ವಾಡಿಯಲ್ಲಿ ಕಲರ್ ಕಲರ್ ಕುಡಿಯುವ ನೀರು ಪೂರೈಕೆ

0
198

ವಾಡಿ: ಮಾಡುತ್ತಿರುವ ಕುಡಿವ ನೀರಿನಲ್ಲಿ ಚರಂಡಿ ನೀರು ಹಾಗೂ ಮಳೆಯಿಂದ ಕಲುಷಿತ ನೀರು ಸೇರ್ಪಡೆಯಾಗಿ ಸಾರ್ವಜನಿಕರು ಅನಿವಾರ್ಯವಾಗಿ ರಾಡಿ ನೀರು ಬಳಸುವ ಪರಿಸ್ಥಿತಿ ಬಂದಿದೆ‌ ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮನವಿ ಪತ್ರ ಸಲ್ಲಿಸಿದ್ದಾರೆ.

ಶಾಶ್ವತ ಕುಡಿಯುವ ನೀರಿನ ಯೋಜನೆಯಡಿ ನೀರು ಶುದ್ಧೀಕರಣ ಘಟಕ ನಿರ್ಮಾಣವಾದರೂ ಸಹ ಇಲ್ಲಿನ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಶುದ್ದಿಕರಣ ಗೊಳ್ಳುತ್ತಿಲ್ಲ, ನದಿಯ ತೀರದಲ್ಲಿಯೂ ಸಾಕಷ್ಟು ಪಾರ್ಥೆನಿಯಂ ಕಸ, ಜಾಲಿ ಕಂಟಿ ಸೇರಿದಂತೆ ಇತರ ಕಸ ತೆಗೆದಿಲ್ಲ, ಹೀಗಾಗಿ ನೀರು ಮಲಿನವಾಗುತ್ತಿದೆ.

Contact Your\'s Advertisement; 9902492681

ನದಿಯ ನೀರಲ್ಲಿ ಮಣ್ಣು ಮಿಶ್ರಿತ ಹಾಗೂ ಎಸಿಸಿ ,ರೇಲ್ವೆ ಹಾಗೂ ಪಟ್ಟಣ ಸೇರಿದಂತೆ ಆರೋಗ್ಯದ ಮೇಲೆ ಪರಿಣಾಮ ಬೀರುವಂತ ತ್ಯಾಜ್ಯಗಳು ನೀರಿನಲ್ಲಿ ಬೆರೆಯುತ್ತಿರುವುದರಿಂದ, ಜನಸಾಮಾನ್ಯರು ಹೊಟ್ಟೆ ಜಾಡಿಸುವುದು, ಗಂಟಲು ಕೆರೆತ, ಕೆಮ್ಮು, ಚರ್ಮದ ತುರಿಕೆಯಂತಹ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗುತ್ತಿದೆ.

ಸರಿಯಾಗಿ ಫಿಲ್ಟರ್‌ ಮಾಡದ ರಾಡಿ ನೀರಿಗೆ ಹೆದರಿದ ಬಹುಸಂಖ್ಯಾತರು ಶುದ್ಧ ಕುಡಿವ ನೀರಿನ ಘಟಕದಿಂದ ನೀರು ಪಡೆಯಲು ಪರದಾಡುತ್ತಿದ್ದಾರೆ. ಕೆಲವು ಬಡಾವಣೆಗಳಲ್ಲಿ ಕುಡಿಯುವ ನೀರಿನ ಪೈಪ್‌ ಒಡೆದು ಅದರ ಮೂಲಕ ನದಿಯ ನದಿ ನೀರಿನ ಜತೆಗೆ ಚರಂಡಿಯ ನೀರು ಸೇರ್ಪಡೆಗೊಂಡು ನಳಗಳ ಮೂಲಕ ಮನೆಗಳಿಗೆ ಪೂರೈಕೆಯಾಗುತ್ತಿದೆ. ಕುಡಿಯಲು ಕೊಡಗಳಲ್ಲಿ, ಟ್ಯಾಂಕ್‌ಗಳಲ್ಲಿ ತುಂಬಿದ ನೀರು ಗಬ್ಬು ವಾಸನೆಯಿಂದ ಕೂಡಿ,ಮಣ್ಣು ಶೇಖರಣೆ ಯಾಗುತ್ತಿದೆ ಮತ್ತು ನಾಲ್ಕಾರು ದಿನಗಳಲ್ಲಿ ತುಂಬಿದ ನೀರಿನಲ್ಲಿ ಹುಳಗಳಾಗುತ್ತಿವೆ.

ಸುಮಾರು 50ಸಾವಿರ ಜನಸಂಖ್ಯೆ ಹೊಂದಿದ ಪಟ್ಟಣದಲ್ಲಿ ಪುರಸಭೆ ಅಧಿಕಾರಿಗಳು ಜನರಿಗೆ ಕುಡಿಯಲು ಯೊಗ್ಯವಲ್ಲದ ರಾಡಿ ನೀರನ್ನು ಸಹ ನಾಲ್ಕು ದಿನಗಳಿಗೊಮ್ಮೆ
ಪೂರೈಸುತ್ತಿದ್ದು,ಇದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ,

ಈ ಮಳೆಗಾಲ ಸಂಧರ್ಭದಲ್ಲಿ ಅಶುದ್ಧ ನೀರನ್ನು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ತುಂಬಾ ಅಪಾಯಕಾರಿ,ಆದ್ದರಿಂದ ಅಧಿಕಾರಿಗಳು ನಾಗರಿಕರಿಗೆ ಫಿಲ್ಟರ್‌ ಮಾಡಿದ ಶುದ್ಧ ನೀರನ್ನು ಸಮರ್ಪಕವಾಗಿ ಪೂರೈಸಬೇಕು ಎಂದು ಸುಮಾರು ವರ್ಷಗಳಿಂದ ಜಿಲ್ಲಾಧಿಕಾರಿಗಳಿಗೆ ಮತ್ತು ಇಲ್ಲಿನ ಮುಖ್ಯಾಧಿಕಾರಿ ಗಳಿಗೆ ಮನವಿ ಸಲ್ಲಿಸಿದರು ಪ್ರಯೋಜನ ಆಗುತ್ತಿಲ್ಲ.

ಇದನ್ನು ತಕ್ಷಣ ಪರಿಹರಿಸದೇ ಹೋದರೆ ಕೆಲವೇ ದಿನಗಳಲ್ಲಿ ಪುರಸಭೆ ಎದುರು ಧರಣಿ ಮಾಡಲಾಗುವುದು ಎಂದು ಹೇಳಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here