ಸುರುಪುರ: ನಗರದ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಕೌಶಲ್ಯ ಅಭಿವೃದ್ಧಿ ಕೇಂದ್ರವಾಗಿ ಆಯ್ಕೆಯಾಗಿದೆ ಎಂದು ಜಂಟಿ ಕಾರ್ಯದರ್ಶಿಗಳಾದ ಶ್ರೀದೊಡ್ಡಪ್ಪ ಎಸ್ ನಿಷ್ಠಿ ಹಾಗೂ ಪ್ರಾಚಾರ್ಯ ಡಾ. ಶರಣಬಸಪ್ಪ ಸಾಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ಒಟ್ಟು 15 ಮಹಾವಿದ್ಯಾಲಯಗಳು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಭಾರತದ ಕರ್ನಾಟಕದಲ್ಲಿರುವ ಸಾರ್ವಜನಿಕ ತಾಂತ್ರಿಕ ವಿಶ್ವವಿದ್ಯಾಲಯದ ಅಡಿಯಲ್ಲಿ Gleamtor Technologies Bangalore ತಿಳುವಳಿಕೆಯ ಸ್ಮರಣಿಕೆ ಮುಕಾಂತರ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ (National Skill Development Corporation-NSDC), ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (Karnataka Skill Development Corporation-KSDC) ಯೋಜನೆಯಡಿಯಲ್ಲಿ ಆಯ್ಕೆಯಾಗಿವೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ ಆಯ್ಕೆಆಗಿರುವುದು ಹರ್ಷತರಿಸಿದೆ.
ಈ ಭಾಗದ ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ, ಎಸ್ ಎಸ್ ಎಲ್ ಸಿ, ಪಿ ಯು ಸಿ ಹಾಗೂ ಪದವಿ ಮುಗಿದಂತ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಬಹಳ ಉಯುಕ್ತವಾದಲಿದೆ ಎಂದು ಮಹಾವಿದ್ಯಾಲಯ ಪ್ರಾಚಾರ್ಯರು ಹಂಚಿಕೊಂಡರು. ಕೌಶಲ್ಯ ಅಭಿವೃದ್ಧಿ ಕೇಂದ್ರದ ಕೌಶಲ್ಯ ಸಂಯೋಜಕರಾಗಿ ಪ್ರೊ. ಮಂಜುನಾಥ ಯಾಳವಾರ್ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.