ವಾಡಿ-ಶಹಾಬಾದ ವೃತ್ತದಲ್ಲಿ ಸಾರ್ವಜನಿಕರಿಗೆ ಬೆಳಕಿನ ವ್ಯವಸ್ಥೆ ಮಾಡಲು ಆಗ್ರಹಿಸಿ ಮನವಿ

0
112

ಶಹಾಬಾದ: ರಾಷ್ಟ್ರೀಯ ಹೆದ್ದಾರಿ-150ಗೆ ಹೊಂದಿಕೊಂಡಿರುವ ನಗರದ ವಾಡಿ-ಶಹಾಬಾದ ವೃತ್ತ, ಜೇವರ್ಗಿ ವೃತ್ತ ಹಾಗೂ ಇರಾನಿ ಲೆಔಟ್‍ನಲ್ಲಿ ಬೆಳಕಿನ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿ ಗುರುವಾರ ಯುವ ಮುಖಂಡ ವಿಜಯಕುಮಾರ ಹಳ್ಳಿ ನೇತೃತ್ವದಲ್ಲಿ ತಹಸೀಲ್ದಾರ ಜಗದೀಶ ಚೌರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಿಜಯಕುಮಾರ ಹಳ್ಳಿ, ತಾಲೂಕಾ ಪ್ರದೇಶವಾದ ನಗರದಲ್ಲಿ ಸಾರ್ವಜನಿಕರಿಗೆ ಸರಿಯಾದ ಬೆಳಕಿನ ವ್ಯವಸ್ಥೆಯಿಲ್ಲದಿರುವುದು ನೋಡಿದರೇ ನಾಚಿಕೆಗೇಡಿನ ಸಂಗತಿ.ಕಳೆದ ಎರಡು ತಿಂಗಳಿನಿಂದ ಇಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದೇ ಸಾರ್ವಜನಿಕರು ತೊಂದರೆಗೆ ಒಳಗಾಗುತ್ತಿದ್ದಾರೆ.ನಗರದ ಹೊರವಲಯದಲ್ಲಿ ನಿರ್ಜನ ಪ್ರದೇಶವಾಗಿರುವುದರಿಂದ ರಾತ್ರಿ ಮಹಿಳೆಯರಿಗಂತು ಎಲ್ಲಿಲ್ಲದ ಸಂಕಟ ಅನುಭವಿಸುತ್ತಿದ್ದಾರೆ.

Contact Your\'s Advertisement; 9902492681

ಈ ಹಿಂದೆ ನಗರದ ಜೆಪಿ ಸಿಮೆಂಟ ಕಾರ್ಖಾನೆಯವರು ಬೆಳಕಿನ ವ್ಯವಸ್ಥೆ ಮಾಡಲಾಗಿತ್ತು.ಆದರೆ ಅದು ಕೂಡ್ ಬಂದ್ ಮಾಡಲಾಗಿದೆ.ಅಲ್ಲದೇ ಸುಮಾರು 4 ವರ್ಷಗಳ ಹಿಂದೆ ಜಿಪಂ ವತಿಯಿಂದ ಹೈಮಾಸ್ಟ ದೀಪ ಅಳವಡಿಸಲಾಗಿದೆ.ಆದರೆ ಇಲ್ಲಿಯವರೆಗೆ ವಿದ್ಯುತ್ ಜೋಡಣೆ ಮಾಡದಿರುವುದರಿಂದ ಹೈಮಾಸ್ಟ ದೀಪ ಇದ್ದು ಇಲ್ಲದಂತಾಗಿದ್ದು, ಜನರು ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹೆದ್ದಾರಿ-150ಗೆ ಹೊಂದಿಕೊಂಡಿರುವ ಮುಖ್ಯ ವೃತ್ತದಲ್ಲಿ ಈ ರಿತೀಯ ವ್ಯವಸ್ಥೆ ಕಂಡು ಬಂದಿದ್ದು, ಇಲ್ಲಿನ ಜನಪ್ರತಿನಿಧಿಗಳ ಕಾರ್ಯವೈಖರಿಗೆ ಹಿಡಿಶಾಪ ಹಾಕುತ್ತಿದ್ದಾರೆ.ದಟ್ಟ ಸಂಚಾರಿ ವ್ಯವಸ್ಥೆ ಹಾಗೂ ಚಿತ್ತಾಪೂರ,ವಾಡಿ, ಯಾದಗಿರಿ ಮುಖ್ಯ ನಗರಕ್ಕೆ ಈ ಮಾರ್ಗದ ಮೂಲಕವೇ ಸಾಕಷ್ಟು ವಾಹನಗಳು ಹೋಗುತ್ತವೆ. ಮುಖ್ಯ ವೃತ್ತವಾಗಿರುವುದರಿಂದ ಜನದಟ್ಟಣೆ ಸಾಕಷ್ಟಿರುತ್ತದೆ. ಸಂಜೆ ಕತ್ತಲು ಆವರಿಸಿರುವುದರಿಂದ ಪಾದಚಾರಿಗಳು, ವಾಯುವಿಹಾರ ಮಾಡುವವರು, ಪ್ರಯಾಣಿಕರು ಈ ಕಡೆ ಬರಲು ಭಯ ಪಡುತ್ತಿದ್ದಾರೆ. ಅಲ್ಲದೇ ವಾಹನಗಳ ಅಪಘಾತಗಳು ಹೆಚ್ಚುತ್ತಿವೆಯಾದರೂ ಯಾರು ಈ ಕಡೆ ಗಮಹರಿಸುತ್ತಿಲ್ಲ. ಅಲ್ಲದೇ ವರ್ಷಗಟ್ಟಲೇ ಸಂಬಂಧಪಟ್ಟ ಅಧಿಕಾರಿ ಮೌನವಾಗಿದ್ದಾರೆ. ಕೂಡಲೇ ನಗರದಲ್ಲಿ ಬೆಳಕಿನ ವ್ಯವಸ್ಥೆ ಮಾಡಿಕೊಡಬೇಕು.ಅಲ್ಲದೇ ವಾಡಿ-ಶಹಾಬಾದ ವೃತ್ತದಲ್ಲಿ ಬಸ್ ನಿಲ್ದಾಣ ನಿರ್ಮಿಸಬೇಕು, ಮಹಿಳಾ ಶೌಚಾಲಯಗಳ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.

ಅಮೀತ್ ಹಳ್ಳಿ, ಮೆಹಬೂಬ ಪಟೇಲ್, ಕುಮಾರ ರಾಠೋಡ, ರಾಹುಲ್ ಸಜ್ಜನ್, ಅಲತಾಮಶ್ ಖಾನ್, ಇಮ್ರಾನ್, ಸುನೀಲಕುಮಾರ, ಆಶ್ರಫ್, ವೆಂಕಟೇಶ ದಂಡಗುಲಕರ್,ಮುಸ್ತಾಫ್,ಮಹ್ಮದ್ ಶೌರಭ, ಮತೀನ್ ಗೋಳಾ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here