ಕಲಬುರಗಿ: ಪತ್ರಕರ್ತರ ಸಮಸ್ಯೆಗಳು ಜಟಿಲವಾಗಿದ್ದು ಅವುಗಳ ನಿವಾರಣೆಗೆ ಸರ್ಕಾರ ಸ್ಪಂದಿಸಬೇಕಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಸುರೇಶ ಬಡಿಗೇರ ಅಭಿಪ್ರಾಯ ಪಟ್ಟರು.
ಕರ್ನಾಟಕ ರಕ್ಷಣಾ ವೇದಿಕೆ (ಕಾವಲು ಪಡೆ) ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಮತ್ತು ಪತ್ರಕರ್ತರ ಸಮಸ್ಯೆ ಮತ್ತು ಸವಾಲುಗಳ ಕುರಿತ ಚಿಂತನ ಮಂಥನದ ದಿ. ರವಿ ಬೆಳೆಗೆರೆ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪತ್ರಕರ್ತರು ನಿಷ್ಠಾವಂತವಾಗಿ ನಿಷ್ಠುರ ವರದಿಗಾರಿಕೆ ಮಾಡಬೇಕು. ವರದಿಗಾರಿಕೆಯಲ್ಲಿ ನಿಷ್ಠತೆಗೆ ಲಂಕೇಶ ನಂತರದ ದಿನಗಳಲ್ಲಿ ರವಿ ಬೆಳಗೆರೆ ಅವರ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಮಾತನಾಡಿ, ಪತ್ರಿಕೆಗಳು ಪತ್ರಕರ್ತರು, ಈ ಸಮಾಜದ ಕಣ್ಣುಗಳಿದ್ದಂತೆ. ಅವುಗಳನ್ನು ಕಾಪಾಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಬೀದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಮುಖಂಡ ಪವನಕುಮಾರ ವಳಕೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಪತ್ರಕರ್ತರಾದ ರಾಜಕುಮಾರ ಉದನೂರ, ರಾಜು ಕೋಷ್ಠಿ, ಗಂಗಾಧರ ಹಿರೇಮಠ, ರಾಜಶೇಖರ್ ಮಠಪತಿ, ನಜೀರಮಿಯಾ ಹಟ್ಟಿ, ಶಿವಕುಮಾರ ಹಳ್ಳಿಖೇಡ, ಸಂತೋಷ ನಾಡಗೇರಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಅರಂಭಕ್ಕೂ ಮೊದಲು ನಟಿ, ನಿರೂಪಕಿ ಅಪರ್ಣಾ ಹಾಗೂ ಪತ್ರಕರ್ತ ವೆಂಕಟೇಶ ಮಾನು ಅವರ ಆತ್ಮಶಾಂತಿಗಾಗಿ ಎರಡು ನಿಮಿಷಗಳ ಮೌನಾಚರಣೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಗೌರವಾಧ್ಯಕ್ಷ ರವಿ ವಾಲಿ, ಕಾರ್ಯಾಧ್ಯಕ್ಷ ಪ್ರಹ್ಲಾದ್ ಹಡಗಿಲಕರ್, ಆನಂದ ಕಪನೂರ, ಮಧುಕರ ಕಾಂಬಳೆ ಸೇರಿದಂತೆ ಇನ್ನಿತರರಿದ್ದರು.