ವಚನ ಸಾಹಿತ್ಯಕ್ಕೆ ಡಾ. ಫ. ಗು. ಹಳಕಟ್ಟಿ ಅವರ ಕೊಡುಗೆ ಅಪಾರ : ಸಿದ್ದಲಿಂಗ ಶ್ರೀ

0
33

ಚಿತ್ತಾಪುರ: 12ನೇ ಶತಮಾನದ ವಚನ ಸಾಹಿತ್ಯವನ್ನು ಸಂಶೋಧನೆ ಮಾಡಿ ಮುದ್ರಿಸಿ ಜನಸಾಮಾನ್ಯರಿಗೆ ಮುಟ್ಟಿಸಿದ ಕೀರ್ತಿ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರಿಗೆ ಸಲ್ಲುತ್ತದೆ ಎಂದು ಪೂಜ್ಯ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.

ಅವರು ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಕಂಠ ಪಾಠ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

Contact Your\'s Advertisement; 9902492681

ಇವತ್ತು ನಾವೆಲ್ಲಾ ವಚನ ಸಾಹಿತ್ಯ ಓದುತ್ತಿದ್ದೇವೆ ಎಂದರೆ ಅದು ಹಳಕಟ್ಟಿಯವರ ತ್ಯಾಗದಿಂದ ಸಾಧ್ಯವಾಗಿದೆ. ದೀಪ ತಾನು ಉರಿದು ಸುತ್ತಲೂ ಸುಗಂಧ ಸೂಸುವಂತೆ ಹಳಕಟ್ಟಿಯವರು ತಮ್ಮ ವಯಕ್ತಿಕ ಜೀವನವನ್ನು ತ್ಯಾಗ ಮಾಡಿ ಸರ್ವಸ್ವವನ್ನು ವಚನ ಸಾಹಿತ್ಯದ ಉಳಿವಿದೆ ತ್ಯಾಗ ಮಾಡಿದ್ದಾರೆ. ಅವರ ಸೇವೆ ಸದಾ ಸ್ಮರಣಿಯ ಎಂದು ಹೇಳಿದರು.

ಶಿಕ್ಷಕ ಶಿವಾನಂದ ಡೋಮನಾಳ ಮಾತನಾಡಿದರು. ವಚನ ಸ್ಪರ್ಧೆಯಲ್ಲಿ ಅತಿ ಹೆಚ್ಚು ವಚನ ಹೇಳಿದ ಕಾರ್ತಿಕ, ಸೋಮಶೇಖರ್, ಶರಣ್, ಅಕ್ಷರ,ಭಾಗ್ಯಶ್ರೀ, ಕಾರ್ತಿಕ, ಬಸವರಾಜ, ಹರ್ಷಿತ್, ದಿವ್ಯಶ್ರೀ ಅವರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.

ಕಾರ್ಯಕ್ರಮದಲ್ಲಿ ಶಿಕ್ಷಕರಾದ ವಿದ್ಯಾಧರ ಖಂಡಾಳ, ಗಂಗಪ್ಪ ಕಟ್ಟಿಮನಿ, ವಿಜಯಲಕ್ಷ್ಮಿ ಬಮ್ಮನಳ್ಳಿ, ಈಶ್ವರಗೌಡ ಪಾಟೀಲ್, ಶಿವಕುಮಾರ್ ಸರಡಗಿ, ಈರಣ್ಣ ಹಳ್ಳಿ, ಕಾವೇರಿ ಮಡಿವಾಳ, ಭೀಮಾಶಂಕರ ಬಮ್ಮನಳ್ಳಿ, ಸುಭಾಷ ಚವಾಣ, ರಾಜು ಆಳ್ಳೊಳ್ಳಿ, ಅನುಸೂಯ ಹೂಗಾರ್ ಸೇರಿದಂತೆ ಶಿಕ್ಷಕರು, ಮಕ್ಕಳು ಉಪಸ್ಥಿತರಿದ್ದರು. ಸಿದ್ದಲಿಂಗ ಬಾಳಿ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here