ಕಲಬುರಗಿ: ಖ್ಯಾತಚಿತ್ರಕಲಾವಿದ ವಿ.ಜಿ. ಅಂದಾನಿ ಅವರ ವಿಭಿನ್ನ ಶೈಲಿಯ, ವೈವಿದ್ಯಮಯ ಕಲಾಕೃತಿಗಳು ಪ್ರದರ್ಶನದಲ್ಲಿಕಾಣ ಸಿಗುವುದು ದೃಶ್ಯ ಸಂಭ್ರಮಎಂದು ವಿಶ್ರಾಂತಡೀನರು, ಎಂ.ಎಸ್. ವಿಶ್ವವಿದ್ಯಾಲಯ, ಬರೋಡಾ ಪ್ರೊ. ವಿಜಯ ಬಾಗೋಡಿ ಹೇಳಿದರÀು.
ಬಯಲ ಬೆಳಕು ಪ್ರೊ. ವಿ.ಜಿ. ಅಂದಾನಿ ಅವರ 75ನೇ ವರ್ಷದ ವಜ್ರಮಹೋತ್ಸವದ ಸಮಾರಂಭ ಅಂಗವಾಗಿ ಏರ್ಪಡಿಸಿದ ಪ್ರೊ. ವಿ.ಜಿ. ಅಂದಾನಿಯವರಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
ಕಲಾಕೃತಿಗಳು ವಿದ್ಯಾರ್ಥಿಗಳಿಗೆ ಸ್ಪೂರ್ತಿ ನೀಡುತ್ತವೆ, ಶಿಷ್ಯವೃಂದ ಹೀಗೆ ಗುರುಗಳ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿಆಚರಿಸುವುದು ಸಂತಸದ, ಸಂಭ್ರಮದ ಸಂಗತಿ ಎಂದು ಅಭಿಪ್ರಾಯಪಟ್ಟರು. ಪ್ರೊ.ಬಸವರಾಜ ಮುಸಾವಳಗಿ ವಿಶ್ರಾಂತಡೀನರು, ಚಾಮರಾಜೇಂದ್ರ ಸರಕಾರಿದೃಶ್ಯಕಲಾ ಮಹಾವಿದ್ಯಾಲಯದ ಮೈಸೂರು ಮಾತನಾಡಿ ನಾಡಿನ ಕಲಾಕ್ಷೇತ್ರಕ್ಕೆ ಅಂದಾನಿಯವರ ಕೊಡುಗೆ ಅನನ್ಯವಾಗಿದೆ ಎಂದರು.
ಅಂದಾನಿಯವರು ತಮ್ಮ ವಿದ್ಯಾರ್ಥಿಗಳ ಕೋರ್ಸ ಮುಗಿಯುವರೆಗೂ ವಹಿಸುವ ಕಾಳಜಿ, ನೀಡುವ ಮಾರ್ಗದರ್ಶನ ಅಮೂಲ್ಯವಾಗಿದೆ ಎಂದು ಬಣ್ಣಿಸಿದರು. ಇದುಗುರು ಶಿಷ್ಯರ ಅವಿನಾಭಾವ ಸಂಬಂಧಕ್ಕೆ ಕಾರಣವಾಗುತ್ತದೆ ಎಂದರು.
ವಿಶ್ರಾಂತಉಪನ್ಯಾಸಕರು, ದಿ ಐಡಿಯಲ್ ಫೈನ್‍ಆರ್ಟ ಇನ್ಸಸ್ಟಿಟ್ಯೂಟ ಕಲಬುರಗಿಡಾ.ಪೂರ್ಣಿಮಾ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.ವೇದಿಕೆ ಮೇಲೆ ಪ್ರೊ.ವಿ.ಜಿ.ಅಂದಾನಿ, ವೀರೇಂದ್ರ ಶಹಾ, ರಾಜಶೇಖರ ಕೆ.ಪಾಟೀಲ ಉಪಸ್ಥಿತರಿದ್ದರು.ಕಿರಣ ಪಾಟೀಲ, ಪ್ರಾರ್ಥಿಸಿದರು.ಕೆ.ಎಂ. ಲೋಕಯ್ಯ ಸ್ವಾಗತಿಸಿ ನಿರೂಪಿಸಿದರು.ರಾಶಿಆರ್. ಪಾಟೀಲ ವಂದನಾರ್ಪಣೆ ಮಾಡಿದರು.
