ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ಸಪ್ತಾಹ ನಿಮಿತ್ತ ವಿಶೇಷ ಉಪನ್ಯಾಸ

0
12

ಕಲಬುರಗಿ: ಜಸ್ಟಿಸ್ ಶಿವರಾಜ ವಿ. ಪಾಟೀಲ ಫೌಂಡೇಶನ್ (ರಿ) ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ಸರ್ವಜ್ಞ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಸಹಭಾಗಿತ್ವದಲ್ಲಿ “ಅಂತರಾಷ್ಟ್ರೀಯ ಮಾದಕ ವಸ್ತುಗಳ ವಿರೋಧಿ ಸಪ್ತಾಹ” ನಿಮಿ “ವಿಶೇಷ ಉಪನ್ಯಾಸ” ಕಾರ್ಯಕ್ರಮವನ್ನು ಜರುಗಿತು.

ಉದ್ಘಾಟಿಸಿದ ಶ್ರೀ ಆರ್.ಚೇತನ IPS ಮಾನ್ಯ ಪೊಲೀಸ್ ಆಯುಕ್ತರು ಕಲಬುರಗಿ ಅವರು ಮಾತನಾಡುತ್ತ, “ಮಕ್ಕಳ ಭವಿಷ್ಯಕ್ಕಾಗಿ ಪಾಲಕರು ಶ್ರಮಿಸುತ್ತಾರೆ. ಅದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಂಡು ಉತ್ತಮ ಶಿಕ್ಷಣ ಪಡೆದು ಸಮಾಜಕ್ಕೆ ಕೊಡುಗೆ ಕೊಡಬೇಕು. ಅದಕ್ಕಾಗಿ ಪರಿಶ್ರಮ ಪಡಬೇಕು. ಯೋಚನೆಗಳಿಗೆ ತಕ್ಕಂತೆ ಕಾರ್ಯಪ್ರವೃತ್ತರಾದರೆ ಕನಸು ನನಸಾಗುತ್ತದೆ. ಕೆಟ್ಟ ಆಕರ್ಷಣೆಗಳಿಗೆ, ದುಶ್ಚಟಕ್ಕೆ ಒಳಗಾಗದೆ ತಮ್ಮ ಸುತ್ತಲಿನ ಪರಿಸರ ಉತ್ತಮವಾಗಿರಿಸಿಕೊಂಡು ಬದುಕಬೇಕು.

Contact Your\'s Advertisement; 9902492681

ಉನ್ನತ ವ್ಯಾಸಂಗ ಮಾಡುವಾಗಲು ನಿಮ್ಮ ಗೆಳೆಯರು ಒಳ್ಳೆಯವರಾಗಿದ್ದರೆ ನೀವು ಒಳ್ಳೆಯವರಾಗಿರಲು ಸಾಧ್ಯವಾಗುತ್ತದೆ. ಕೆಟ್ಟವರ ಸಹವಾಸದಿಂದ ಬದುಕು ಕಷ್ಟಕ್ಕೆ ಒಳಗಾಗುತ್ತದೆ. ಅಂಥವರನ್ನು ತಿದ್ದಲು ಪ್ರಯತ್ನಿಸಿ, ಸಾಧ್ಯವಾಗದಿದ್ದರೆ ನೀವೂ ದೂರವಿರಿ ಎಂದರು. ದೇಶವು ಶೇ. 70ಕ್ಕೂ ಹೆಚ್ಚು ಯುವಕರಿಂದ ಕೂಡಿದೆ. ಕರ್ನಾಟಕ, ಗುಜರಾತ, ರಾಜಸ್ಥಾನ, ಮಹಾರಾಷ್ಟ್ರ ರಾಜ್ಯಗಳಷ್ಟು ಭೂಭಾಗ ಹೊಂದಿರುವ ಐರೋಪ್ಯ ಒಕ್ಕೂಟದಲ್ಲಿನ ರಾಷ್ಟ್ರಗಳು ಫುಟ್ಬಾನಲ್, ಟೆನಿಸ್ನಂ್ತಹ ಕ್ರೀಡೆಗಳಲ್ಲಿ ಮಿಂಚುತ್ತಿವೆ. ನೊಬೆಲ್ ಪ್ರಶಸ್ತಿಗೂ ಭಾಜನರಾಗುತ್ತಿವೆ. ಭಾರತೀಯ ಯುವಕರು ಅವರಿಗಿಂತ ಬುದ್ಧಿವಂತರಾಗಿದ್ದರೂ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಭಾರತ ದೇಶದ ಯುವಕರು ಎಲ್ಲದರಲ್ಲಿಯೂ ಬುದ್ದಿವಂತರು. ಅವರಿಗೆ ಉತ್ತಮ ಶಿಕ್ಷಣ ಸೂಕ್ತ ಮಾರ್ಗದರ್ಶನ ದೊರೆತರೆ ದೇಶದ ಪ್ರಗತಿಯಾಗುತ್ತದೆ. ಅವರು ಭವ್ಯ ಭಾರತದ ಶ್ರೇಷ್ಠ ಪ್ರಜೆಗಳಾಗುತ್ತಾರೆ. ದೇಶದ ಅಭಿವೃಧ್ಧಿಗೆ ಶಿಕ್ಷಣದ ಪಾತ್ರ, ವಿದ್ಯಾರ್ಥಿಗಳ ಪಾತ್ರ ಮಹತ್ವದಾಗಿದೆ. ಆ ದೇಶದಲ್ಲಿನ ಶಿಕ್ಷಣದ ವ್ಯವಸ್ಥೆಯ ಮೇಲೆ ದೇಶದ ಭವಿಷ್ಯ ನಿರ್ಮಾಣವಾಗುತ್ತಿದೆ.

