ಕಂಪಾಪುರ ಜಾಕ್‌ವೆಲ್‌ಗೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೇಟಿ

0
41

ಸುರಪುರ: ನಗರಕ್ಕೆ ಕುಡಿಯುವ ನೀರು ಸರಬರಾಗುವ ತಾಲೂಕಿನ ದೇವಾಪುರ ಬಳಿಯ ಕೃಷ್ಣಾ ನದಿ ತಟದ ಕಂಪಾಪುರಕ್ಕೆ ಶಾಸಕ ರಾಜಾ ವೇಣುಗೊಪಾಲ ನಾಯಕ ಭೇಟಿ ನೀಡಿ ವೀಕ್ಷಿಸಿದರು.

ಈ ಸಂದರ್ಭದಲ್ಲಿ ನಗರದ ನೀರು ಸರಬರಾಜು ಮಂಡಳಿಯ ಕಾಮಗಾರಿ ನಿರ್ವಹಿಸುವ ಸಹಾಯಕ ಅಭಿಯಂತರ ಶಂಕರಗೌಡ ಅವರಿಂದ ಜಾಕ್‌ವೆಲ್ ವಿನ್ಯಾಸ ಹಾಗೂ ಕಾರ್ಯನಿರ್ವಹಣೆ ಕುರಿತು ಮಾಹಿತಿ ಪಡೆದುಕೊಂಡರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ದೇವಾಪುರ ಗ್ರಾಮದ ಅನೇಕ ಮುಖಂಡರು ತಮ್ಮ ದೇವಾಪುರ ಗ್ರಾಮಕ್ಕೆ ಕಂಪಾಪುರ ಜಾಕ್‌ವೆಲ್ ಮೂಲಕ ಸುರಪುರಕ್ಕೆ ತೆಗೆದುಕೊಂಡು ಹೋಗುತ್ತಿರುವ ನೀರನ್ನು ದೇವಾಪುರ ಗ್ರಾಮಕ್ಕೂ ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.ಅಲ್ಲದೆ ದೇವಾಪುರ ಗ್ರಾಮದಲ್ಲಿನ ೧೧೦ ಕೆ.ವಿ ವಿದ್ಯುತ್ ಸರಬರಾಜು ಕೇಂದ್ರದಿAದ ದೇವಾಪುರಕ್ಕೆ ಪ್ರತ್ಯೇಕ ಲೈನ್‌ಗಳ ಹಾಕಿಸಿ ವಿದ್ಯುತ ಸರಬರಾಜು ಮಾಡಲು ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.ಇದಕ್ಕೆ ಸ್ಪಂದಿಸಿದ ಶಾಸಕರು ಮುಂಬರುವ ದಿನಗಳಲ್ಲಿ ನಿಮ್ಮ ಬೇಡಿಕೆ ಪರಿಶೀಲಿಸುವುದಾಗಿ ತಿಳಿಸಿದರು.

ಅಲ್ಲದೆ ಇದೇ ಸಂದರ್ಭದಲ್ಲಿ ನೀರು ಸರಬರಾಜು ಇಲಾಖೆ ಅಧಿಕಾರಿ ಎ.ಇ ಶಂಕರಗೌಡ ಮಾಹಿತಿ ನೀಡಿ,ದೇವಾಪುರ ಗ್ರಾಮಕ್ಕೆ ನೀರು ಸರಬರಾಜು ಮಾಡಲು ವಾಲ್ ಅಳವಡಿಸಲಾಗಿದೆ,ಆದರೆ ನೀರು ಶುದ್ಧೀಕರಣಕ್ಕೆ ಸ್ಥಳಿಯ ಗ್ರಾಮ ಪಂಚಾಯತಿ ವತಿಯಿಂದ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನದಿಯನ್ನು ವೀಕ್ಷಣೆ ಮಾಡಿ ಬೆಳೆ ಹಾನಿಯ ಕುರಿತು ರೈತ ರಿಂದ ಮಾಹಿತಿ ಪಡೆದರು,ಅನೇಕ ಜನರು ಸದ್ಯಕ್ಕೆ ನದಿ ದಂಡೆಯಲ್ಲಿನ ಜಮೀನುಗಳ ಒಂದಿಷ್ಟು ಬೆಳೆ ಹಾನಿಯಾಗಿದೆ,ಆದರೆ ಇನ್ನೂ ೨ ಲಕ್ಷ ಕ್ಯೂಸೆಕ್ ನೀರು ಬಂದರೆ ಅನೇಕ ರೈತರ ಜಮೀನಿನಲ್ಲಿಯ ಬೆಳೆಗಳು ಹಾನಿಯಾಗಲಿವೆ ಎಂದು ತಾಲೂಕ ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಚನ್ನಪ್ಪಗೌಡ ಜಕ್ಕನಗೌಡ್ರ್ ಶಾಸಕರಿಗೆ ವಿವರಿಸಿದರು.

ಈ ಸಂದರ್ಭದಲ್ಲಿ ಗ್ರೇಡ-೨ ತಹಸಿಲ್ದಾರ್ ಮಲ್ಲಯ್ಯ ದಂಡು,ನಗರಸಭೆ ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ,ಪಿ.ಐ ಆನಂದ ವಾಘಮೊಡೆ ,ಮುಖಂಡರಾದ ವೆಂಕೋಬ ಸಾಹುಕಾರ ಮಂಗಳೂರ,ನಿAಗರಾಜ ಬಾಚಿಮಟ್ಟಿ,ಬಸನಗೌಡ ಪಾಟೀಲ್ ದೇವಾಪುರ,ಚಂದ್ರಶೇಖರ ದಂಡಿನ್,ಭೀಮರಾಯ ಮೂಲಿಮನಿ,ಸಂತೋಷ ಬಾಗಲಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here