ಹಿರಿಯ ಸಾಹಿತಿ ರಾಜೇಂದ್ರ ಝಳಕಿ ವಿರಚಿತ ನಾಟಕ ‘ತಾತಾ’ ಲೋಕಾರ್ಪಣೆ

0
255

ಕಲಬುರಗಿ: ನಗರದ ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ಸಂಸ್ಥೆಯ ಕಸ್ತೂರಿಬಾಯಿ ಪಿ ಬುಳ್ಳಾ ಸ್ಮಾರಕ ಭವನದಲ್ಲಿ ಇಂದು ನಡೆದ ಹಿರಿಯ ಸಾಹಿತಿ ರಾಜೇಂದ್ರ ಝಳಕಿ ಅವರ ವಿರಚಿತ ನಾಟಕ ‘ತಾತಾ’ ಲೋಕಾರ್ಪಣೆ ಸಮಾರಂಭದ ಉದ್ಘಾಟನೆಯನ್ನು ಆಳಂದ ತಾಲೂಕಿನ ಮಾಜಿ ಶಾಸಕರಾದ ಸುಭಾಷ ಆರ್ ಗುತ್ತೇದಾರ ನೆರವೇರಿಸಿ ಮಾತನಾಡುತ್ತ ರಾಜೇಂದ್ರ ಝಳಕಿ ಅವರ ಕಡು ಬಡತನದಲ್ಲಿ ಹುಟ್ಟಿ ಕಷ್ಟದ ಜೀವನ ಮಾಡುತ್ತ ಸರ್ಕಾರಿ ಶಿಕ್ಷಕರ ಹುದ್ದೆಗೆ ಆಯ್ಕೆಯಾದರು.

ಶಿಕ್ಷಣ ಮತ್ತು ಸಂಸ್ಕಾರಕ್ಕೆ ಬಡತನ ಅಡ್ಡಿಯಾಗಬಾರದು ಎಂದರು.ಇಡಿ ವಿಶ್ವದಲ್ಲಿಯೇ ಭಾರತದ ಸಂಸ್ಕೃತಿ ಅತ್ಯಂತ ಶ್ರೇಷ್ಠವಾದದ್ದು ಶಿಕ್ಷಕರು ಮಕ್ಕಳಿಗೆ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳು ಹಾಗೂ ಉತ್ತಮ ಸಂಸ್ಕಾರವನ್ನು ಕಲಿಸುವ ಮೂಲಕ ಸಾಮಾಜಿಕ ಬದಲಾವಣೆ ತರುವ ಕಾರ್ಯ ಶಿಕ್ಷಕರಿಂದ ಆಗಬೇಕು ಎಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ಸಂಸ್ಥೆಯ ಗೌರವಾಧ್ಯಕ್ಷರಾದ ಡಾ.ಬಿ.ಪಿ.ಬುಳ್ಳಾ ವಹಿಸಿದ್ದರು. ನ್ಯಾಯವಾದಿಗಳ ರಮೇಶ ಟಿ ಕಮಕನೂರ ತಾತಾ ನಾಟಕವನ್ನು ಲೋಕಾರ್ಪಣೆ ಗೊಳಿಸಿದರು. ಮುಖ್ಯ ಅತಿಥಿಗಳಾಗಿ ಸೂರ್ಯಕಾಂತ ಮದಾನೆ ಉಪನಿರ್ದೇಶಕರು ಶಾಲಾ ಶಿಕ್ಷಣ ಮತ್ತು ಸಾಕ್ಷಾರತ ಇಲಾಖೆ ಮಹೇಶ ಹೂಗಾರ ಅಧ್ಯಕ್ಷರು ಪ್ರೌಢಶಾಲಾ ಶಿಕ್ಷಕರ ಸಂಘ ಸೈಬಣ್ಣ ಕೆ ವಡಗೇರಿ ಕಾರ್ಯಾಧ್ಯಕ್ಷರು ಅಖಿಲ ಕರ್ನಾಟಕ ಸ್ನೇಹ ಗಂಗಾ ವಾಹಿನಿ ನೀಲಕಂಠ ಎಂ ಜಮಾದಾರ ನಿವೃತ್ತ ಸಾಹಯಕ ಕಾರ್ಯನಿರ್ವಾಹಕ ಇಂಜಿನೀಯರ್ . ವೇದಿಕೆ ಮೇಲೆ ಉಪಸ್ಥಿತರಿದ್ದರು.

ಲಲಿತಾ, ರಾಜೇಂದ್ರ ಝಳಕಿ ಅವರ ಮದುವೆಯ ರಜತ ಮಹೋತ್ಸವ ಆಚರಣೆ ಮಾಡಲಾಯಿತು. ರಾಮಶೆಟ್ಟಪ್ಪ ಪಾಟೀಲ ಮಾಲಿಕರು ಸಪ್ತಗಿರಿ ಹೋಟೆಲ ಇವರಿಗೆ ವಿಶೇಷ ಸನ್ಮಾನ ಮಾಡಲಾಯಿತು.
ಧರ್ಮರಾಜ ಜವಳಿ ಸ್ವಾಗತಿಸಿದರು,ಸಿದ್ದಪ್ಪ ಜಿ ಮಹಾಗಾಂವ ಪ್ರಾಸ್ತಾವಿಕವಾಗಿ ಮಾತನಾಡಿದರು.ಶ್ರೀ ಬಾಬುರಾವ ಕೊಬಾಳ ಪ್ರಾರ್ಥನೆ ಗೀತೆ ಹಾಡಿದರು.ಚಂದ್ರಕಾAತ ತಳವಾರ ನಿರೂಪಿಸಿದರು.ರಮೇಶ ತಲಾರಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here