾ ಬಂದಿದ್ದೇನೆ . ಅಲ್ಲದೇ ಸುತ್ತಮುತ್ತಲ ಹಳ್ಳಿ ಜನರಿಗೆ ಕೂಡ ಯೋಗಾಸನದ ಬಗ್ಗೆ ಜಾಗೃತಿ ಮೂಡಿಸುವುದರ ಜೊತೆಗೆ ವಿವಿಧ ಬಗೆಯ ಯೋಗಾಸನಗಳನ್ನು ಕಲಿಸಲು ಪ್ರಯತ್ನ ಮಾಡುತ್ತಿದ್ದೇನೆ ಎಂದರು .

Contact Your\'s Advertisement; 9902492681

ಪದ್ಮಾಸನ ಸೇರಿದಂತೆ ವಿವಿಧ ಬಗೆಯ ಜಲ ಯೋಗಾಸನ‌ವನ್ನು ವಳಕೇರಿ ಅವರು ನೀರು ಕುಡಿದಷ್ಟೇ ಸರಳವಾಗಿ ಮಾಡುತ್ತೇನೆ ಎಂದರು.

ಜಲ ಯೋಗಾಸನದಿಂದ ಆರೋಗ್ಯವೃದ್ಧಿಯಾಗುತ್ತದೆ. ಯಾವುದೇ ರೋಗರುಜಿನಗಳು ನಮ್ಮತ್ತ ಸುಳಿಯುವುದಿಲ್ಲ. ಕಳೆದ ಇಪ್ಪತ್ತು ವರ್ಷಗಳಿಂದ ನಾನು ಯೋಗಾಸನ ಮಾಡಿಕೊಂಡು ಬಂದಿದ್ದು. ನನ್ನ ಕುಟುಂಬದವರಿಗೆ ಹಾಗೂ ನಂದಿಕೂರು ಗ್ರಾಮದ ಜನ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಜನರಿಗೆ ಜಲ ಯೋಗಸನದ ಬಗ್ಗೆ ಆಸಕ್ತಿ ಹೆಚ್ಚಿಸುವ ಪ್ರಯತ್ನ ಮಾಡಿದ್ದೇನೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here