ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕಿ ಬಾತ್’ ನ 112ನೇ ಸಂಚಿಕೆಯನ್ನು ಮುಖಂಡರು ವೀಕ್ಷಿಸಿದರು.
ಈ ವೇಳೆ ಶಕ್ತಿ ಕೇಂದ್ರದ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದಂತೆ
ಪ್ಯಾರಿಸ್ ಒಲಿಂಪಿಕ್ಸ್ ಪ್ರಪಂಚದಾದ್ಯಂತ ಗಮನ ಸೆಳೆಯುತ್ತಿದೆ,ಇದರಲ್ಲಿ ಭಾಗವಹಿಸಿದ ನಮ್ಮ ಕ್ರೀಡಾಪಟುಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಹುರಿದುಂಬಿಸಿ,ಅಲ್ಲಿ ನಮ್ಮ ತ್ರಿವಣ ಧ್ವಜ ರಾರಾಜಿಸುವಂತೆ ಮಾಡೋಣ ಎಂದರು.
ಬರುವ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಗೆ ಪೂರ್ವಭಾವಿಯಾಗಿ ‘ಹರ್ ಘರ್ ತಿರಂಗಾ’ ಅಭಿಯಾನವನ್ನು ಪುನರಾರಂಭಿಸುವಂತೆ ಹೇಳಿರುವುದರಿಂದ ನಾವು ಪ್ರತಿ ವಾರ್ಡ್ ಗಳಲ್ಲಿ, ತ್ರಿವರ್ಣ ಧ್ವಜದೊಂದಿಗೆ ನಮ್ಮ ಸೆಲ್ಫಿಗಳನ್ನು ಕ್ಲಿಕ್ ಮಾಡಿ, ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿ ಸ್ವಾತಂತ್ರ್ಯ ಸೇನಾನಿಗಳಿಗೆ ಗೌರವಿಸೋಣ ಎಂದು ಹೇಳಿದರು.
ಈ ಸಂಧರ್ಭದಲ್ಲಿ ಯುವ ಮುಖಂಡ ವಿಠಲ ವಾಲ್ಮೀಕ ನಾಯಕ, ಶಕ್ತಿ ಕೇಂದ್ರದ ಪ್ರಧಾನ ಕಾರ್ಯದರ್ಶಿ ರವಿ ನಾಯಕ, ಎಸ್ ಸಿ ಮೂರ್ಚಾ ಅಧ್ಯಕ್ಷ ದೌಲತರಾವ ಚಿತ್ತಾಪುರಕರ್, ಪುರಸಭೆ ಮಾಜಿ ಸದಸ್ಯ ಕಿಶನ ಜಾಧವ,ಆನಂದ ಇಂಗಳಗಿ,ಈರಣ್ಣ ನಾಟಿಕಾರ,ಆನಂದ ಶಿರವಾಳ ಸೇರಿದಂತೆ ಇತರರು ಪಾಲ್ಗೊಂಡಿದ್ದರು.