ಸುರಪುರ: ದೇಶ ಕಾಯುವ ಯೋಧರಿಗೆ ಸನ್ಮಾನಿಸುವ ೨೫ನೇ ಕಾರ್ಗಿಲ್ ವಿಜಯೋತ್ಸವ ದಿ.ಶ್ರೀ ನರೇಶ ಕುಮಾರ ಸೇವಾ ಸಂಸ್ಥೆ ಮೂಲಕ ಹಮ್ಮಿಕೊಂಡಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದು ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಮಾತನಾಡಿದರು.
ನಗರದ ರಿಕ್ರಿಯೇಷನ್ ಕ್ಲಬ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಭಿತ್ತಿ ಪತ್ರ ಹಾಗೂ ಆಮಂತ್ರಣ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿ,ಆಗಸ್ಟ್ ೩ರಂದು ನಗರದ ಗರುಡಾದ್ರಿ ಕಲಾಮಂದಿರದಲ್ಲಿ ದಿ. ಶ್ರೀ ನರೇಶ ಕುಮಾರ ಸೇವಾ ಸಂಸ್ಥೆ (ರಿ) ಸುರಪುರ ವತಿಯಿಂದ ನಡೆಯುವ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲಾ ದೇಶಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ದೇಶ ಪ್ರೇಮ ಹಾಗೂ ಸೈನಿಕರ ಕುರಿತಾದ ಅಭಿಮಾನವನ್ನು ಮೆರೆಯಬೇಕು
ಭಾರತದ ರಕ್ಷಣೆಗಾಗಿ ತಮ್ಮ ಪ್ರಾಣ ತೆತ್ತ ಸೈನಿಕರ ಸ್ಮರಿಸುವುದು ಮತ್ತು ಗೌರವಿಸುವುದು ಭಾರತೀಯರ ಕರ್ತವ್ಯ. ಈ ನಿಟ್ಟಿನಲ್ಲಿ ವೀರ ಯೋಧರಿಗೆ ಸನ್ಮಾನ ನಡೆಯುತ್ತಿದೆ ಎಂದರು.
ಕಾರ್ಯಕ್ರಮದ ಆಯೋಜಕ ಸಚಿನ್ಕುಮಾರ ನಾಯಕ ಮಾತನಾಡಿ,ಆ. ೩ರಂದು ಬೆಳಗ್ಗೆ ೯ ಗಂಟೆಯಿAದ ಹುತಾತ್ಮ ವೀರಯೋಧ ಶರಣಬಸವ ಕೆಂಗೂರಿ ವೃತ್ತದಿಂದ ಸುರಪುರ ಮುಖ್ಯ ರಸ್ತೆ, ಮಾರುಕಟ್ಟೆಯ ಮಾರ್ಗವಾಗಿ ದರಬಾರ ರಸ್ತೆ, ಗಾಂಧಿ ವೃತ್ತದ ಮೂಲಕ ಗರುಡಾದ್ರಿ ಕಲಾ ಮಂದಿರದವರೆಗೆ ಮೆರವಣಿಗೆ ನಡೆಯಲಿದೆ ಎಂದು ತಿಳಿಸಿದರು.
ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಸಂಚಾಲಕ ಪಿ. ವೇಣುಗೋಪಾಲ ಸಾನ್ನಿಧ್ಯ ವಹಿಸುವರು. ಶಾಸಕ ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವರ ನರಸಿಂಹ ನಾಯಕ (ರಾಜುಗೌಡ), ರಿಕ್ರಿಯೇಶನ್ ಕ್ಲಬ್ ಅಧ್ಯಕ್ಷ ರಾಜಾ ಮುಕುಂದ ನಾಯಕ ಪಾಲ್ಗೊಳ್ಳುವರು.
ಚಿಂತಕ, ವಾಗ್ಮಿ ಕಿರಣ್ರಾಮ್ ದಿಕ್ಸೂಚಿ ಭಾಷಣಕಾರರಾಗಿ ಆಗಮಿಸುವರು. ದಿ.ಶ್ರೀ ನರೇಶ ಕುಮಾರ ಸೇವಾ ಸಂಸ್ಥೆಯ ಅಧ್ಯಕ್ಷ ನಾಗರಾಜ ನಾಯಕ ಅಧ್ಯಕ್ಷತೆ ವಹಿಸುವರು. ತಾಲೂಕಿನ ಸಮಸ್ತ ನಾಗರಿಕರು ಆಗಮಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಸೈನಿಕ ಸಂಸ್ಥೆಯ ಅಧ್ಯಕ್ಷ ಭೀಮಣ್ಣ ನಾಯಕ ಲಕ್ಷಿö್ಮÃಪುರ ಮಾತನಾಡಿದರು. ಮಂಜುನಾಥ ಪ್ಯಾಪ್ಲಿ, ವಿನೋದ, ಚಂದ್ರು ಪ್ರಧಾನಿ, ಆದರ್ಶ ಪೂಜಾರಿ, ನರಸಪ್ಪ, ಕರೆಪ್ಪ, ಕಾಶಿನಾಥ, ಬಸಣ್ಣಗೌಡ, ಅಂಬ್ರೇಶ, ಬಸಯ್ಯ ಹಿರೇಮಠ, ಹಣಮಂತ್ರಾಯ, ಪರಮೇಶ ಇದ್ದರು.