ಶಿಬಿರದ ಉದ್ಘಾಟನೆ: ಚಿತ್ರಕಲಾ ಶಿಬಿರವನ್ನು ಹಿರಿಯಕಲಾವಿದರು, ಉಪಾಧ್ಯಕ್ಷರುಕರ್ನಾಟಕಚಿತ್ರಕಲಾ ಪರಿಷತ್, ಬೆಂಗಳೂರು ಪ್ರೊ.ಕೆ.ಎಸ್. ಅಪ್ಪಾಜಯ್ಯ ಉದ್ಘಾಟಿಸಿದರು. ಅಂದಾನಿಯವರು ಸಂಸ್ಥೆಯನ್ನು ಬೆಳೆಸಿದ ರೀತಿಯನ್ನು ಶ್ಲಾಘಿಸಿದರು.ಅವರಅವಿರತ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆಎಂದರು.
ಹಿರಿಯಕಲಾವಿದರುಡಾ. ವಿಜಯ ಹಾಗರಗುಂಡಗಿಅಧ್ಯಕ್ಷತೆ ವಹಿಸಿದ್ದರು. ಪ್ರತಿಭಾಕಂಬಾರ ಪ್ರಾರ್ಥಿಸಿದರು.ಚಂದ್ರಹಾಸಜಾಲಿಹಾಳ ಸ್ವಾಗತಿಸಿ ಪ್ರಾಸ್ತಾವಿಕಮಾತಾಡಿದರು.ದೌಲತರಾಯದೇಸಾಯಿ ನಿರೂಪಿಸಿದರು. ಸಿದ್ದು ಮರಗೋಳ ವಂದಿಸಿದರು.ಅರವಿಂದಗುರುಜಿ, ಬಸವರಾಜಜಾನೆ, ಮಂಜುಳಾ ಜಾನೆ, ಸುಬ್ಬಯ್ಯ ನೀಲಾ, ವಿ.ಬಿ. ಬಿರಾದಾರಚಿತ್ರಶೇಖರಕಂಠಿ, ಎಂ.ಸಂಜೀವ, ನಾರಾಯಣ ಜೋಶಿ, ಶರಣು ಪಟ್ಟಣಶೆಟ್ಟಿ, ಈರಣ್ಣಾಕಂಬಾರ ಮಹ್ಮದಅಯಾಜುದ್ದಿನ್ ಪಟೇಲ, ಸಂಸ್ಥೆಯ ಸಿಬ್ಬಂದಿ ವಿದ್ಯಾರ್ಥಿಗಳು ಅಂದಾನಿ ಪರಿವಾರ ಮುಂತಾದವರುಇದ್ದರು.
ರಂಗೇರಿದ ಶಿಬಿರ; ಹಿರಿಯ, ಯುವಉದಯೋನ್ಮೂಖಕಲಾವಿದರು ಶಿಬಿರದಲ್ಲಿ ಭಾಗವಹಿಸಿ ಕಲಬರುಗಿಕಲಾಸಕ್ತರ ಗಮನ ಸೆಳೆದರು.ಕ್ಯಾನವಾಸ್ ಮೇಲೆ ವೈವಿದ್ಯಮಯ ರೇಖೆಗಳು, ವರ್ಣದ ಚಿತ್ತಾರಗಳು, ವಿಶಿಷ್ಟ ವಿನ್ಯಾಸದ ಆಕೃತಿಗಳು, ಸೊಗಸಾದ ಸಂಯೋಜನೆಕಲಾವಿದರಿಂದಕುಂಚದಿಂದ ಮೂಡಿ ಬಂದಿದೆ.