ಕಲಬುರಗಿ: ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ

0
111

ಕಲಬುರಗಿ: ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಯ, ಶ್ರೀಮತಿ, ವೀರಮ್ಮ ಗಂಗಸಿರಿ ಮಹಿಳಾ ಮಹಾವಿದ್ಯಾಲಯ, ಕಲಬುರಗಿ ಹಾಗೂ ಡಾ. ಪಿ.ಎಸ್. ಶಂಕರ ಪ್ರತಿಷ್ಠಾನ, ಕಲಬುರಗಿ ಇವರುಗಳ ಸಂಯುಕ್ತಾಶ್ರಯದಲ್ಲಿ ಮಹಾವಿದ್ಯಾಲಯದ ಜೈವಿಕ ಹಾಗೂ ರಾಸಾಯನಿಕ ವಿಜ್ಞಾನ ವಿಭಾಗಳ ವತಿಯಿಂದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕೀರಣ ಕಾರ್ಯಕ್ರಮವನ್ನು ಗುಲ್ಬರ್ಗಾ ವಿಶ್ವವಿದ್ಯಾಲಯ ಉಪಕುಲಪತಿ ಪ್ರೊ ದಯಾನಂದ ಅಗಸರ ಸರ್ ವರು ದೀಪ ಬೆಳಗಿಸಿ ಉದ್ಘಾಟಿಸಿ ಚಾಲನೆ ನೀಡಿದರು.

ಉದ್ಘಾಟನಾ ಭಾಷಣದಲ್ಲಿ ಒತ್ತಡದ ಬದುಕಿನ ನಡುವೆ ಆರೋಗ್ಯದ ಕಡೆಗೆ ಗಮನ ನೀಡುವದು ಮುಖ್ಯವಾಗಿದೆ. ಇಂದಿನ ಬದುಕಿನಲ್ಲಿ ಎಲ್ಲ ಭಾಗ್ಯ ಗಳಿಗಿಂತ ಆರೋಗ್ಯ ಭಾಗ್ಯ ಶ್ರೇಷ್ಠ ಭಾಗ್ಯ ಹೀಗಾಗಿ ರಾಸಾಯನಿಕ ಗೊಬ್ಬರ ಬಳಸಿದ ಪದಾರ್ಥಗಳಿಗಿಂತಲೂ ಸಾವಯವ ವಿಧಾನದಲ್ಲಿ ಬೆಳೆದ ಆಹಾರ ಪದಾರ್ಥಗಳ ಬಳಕೆ ಹೆಚ್ಚಾಗಬೇಕೆಂದು ಹೇಳಿದರು.

Contact Your\'s Advertisement; 9902492681

ಕಾರ್ಯಕ್ರಮ ಅಧ್ಯಕ್ಷತೆಯನ್ನು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶಶೀಲ್ ಜಿ ನಮೋಶಿ ವಹಿಸಿದ್ದರು. ಪಿ ಎಸ್ ಶಂಕರ್ ಪ್ರತಿಷ್ಠಾನದ ರೂವಾರಿ ನಾಡೋಜ ಪ್ರಖ್ಯಾತ ವೈದ್ಯ ಡಾ ಪಿ ಎಸ್ ಶಂಕರ್ ವಿಚಾರ ಸಂಕಿರಣದ ಮುಖ್ಯ ವಕ್ತಾರರಾಗಿದ್ದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಹಾರಾಷ್ಟ್ರದ ಮುಂಬೈನ ಪ್ರಾಧ್ಯಾಪಕರಾದ ಡಾ. ಸೀಮಾ ಸಾಂಬ್ರಾಣಿ, ವಿಚಾರ ಸಂಕಿರಣದ ಸಂಘಟನಾ ಕಾರ್ಯದರ್ಶಿ ಡಾ ಚಂದ್ರಕಲಾ ಪಾಟೀಲ್ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಉದಯ ಚಿಂಚೊಳ್ಳಿ, ಆಡಳಿತ ಮಂಡಳಿಯ ಸದಸ್ಯರಾದ ನಿಶಾಂತ್ ಎಲಿ,ಪ್ರಾಚಾರ್ಯರಾದ ಡಾ ರಾಜೇಂದ್ರ ಕೊಂಡಾ ವೇದಿಕೆಯಲ್ಲಿ ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಡಾ ಮೋಹನರಾಜ ಪತ್ತಾರ, ಶ್ರೀಮತಿ ಉಮಾ ರೇವೂರ, ಡಾ ಮಹೇಶ್ ಗಂವಾರ, ಡಾ ಪ್ರೇಮಚಂದ ಚವ್ಹಾಣ್, ಡಾ ವೈಜಿನಾಥ ವರ್ಮಾ, ಸಂಸ್ಥೆಯ ವಿಶೇಷ ಅಧಿಕಾರಿ ಡಾ ಪರಮೇಶ್ ಬಿರಾದಾರ ಉಪಸ್ಥಿತರಿದ್ದರು.

ಶಿಕ್ಷಣ 170 ಕ್ಕಿಂತಲೂ ಹೆಚ್ಚು ವಿವಿಧ ವಿಶ್ವವಿದ್ಯಾಲಯ, ಹಾಗೂ ಪದವಿ ಮಹಾವಿದ್ಯಾಲಯ ಪ್ರಾಧ್ಯಾಪಕರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು ಎಂದು
ಸಂಸ್ಥೆಯ ಸಮೂಹ ಮಾಧ್ಯಮದ ಸಂಯೋಜಕರಾದ ಐ ಕೆ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here