ಕಲಬುರಗಿ: ಜಿಲ್ಲಾ ಗಾಣಿಗ ಸಮಾಜ ಸಂಘದ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಆದರೆ ಸಮಾಜದ ಬಂಧುಗಳು ಆಸಕ್ತಿಯಿಂದ ಸದಸ್ಯತ್ವವನ್ನು ಹೆಚ್ಚು ಹೆಚ್ಚು ಮಾಡಲಿ ಎಂದು ಅಧ್ಯಕ್ಷರಾದ ಶರಣಕುಮಾರ ಬಿ. ಬಿಲ್ಲಾಡ ಸಾಹು ನೆಲೋಗಿ ಮತ್ತು ಪ್ರಧಾನ ಕಾರ್ಯದರ್ಶಿ ಈಶ್ವರಗೌಡ ಅಣ್ಣಾರಾಯಗೌಡ ಮಾಲಿಪಾಟೀಲ ಕಲ್ಲೂರ ಮನವಿ ಮಾಡಿದ್ದಾರೆ.
ಸುಮಾರು ದಿನಗಳಿಂದ ನೊಂದಣಿ ಕಾರ್ಯ ನಡೆದಿದೆ. ಸಮಾಜದ ಎಲ್ಲಾ ಒಳಪಂಗಡಗಳು ಸಜ್ಜನ, ಕಲಶೆಟ್ಟಿ, ತೇಲಿ, ಮೇತ್ರೆ, ಗಾಣಿಗೇರ, ಕರಿಕೂಲ ಗಾಣಿಗ ನಾವು ಎಲ್ಲರೂ ಒಂದೇ ನಾವು ಗಾಣಿಗ ಸಮಾಜದವರು ಒಂದೇ ಎಂಬ ಭಾವನೆಯನ್ನು ಮೂಡುವಂತೆ ಸಮಾಜದ ವತಿಯಿಂದ ಒಂದೇ ವೇದಿಕೆಯಲ್ಲಿ ಒಂದಾಗಿ ಒಗ್ಗಟ್ಟಾಗಿ ಸಹೃದಯತೆ ಭಾವನೆ ಮೂಡುವಂತೆ ಸಂಘವು ಶ್ರಮಿಸುತ್ತಿದೆ.
ಕಲಬುರಗಿ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಮತ್ತು ಕಲಬುರಗಿ ನಗರದಲ್ಲಿ ವಾಸಿಸುವ ಗಾಣಿಗ ಸಮಾಜದ ಎಲ್ಲಾ ಒಳಪಂಗಡದವರು ಆಸಕ್ತಿಯಿಂದ ಸಂಘದ ಸಾಮಾನ್ಯ ಸದಸ್ಯತ್ವ ನೋಂದಣಿ ಮಾಡಿಸಿ ಎಂದು ತಿಳಿಸಿದ್ದಾರೆ.
ಸಮಾಜ ಸಂಘದ ನೊಂದಣಿಗೆ ಒಂದು ಆಧಾರ್ ಕಾರ್ಡ್ ಝೆರಾಕ್ಸ್ ಪ್ರತಿ, ಮೂರು ಫೋಟೋ, 500 ರೂಪಾಯಿ ನೊಂದಣಿ ಶುಲ್ಕ ಪಾವತಿಸಿ ನೊಂದಣಿ ಮಾಡಿಸಿ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ9980070737, +919449681994, +919663883224 ಸಂಪರ್ಕಿಸಬೇಕಾಗಿ ವಿನಂತಿ.