ಒಂದು ದೇಶ ಹಾಳು ಮಾಡಲು ಅಲ್ಲಿನ ಶಿಕ್ಷಣ ಹಾಳು ಮಾಡಿದರೆ ಸಾಕು, ದೇಶ ಹಾಳಾಗುತ್ತದೆ. ವಿದ್ಯಾರ್ಥಿಗಳು ಕಠಿಣ ಪರಿಶ್ರಮ, ನಿರಂತರ ಪ್ರಯತ್ನ, ಪ್ರಾಮಾಣಿಕತೆಯಿಂದ ಇದ್ದರೆ ಜೀವನದಲ್ಲಿ ಯಶಸ್ವಿಯಾಗುತ್ತಾರೆ. ಮಾದಕ ವಸ್ತುಗಳ ಸೇವನೆ, ಮಧ್ಯಪಾನ, ಧೂಮಪಾನ ಮೊದಲಾದವುಗಳಿಂದ ಆರೋಗ್ಯ ಹಾಳಾಗುತ್ತದೆ. ಯಾವುದು ಒಳ್ಳೆಯದು? ಯಾವುದು ಕೆಟ್ಟದ್ದು? ಎಂಬುದು ಯೋಚಿಸಿ ಹೆಜ್ಜೆ ಇಡಿ. ಜಗತ್ತನ್ನು ಗೆಲ್ಲುತ್ತೇನೆ ಎಂದು ಹೊರಟರೆ ಖಂಡಿತ ಸಾಧನೆ ಮಾಡಲು ಸಾಧ್ಯ. ಅದಕ್ಕಾಗಿ ಜ್ಞಾನ ಗಳಿಸಿಕೊಂಡು ಒಳ್ಳೆಯ ಪ್ರಜೆಗಳಾಗಬೇಕು ಎಂದು ಸಲಹೆ ನೀಡಿದರು.

