ಚಿಂಚೋಳಿ: ವಿದ್ಯಾರ್ಥಿಗಳ ಜೀವನವು ಭವಿಷ್ಯದ ಬದುಕನ್ನು ರೂಪಿಸಿಕೊಳ್ಳವ ಮಹತ್ವದ ಘಟ್ಟವಾಗಿದೆ ಈ ಹಂತದಲ್ಲಿ ಮಾದಕವಸ್ತು ಮತ್ತು ಮದ್ಯಸೇವನೆ ಯಂತಹ ಚಟಗಳಿಗೆ ಒಳಗಾಗದೆ ದೂರವಿರಬೇಕೆಂದು ಸಾಮಾಜಿಕ ಪರಿವರ್ತನ ಹೋರಾಟಗಾರ ಮಾರುತಿ ಗಂಜಗಿರಿ ಹೇಳಿದರು.
ನಿಡಗುಂದಾ ಹಾರಕೂಡ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಘದ ವತಿಯಿಂದ ಹಮ್ಮಿಕೊಂಡ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ವಿರೋದಿ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ನೇಹಿತರ ಒತ್ತಾಯದ ಗುಂಪಿನಲ್ಲಿ ಒಂದಾಗಬೇಕೆಂಬ ಭಾವನೆ ದೈಹಿಕ ಮತ್ತು ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಲು ತಾತ್ಕಾಲಿಕವಾಗಿ ಸಮಸ್ಯಯನ್ನು ಮರೆಯಲು ಹೀಗೆ ಅನೇಕ ಕಾರಣಗಳಿಗಾಗಿ ಮಾದಕವಸ್ತಗಳ ಸೇವನೆಗೆ ಹೆಚ್ಚಾಗಿ ಯುವಕರು ಬಲಿಯಾಗುತಿದ್ದು ಇದು ದೇಶಕ್ಕೆ ಬದುಕಿಗೆ ದೇಶಕ್ಕೆ ಮಾರಕ ವಿದ್ಯಾರ್ಥಿಗಳು ದುರ್ಜನರ ಮತ್ತು ದುಶ್ಚಟ ಜನರ ಸಹವಾಸದಿಂದ ದೂರವಿರಬೇಕು ಎಂದು ತಿಳಿಸಿದರು.
ಒಳ್ಳೆಯ ಅಭಿರುಚಿ ಹೊಂದಿರುವ ಸ್ನೇಹಿತರ ಹಾಗೂ ಗುರುಗಳ ಒಡನಾಟ ಇಟ್ಟುಕೊಂಡು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗಿ ಹೊರಹೊಮ್ಮಬೇಕೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಯೋಜನ ನಿರ್ದೆಶಕರಾದ ಗೋಪಾಲ ಮಾಹದೇವಿ ಗಂಗಮ್ಮ ಹೇಳಿದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಗಳಾದ ಗುರುನಾಥ ರಾಠೋಡ ಶಿವಲಿಂಗಪ್ ಮಲ್ಲಿಕಾರ್ಜುನ ಕಟ್ಟಿಮನಿ ನಾಗೇಂದ್ರಪ್ಪ ಬೇಡಕಪಳ್ಳಿ ಜ್ಯೋತಿ ಮತ್ತು ಸಂಗಡಗರಿಂದ ಪ್ರಾರ್ಥನ ಗೀತೆ ಹಾಡಿದರು.