ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಸ್ವ ಸಹಾಯ ಗುಂಪಿನ ಮಹಿಳೆಯರ ಸಂವಾದ

0
26

ಸುರಪುರ: ತಾಲೂಕಿನ ದೇವರಗೋನಾಲ ಗ್ರಾಮದಲ್ಲಿ ಸೆಂಟ್ರಲ್ ಆರ್‍ಬಿಐ ಬ್ಯಾಂಕ್ ವ್ಯವಸ್ಥಾಪಕರೊಂದಿಗೆ ಸ್ವ ಸಹಾಯ ಗುಂಪಿನ ಮಹಿಳೆಯರ ಸಂವಾದ ಕಾರ್ಯಕ್ರಮ ನಡೆಸಲಾಗಿದೆ.

ಈ ಸಂದರ್ಭದಲ್ಲಿ ಬ್ಯಾಂಕ್ ವ್ಯವಸ್ಥಾಪಕರಾದ ಅಲೋಕ್ ಸಿನ್ ಅವರು ಮಾತನಾಡಿ,ಬ್ಯಾಂಕ್‍ಗಳು ಮಹಿಳೆಯರ ಸಬಲೀಕರಣಕ್ಕಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದಿವೆ.ಬ್ಯಾಂಕ್‍ಗಳು ಸ್ವ ಸಹಾಯ ಗುಂಪಿಗೆ ನೀಡುವ ಸಾಲ ಸೌಲಭ್ಯ ಹಾಗೂ ಸಬ್ಸಿಡಿ ಹಣವನ್ನು ಸದುಪಯೋಗ ಮಾಡಿಕೊಳ್ಳ ಬೇಕು ಎಂದು ತಿಳಿಸಿದರು.

Contact Your\'s Advertisement; 9902492681

ಇದೇ ಸಂದರ್ಭದಲ್ಲಿ ಮುಖಂಡ ವೆಂಕಟೇಶ ಬೇಟೆಗಾರ ಮಾತನಾಡಿ,ಇಂದು ಬ್ಯಾಂಕ್‍ಗಳ ಮೂಲಕ ಸಿಗುವ ಸೌಲಭ್ಯಗಳು ಕುಟುಂಬಗಳನ್ನು ಅಭಿವೃಧ್ಧಿ ಪಡಿಸುತ್ತವೆ,ಮಹಿಳೆಯರಿಗೆ ನೀಡುವ ಸಾಲ ಸೌಲಭ್ಯಗಳಿಂದ ಸಣ್ಣ ಸಣ್ಣ ವ್ಯಾಪಾರ,ಉದ್ಯಮಗಳನ್ನು ಆರಂಭಿಸುವ ಮೂಲಕ ಮಹಿಳೆಯರು ಆರ್ಥಿಕವಾಗಿ ಉನ್ನತಿ ಹೊಂದಬೇಕು,ಬ್ಯಾಂಕ್‍ಗಳಿಂದ ಪಡೆದ ಸಾಲವನ್ನು ಸಕಾಲದಲ್ಲಿ ಮರಳಿ ತುಂಬುವ ಮೂಲಕ ಹೆಚ್ಚಿನ ಸಬ್ಸಿಡಿಯನ್ನು ಪಡೆಯಬಹುದು ಮತ್ತು ಹೆಚ್ಚಿನ ಸಾಲವನ್ನು ಪಡೆಯಲು ಅನುಕೂಲವಾಗಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಭೀಮರಾಯ ಪಾಂಚಾಳ,ಎಡಿಬಿ,ಎಸ್‍ಬಿಐ ಬ್ಯಾಂಕ್ ವ್ಯವಸ್ಥಾಪಕರು,ಎನ್.ಆರ್.ಎಲ್.ಎಮ್ ಮೇಲ್ವಿಚಾರಕ ಆಮಪ್ಪ ಬಿಜಾಸಪುರ ಮಾತನಾಡಿದರು.

ದೇವರಗೋನಾಲ ಗ್ರಾಮದ ಸ್ವ ಸಹಾಯ ಸಂಘದ ಅಧ್ಯಕ್ಷರು,ಪದಾಧಿಕಾರಿ ಮಹಿಳೆಯರು ಸೇರಿದಂತೆ ಅನೇಕ ಜನ ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here