ಸಣ್ಣ ಪುಟ್ಟ ನಗರಗಳಲ್ಲಿಯೂ ಡ್ರಗ್ಸ ಜಾಲ ಹರಡುತ್ತಿರುವುದು ವಿಷಾಧನೀಯ. ಡ್ರಗ್ಸ್ನಿಂಾದ ಯುವ ಪೀಳಿಗೆ ಹಾಳಾಗದಂತೆ ರಕ್ಷಿಸಲು ಶಿಕ್ಷಣ ಸಂಸ್ಥೆಗಳು ಪೊಲೀಸ್ ಇಲಾಖೆಗೆ ಸಹಕಾರ ನೀಡಬೇಕು. ವಿದ್ಯಾರ್ಥಿಗಳಲ್ಲಿ ದುಶ್ಚಟ ಕಂಡುಬಂದಲ್ಲಿ ಶಿಕ್ಷಕರು ತಿದ್ದಬೇಕು. ಪಾಲಕರ ಗಮನಕ್ಕೂ ತರಬೇಕು. ಮಕ್ಕಳಿಗೆ ಉತ್ತಮ ಮಾರ್ಗದರ್ಶನ ನೀಡಿದರೆ ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡುತ್ತಾರೆಂದು ಪ್ರೇರೇಪಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ಹಾಗೂ ವಿಶೇಷ ಉಪನ್ಯಾಸಕರಾದ ಡಾ. ಸಿ.ಆರ್. ಚಂದ್ರಶೇಖರ್ ಪದ್ಮಶ್ರೀ ಪ್ರಶಸ್ತಿ ಪುರಸ್ಕøತರು ಹಾಗೂ ಖ್ಯಾತ ಮನೋವೈದ್ಯರು ಬೆಂಗಳೂರು ಅವರು ಮಾತನಾಡುತ್ತ, “ಮಧ್ಯಪಾನ, ಧೂಮಪಾನ, ಗುಟ್ಕಾ, ಬ್ರೌನ್ ಶುಗರ್, ಕೊಕೇನ್, ಗಾಂಜಾ ಮುಂತಾದ ಮಾಧಕ ವಸ್ತುಗಳ ಸೇವನೆಯಿಂದ ಆರೋಗ್ಯ ಹದಗೆಡುತ್ತದೆ. ಅದರಿಂದ ಕೌಟುಂಬಿಕ ಸಾಮಾಜಿಕ ಬದುಕು ಹಾಳಾಗುತ್ತದೆ. ದೇಹ ಮನಸ್ಸು ಸ್ವಸ್ಥವಾಗಿರುವುದಿಲ್ಲ. ಅದರಿಂದ ಮಕ್ಕಳು ದೂರವಿರಬೇಕು. ನಾಲಿಗೆ ರುಚಿಗೆ ಮಾರು ಹೋಗಿ ದೇಹದಲ್ಲಿ ಕೊಬ್ಬಿನಾಂಶ ಹೆಚ್ಚಾಗುವ ಆಹಾರ ಸೇವಿಸಬಾರದು. ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು.

ಕೆಟ್ಟವರ ಸಹವಾಸದಿಂದ ದುಶ್ಚಟಗಳು ಶುರುವಾಗುತ್ತದೆ. ಆರಂಭದಲ್ಲಿನ ಸಣ್ಣ ಚಟಗಳು ಮುಂದಿನ ಜೀವನದಲ್ಲಿ ಮಾರಕವಾಗುತ್ತವೆ. ಚಟ-ವ್ಯಸನಗಳು ನಿಮ್ಮ ಮನೆಯವರೆಗೂ ಚಾಕ್ಲೇಾಟ್-ಪೆನ್ಸಿಲ್ ಮುಖಾಂತರ ಬರುತ್ತವೆ. ಅದರಿಂದ ಎಚ್ಚರವಾಗಿರಬೇಕು. ಮೂಸಿ ನೋಡುವ ವಸ್ತುಗಳು, ಔಷಧಿಗಳು, ನಿದ್ರಾಮಾತ್ರೆ ನೋವು ನಿವಾರಕಗಳು, ಜೂಜಾಟ, ಬೆಟ್ಟಿಂಗ್ ಯಂತ್ರಗಳು, ಮುಂತಾದವುಗಳಿಂದ ಯುವ ಜನಾಂಗ ಹಾಳಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಕೆಲವು ದುಶ್ಚಟಗಳು ಸೇವಿಸಲೇಬೇಕು ಮಾಡಲೇಬೇಕು ಎಂಬ ಬಲವಾದ ಕಾರಣದಿಂದ ಆರೋಗ್ಯ ಸಮಸ್ಯೆ, ಸಾಲ, ಕೌಟುಂಬಿಕ ಕಲಹ, ಸಾಮಾಜಿಕ ಸಮಸ್ಯೆಗಳು ಕಾಣಿಸಿಕೊಂಡು ಬದುಕು ಹಾಳಾಗುತ್ತದೆ.

