ಕಲಬುರಗಿ; ನಗರದ ವಿದ್ಯಾನಗರ ಕಾಲೋನಿಯ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ವಿದ್ಯಾನಗರ ವೆಲ್‌ಫೇರ ಸೊಸೈಟಿಯ ಸರ್ವ ಸದಸ್ಯರ ಸಭೆಯಲ್ಲಿ ಮುಂದಿನ ೨ ವರ್ಷ (೨೦೨೪-೨೦೨೬) ಅವಧಿಗಾಗಿ ಹೊಸ ಆಡಳಿತ ಮಂಡಳಿ ಆಯ್ಕೆ ಮಾಡಲಾಯಿತು ಎಂದು ಸೊಸೈಟಿಯ ನೂತನ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದಿನ ವರ್ಷದ ಸೊಸೈಟಿಯ ಜಮಾ-ಖರ್ಚಿನ ಲೆಕ್ಕಪತ್ರ ಪರಿಶೀಲಿಸಿ, ಚರ್ಚಿಸಿ ಅನುಮೋದನೆ ನೀಡಿದ ನಂತರ ಸೊಸೈಟಿಯ ಹೊಸ ಪದಾಧಿಕಾರಿಗಳ ಆಯ್ಕೆಯ ಪ್ರಕ್ರಿಯೆ ಪ್ರಾರಂಭವಾಗಿ ಸೊಸೈಟಿಯ ಹಾಗು ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗಳು ಹಾಗು ಸೊಸೈಟಿಯ ಆಡಳಿತ ವೈಖರಿ ಮೆಚ್ಚುಗೆ ವ್ಯಕ್ತಪಡಿಸುತ್ತ ಮೊದಲಿದ್ದ ಪದಾಧಿಕಾರಿಗಳೇ ಪುನರ ಆಯ್ಕೆಗಾಗಿ ನಿರ್ಧಾರ ಕೈಗೊಳ್ಳಲಾಯಿತು.
ಮಲ್ಲಿನಾಥ ದೇಶಮುಖ, ಉಮೇಶಶೆಟ್ಟಿ ಉಪಾಧ್ಯಕ್ಷ, ಗುರುಲಿಂಗಯ್ಯ ಮಠಪತಿ ಖಜಾಂಚಿ ಎಂದು ಮರು ಆಯ್ಕೆಯಾಗಿದ್ದು, ಉಳಿದ ಆಡಳಿತ ಮಂಡಳಿಯ ಸದಸ್ಯರ ನೇಮಕ ಮಾಡಲು ಅಧ್ಯಕ್ಷರಿಗೆ ಅಧಿಕಾರ ನೀಡಲಾಯಿತು.
ಪ್ರತಿ ವರ್ಷದಂತೆ ಈ ವರ್ಷ ಕೂಡಾ ಶ್ರಾವಣ ಮಾಸದಲ್ಲಿ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಪುರಾಣ ಪ್ರವಚನ ನಡೆಸಲು ಸೊಸೈಟಿ ಹಾಗು ಕಾಲೋನಿ ಅಭಿವೃದ್ಧಿ ಕಾಮಗಾರಿಗಳ ಕುರಿತು ನಿರ್ಧಾರ ತೆಗೆದುಕೊಳ್ಳಲಾಯಿತು.
ಸೊಸೈಟಿಯ ಹಿರಿಯ ಸದಸ್ಯರಾದ ಬಸವರಾಜ ಪುಣ್ಯಶೆಟ್ಟಿ, ಬಸವಂತರಾವ ಜಾಬಶೆಟ್ಟಿ, ಕಾಶಿನಾಥ ಚಿನ್ಮಳ್ಳಿ, ವಿಶ್ವನಾಥ ರಟಕಲ್, ಬಗಿರಥ ಸಿಗಚಿ, ವಿರುಪಾಕ್ಷಪ್ಪ ಕಿರಣಗಿ, ಗಣಪತರಾವ ನಿಲೇಗಾರ, ಶಾಂತಯ್ಯ ಬೀದಿಮನಿ, ನೂರಂದಪ್ಪ ಧಾರಕ, ಕಲ್ಯಾಣಪ್ಪ ಮುತ್ತಾ, ರೇವಣಸಿದ್ದಪ್ಪ ಜೀವಣಗಿ, ಶ್ರೀಕಾಂತ ಜಾಜಿ, ನಾಗಭೂಷಣ ಹಿಂದೊಡ್ಡಿ, ಸದಾಶಿವ ಕಂಠಿ, ನಾಗರಾಜ ಹೆಬ್ಬಾಳ, ಮಲ್ಲಿನಾಥ ತಂಬಾಕೆ, ಸಿದ್ರಾಮಪ್ಪ ಬಿರಾದಾರ, ಲಿಂಗರಾಜ ಕಾಳೆ, ನಾಗರಾಜ ಮುಗಳಿ, ತರುಣಶೇಖರ ಬಿರಾದಾರ, ಶ್ರೀಮತಿ ಗೌರಮ್ಮ ಪಾಟೀಲ, ಶರಣಯ್ಯ ಹಿರೇಮಠ ಹಾಗೂ ಇತರರು ಉಪಸ್ಥಿತರಿದ್ದರು.