ವಾಡಿ: ಪ್ರತಿಯೊಬ್ಬರಿಗೂ ಗುರಿ ಇರಬೇಕು. ಆ ಗುರಿ ಸಾಧನೆಗೆ ಸಮರ್ಥ ಗುರುಗಳು ಬೇಕು ಅಂದಾಗ ಮಾತ್ರ ನಮ್ಮ ಗುರಿ ಈಡೇರಲು ಸಾಧ್ಯ. ಮಕ್ಕಳ ಪ್ರತಿಭೆಗೆ ಸೂಕ್ತ ಪುರಸ್ಕಾರ ಸಿಕ್ಕಾಗ ಮಾತ್ರ ಸಾಧನೆ ಮಾಡಲು ಸಾಧ್ಯವೆಂದು ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.
ಅವರು ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಭಿವೃದ್ಧಿ ಸಂಸ್ಥೆಯಲ್ಲಿ ಹತ್ತನೇ ಮತ್ತು ಪಿ. ಯು. ಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಲಿಂಗಾಯತ ಮಠಗಳು ಜಾತ್ಯತೀತವಾಗಿ, ಧರ್ಮಾತೀತವಾಗಿ ಶಿಕ್ಷಣವನ್ನು ನೀಡುತ್ತಾ ದೊಡ್ಡ ಕೊಡುಗೆಯನ್ನು ಕೊಡುತ್ತಾ ಬರುತ್ತಿವೆ. ಒಂದು ವೇಳೆ ಲಿಂಗಾಯತ ಮಠಗಳು ಶಿಕ್ಷಣ ಸೇವೆ ನೀಡದಿದ್ದರೆ ನಾಡಿನಲ್ಲಿ ಶಿಕ್ಷಣ ಸಾಕಷ್ಟು ಹಿಂದುಳಿಯುತಿತ್ತು. ಕೆಲ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಜಾಣ ಮಕ್ಕಳಿಗೆ ಪ್ರವೇಶ ನೀಡಿ ಅವರ ಮೂಲಕ ಸಾಧನೆ ಮಾಡಿದ್ದೇವೆಂದು ಹೇಳಿಕೊಳ್ಳುತ್ತಾರೆ. ಆದರೆ ನನ್ನ ಪ್ರಕಾರ ಅದು ಸಾಧನೆ ಅಲ್ಲ. ಕಲಿಕೆಯಿಂದ ಹಿಂದುಳಿದ ಮಗುವಿಗೆ ಪ್ರವೇಶ ನೀಡಿ ಅವರಲ್ಲಿ ಎಲ್ಲಾ ಸಾಮರ್ಥ್ಯ ತುಂಬಿ ಕಳಿಸುವುದೇ ನಿಜವಾದ ಸಾಧನೆಯಗಿದೆ ಎಂದು ಹೇಳಿದರು.
ಸುರೇಖಾ ಯಾದಗಿರಿ ಮಾತನಾಡಿದರು. ವೇದಿಕೆಯ ಮೇಲೆ ಸಂಸ್ಥೆ ಉಪಾಧ್ಯಕ್ಷ ಚೆನ್ನಣ್ಣ ಬಾಳಿ, ಕಾರ್ಯದರ್ಶಿ ಗುಂಡಣ್ಣ ಬಾಳಿ, ಸಹಕಾರ್ಯದರ್ಶಿ ಈಶ್ವರ ಬಾಳಿ, ಸದಸ್ಯ ಸಿದ್ದಲಿಂಗ ಜ್ಯೋತಿ,ಮುಖಂಡ ಸಾಹೇಬಗೌಡ ತುಮಕೂರ, ಉಪನ್ಯಾಸಕ ಸಿದ್ದಾರೂಢ ಬಿರಾದಾರ್. ಮುಖ್ಯಗುರು ವಿದ್ಯಾಧರ ಖಂಡಾಳ ಇದ್ದರು.
ಕಾರ್ಯಕ್ರಮದಲ್ಲಿ 2023-24ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಕಿರಣ ತಂದೆ ಮಲ್ಲಪ್ಪ, ರೆಹಾನ್ ತಂದೆ ಹುಸೇನ್, ವೆಂಕಟೇಶ್ ತಂದೆ ನಾಗರಾಜ ಅವರಿಗೆ 50 ಸಾವಿರ ರೂ ಗಳ ಪ್ರೋತ್ಸಾಹ ಧನ ನೀಡಲಾಯಿತು.
ಪಿ. ಯು. ಸಿ ವಿದ್ಯಾರ್ಥಿನಿಯರಾದ ಸಾನಿಯಾ ತಂದೆ ಖಾಲಿಲಾಮಿಯಾ, ಸುಜಾತಾ ತಂದೆ ನಿಂಗಣ್ಣ, ರಾಧಿಕಾ ತಂದೆ ಚಂದ್ರಮಪ್ಪ ಅವರಿಗೆ 5 ಸಾವಿರ ನೀಡಲಾಯಿತು. ಸಂಸ್ಥೆಯಲ್ಲಿ ಅಧ್ಯಯನ ಮಾಡಿದ 2000ನೇ ಸಾಲಿನ ಹಿರಿಯ ವಿದ್ಯಾರ್ಥಿಗಳು 10 ಸಾವಿರ ರೂ ಹಣವನ್ನು ಪ್ರತಿಭಾ ಪುರಸ್ಕಾರ ರೂಪದಲ್ಲಿ ನೀಡಿದರು.
ಕಾರ್ಯಕ್ರಮದಲ್ಲಿ ಶಾಂತಮಲ್ಲಪ್ಪ ಬಾಳಿ, ದತ್ತು ಗುತ್ತೇದಾರ್,ಸೂರ್ಯಕಾoತ ರದ್ದೇವಡಗಿ, ಸೇರಿದಂತೆ ಸಂಸ್ಥೆಯ ಶಿಕ್ಷಕರು, ಪಾಲಕರು,ಮಕ್ಕಳು ಇದ್ದರು.
ನಾನು ಪ್ರತಿವರ್ಷ ಸಂಸ್ಥೆಗೆ 50 ಸಾವಿರ ರೂಪಾಯಿಗಳನ್ನು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ರೂಪದಲ್ಲಿ ನೀಡುತ್ತಿದ್ದೇನೆ. ಈ ಹಣ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿದೆ ಎಂದು ಭಾವಿಸಿದ್ದೇನೆ. ಮುಂದೆಯೂ ಹೆಚ್ಚಿನ ರೀತಿಯಲ್ಲಿ ಸೇವಾ ಕಾರ್ಯವನ್ನು ಮುಂದುವರೆಸುತ್ತೇನೆ.- ಸುರೇಖಾ ಎಸ್. ಯಾದಗಿರಿ