90 ಎಂಎಲ್ ಮಧ್ಯಪಾನ ಮಾಡಿದರೆ ಮೆದುಳಿನಲ್ಲಿನ 180 ಸೆಲ್ಗೊಳು ಸಾಯುತ್ತವೆ. ಮಧ್ಯಪಾನದ ಪ್ರಮಾಣ ಹೆಚ್ಚಾದಷ್ಟು ಅದರ ಗಂಭೀರತೆಯೂ ದುಪ್ಪಟಾಗುತ್ತದೆ. ಕುತೂಹಲ, ಜೊತೆಯಲ್ಲಿದ್ದವರ ಒತ್ತಾಯ, ಸಾಮಾಜಿಕ ಮಾಧ್ಯಮಗಳ ಪ್ರಭಾವ, ಅನುಕರಣೆಯಿಂದ ದುಶ್ಚಟಗಳಿಗೆ ಬಲಿಯಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ ಎಂದು ಎಚ್ಚರಿಸಿದರು. ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕಾದ ಕೆಲವು ಸೆಲೆಬ್ರಿಟಿಗಳು ಸಹ ಮಾದಕ ವಸ್ತುಗಳ ಪ್ರಚಾರ ಮಾಡುತ್ತಿದ್ದಾರೆ. ಅವುಗಳ ಮೋಹಕ್ಕೆ ಸಿಲುಕಿ ಯುವ ಜನಾಂಗ ಬದುಕನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆ. ಆದ್ದರಿಂದ, ಮಾದಕ ವಸ್ತುಗಳ ಸೇವನೆ ಬಿಟ್ಟು ಹಾಲು ಹಣ್ಣು ತರಕಾರಿ ಸೇವಿಸಿ ಆರೋಗ್ಯವೇ ಭಾಗ್ಯ ಎಂದರಿತು ಬಾಳಬೇಕು. ದುಶ್ಚಟದ ಅಪಾಯಗಳನ್ನು ಅರಿತು ಚಟ ತ್ಯಜಿಸಿ ಮನರಂಜನಾ, ಶಿಕ್ಷಣ, ಕ್ರೀಡೆ, ಧ್ಯಾನ ಮಾಡುವಂತೆ ಪ್ರೇರೇಪಿಸಿದರು.

ಪ್ರೊ. ಚನ್ನಾರಡ್ಡಿ ಪಾಟೀಲ ಸಂಸ್ಥಾಪಕರು ಸರ್ವಜ್ಞ ಶಿಕ್ಷಣ ಸಂಸ್ಥೆಗಳ ಸಮೂಹ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತ, ವಿದ್ಯಾರ್ಥಿಗಳು ಛಲದಿಂದ ಓದಿ ಶ್ರೇಷ್ಠ ವ್ಯಕ್ತಿಯಾಗಿ ಹೊರಹೊಮ್ಮಬೇಕು. ದುಶ್ಚಟಕ್ಕೆ ಒಳಗಾಗದೆ ಉತ್ತಮ ಸಂಸ್ಕಾರ, ಸಂಸ್ಕøತಿ, ಉನ್ನತ ಶಿಕ್ಷಣ ಪಡೆದು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಇತರರಿಗೆ ಆದರ್ಶರಾಗಿರಬೇಕೆಂದು ಪ್ರೋತ್ಸಾಹಿಸಿದರು.

ಜಸ್ಟಿಸ್ ಶಿವರಾಟ ವಿ. ಪಾಟೀಲ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಎಸ್.ಎಂ.ರಡ್ಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸರ್ವಜ್ಞ ಶಿಕ್ಷಣ ಸಂಸ್ಥೆಯ ಮುಖ್ಯ ಶೈಕ್ಷಣಿಕ ನಿರ್ದೇಶಕÀ ಅಭಿಷೇಕ್ ಚನ್ನಾರಡ್ಡಿ ಪಾಟೀಲ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಬಾಬುರಾವ ಯಡ್ರಾಮಿ, ಎಸ್.ಎಸ್.ಹಿರೇಮಠ, ಬಿ.ಎಸ್.ದೇಸಾಯಿ, ಶಶಿಶೇಖರರೆಡ್ಡಿ,  ಪ್ರಶಾಂತ ಕುಲಕರ್ಣಿ, ವಿನೂತಾ ಆರ್.ಬಿ., ಪ್ರಭುಗೌಡ ಸಿದ್ಧಾರೆಡ್ಡಿ,  ಕರುಣೇಶ್ ಹಿರೇಮಠ,  ಗುರುರಾಜ ಕುಲಕರ್ಣಿ, ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ. ವಿದ್ಯಾವತಿ ಪಾಟೀಲ ನಿರೂಪಿಸಿದರು. ಕು. ಸೃಜಲ್ಯಾ ತಂಡದವರು ಪ್ರಾರ್ಥಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here