ಸುರಪುರ: ನಗರದಿಂದ ಕಲಬುರಗಿ ನಗರಕ್ಕೆ ಸಗರನಾಡು ಬಸ್‍ಗಳ ಸಂಚಾರದಲ್ಲಿ ಸಾಕಷ್ಟು ಕಡಿಮೆಗೊಂಡಿದ್ದು ಇದರಿಂದಾಗಿ ಸುರಪುರ ದಿಂದ ಕಲಬುರಗಿ ನಗರಕ್ಕೆ ಸಂಚರಿಸಲು ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದ್ದು ನಗರಕ್ಕೆ ಸಮರ್ಪಕವಾಗಿ ಬಸ್ ಓಡಿಸಬೇಕು ಎಂದು ಯಾದಗಿರಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿಯ ಉಪಾಧ್ಯಕ್ಷ ರಮೇಶ ದೊರೆ ಆಲ್ದಾಳ ಆಗ್ರಹಿಸಿದ್ದಾರೆ.
ಯಾದಗಿರಿಯಲ್ಲಿ ಜರುಗಿದ ಸಮಿತಿಯ ಜಿಲ್ಲಾ ಮಟ್ಟದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಸುರಪುರ ದಿಂದ ಕಲಬುರಗಿ ನಗರಕ್ಕೆ ಈ ಮೊದಲು ಸಾಕಷ್ಟು ಬಸ್‍ಗಳು ಓಡಾಡತ್ತಿದ್ದವು ಸರಕಾರ ಶಕ್ತಿ ಯೋಜನೆ ಪ್ರಾರಂಭಗೊಂಡ ನಂತರ ಸಗರನಾಡು ಬಸ್‍ಗಳ ಓಡಾಟ ಕಡಿಮೆಗೊಂಡಿದೆ ಹಾಗೂ ಪ್ರಯಾಣಿಕರಿಗೆ ಬಹಳಷ್ಟು ತೊಂದರಯಾಗುತ್ತಿದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಗಮನಕ್ಕೆ ತಂದರು, ಯಾದಗಿರಿ ವಿಭಾಗದ ವ್ಯಾಪ್ತಿಗೆ ಒಳಪಡುವ ಶಹಾಪುರ ಹಾಗೂ ಯಾದಗಿರಿಯಿಂದ ಕಲಬುರಗಿ ನಗರಕ್ಕೆ ಸಾಕಷ್ಟು ಬಸ್‍ಗಳ ಸಂಚರಿಸುತ್ತಿವೆ ಆದರೆ ಸುರಪುರ ದಿಂದ ಕಲಬುರಗಿಗೆ ಬಸ್‍ಗಳ ಸಂಚಾರವನ್ನು ರದ್ದುಗೊಳಿಸಿದ್ದು ಇದರಿಂದ ಕಲಬುರಗಿ ನಗರಕ್ಕೆ ಆಸ್ಪತ್ರೆಗೆ ಹಾಗೂ ಇನ್ನೀತರ ವೈಯುಕ್ತಿಕ ಕೆಲಸ ಕಾರ್ಯಗಳಿಗೆ ಹೋಗುವ ಪ್ರಯಾಣಿಕರು ಹಾಗೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಈ ಬಗ್ಗೆ ಸುರಪುರ ಡಿಪೋ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ತಾಲೂಕಿನ ಪ್ರಯಾಣಿಕರು ಸಾರಿಗೆ ಸಂಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು ಕೂಡಲೇ ಗುರುವಾರದಿಂದ ಕಲಬುರಗಿ ನಗರಕ್ಕೆ ನಿರಂತರವಾಗಿ ಬಸ್ ಸಂಚಾರಕ್ಕೆ ವ್ಯವಸ್ಥೆ ಕೈಗೊಳ್ಳಬೇಕು ಇಲ್ಲವಾದಲ್ಲಿ ಸಾರಿಗೆ ಸಚಿವರು ಹಾಗೂ ಕೆಕೆಆರ್‍ಟಿಸಿ ವ್ಯವಸ್ಥಾಪಕ ನಿರ್ದೇಶಕರನ್ನು ಭೇಟಿಯಾಗಿ ಗಮನಕ್ಕೆ ತರಲಾಗುವುದು ಕ್ರಮ ಕೈಗೊಳ್ಳಲು ಒತ್ತಾಯಿಸುವುದಾಗಿ ಅವರು ಸಭೆಯಲ್ಲಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.