ಕನ್ನಡದ ನೆಲದಲ್ಲಿ ಕನ್ನಡಿಗರ ಮಕ್ಕಳೇ ಉದ್ಯೋಗ ಮಿಸಲಾತಿ ಕೇಳುವಂತಹ ಪರಸ್ಥಿತಿ ಆಘಾತಕಾರಿ 

0
64

ಕಲಬುರಗಿ: ಡಾ.ಸರೋಜನಿ ಮಹಿಷಿ ವರದಿ ಅನುಷ್ಠಾನಕ್ಕೆ ನಡೆದ, ನಡೆಯುತ್ತಿರುವ ಹೋರಾಟಗಳಿಗೆ ಲೆಕ್ಕವೇ ಇಲ್ಲ. ಮಹಿಷಿ ವರದಿಯ ಹೆಸರು ಹೇಳಿ ಆಳಿದ ಪ್ರತಿಯೊಂದು ಸರಕಾರಗಳು ಬಹುರಾಷ್ಟ್ರೀಯ ಕಂಪನಿಗಳಿಂದ ಕಿಕ್ ಬ್ಯಾಕ್ ಪಡೆಯುತ್ತಾ ಬಂದಿವೆ.ಕಾನೂನಿನ ನೆಪದಲ್ಲಿ ಸರಕಾರವೇ ಬೆಲಿಯೇ ಎದ್ದು ಹೊಲ ಮೇಯುವ ಕೆಲಸ ಮಾಡಿದರೆ ನಾಡ ಜನರ ಬದಕು ರಕ್ಷಣೆ ಮಾಡುವವರು ಯಾರು ? ಸರಕಾರಗಳು ಬಹುರಾಷ್ಟ್ರೀಯ ಕಂಪನಿಗಳ ಸೂಟಕೇಸ್ ಮೋಹಕ್ಕೆ ಕನ್ನಡಿಗರಿಗೆ ಮೋಸ ಮಾಡಬಾರದು ಎಂದು ಕರ್ನಾಟಕ ನವನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ರವಿ ದೇಗಾಂವ ಒತ್ತಾಯಿಸಿದ್ದಾರೆ.

ನಾಡಿನ ಉದ್ಯೋಗಗಳು ಈ ನಾಡ ಮಕ್ಕಳಿಗೆ ಸಿಗಬೇಕು, ರಾಷ್ಟ್ರ ಕವಿ ಕುವೇಂಪು ರವರ ವೀರವಾಣಿ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಎನ್ನುವದು ಆಳುವ ಸರಕಾರಗಳ ಅಮರವಾಣಿ ಯಾಗಬೇಕು. ಕರ್ನಾಟಕ ಸರಕಾರ ಕೇಂದ್ರದ ‘ರಾಷ್ಟ್ರೀಯ ಉದ್ಯೋಗ ನೀತಿಯ’ ಹಾಗೆ ‘ರಾಜ್ಯ ಉದ್ಯೋಗ ನೀತಿ’ ಯನ್ನು ಜಾರಿಗೆ ತರುವ ಗಟ್ಟಿ ನಿರ್ಧಾರ ಕೈಗೊಳ್ಳಬೇಕು ಇದು ಕಾನೂನು ಆಗಿ ರೂಪಗೊಳ್ಳಬೇಕು. ಅಂದಾಗ ಮಾತ್ರ ಕನ್ನಡದ ಮಕ್ಕಳು ಉದ್ಯೋಗ ರಂಗದಲ್ಲಿ ಸಾರ್ವಭೌಮರಾಗಿ ಮೆರೆಯಲು ಸಾಧ್ಯ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here