ಮಾಹಾತ್ಮಾ ಶ್ರೀ ಚರಬಸವೇಶ್ವರರ ಪುರಾಣ ಪ್ರವಚನ

0
23

ಕಲಬುರಗಿ; ನಗರದ ಸೇಡಂ ರಸ್ತೆಯ ಬಸವೇಶ್ವರ ಆಸ್ಪತ್ರೆ ಎದುರುಗಡೆ ಇರುವ ವಿದ್ಯಾನಗರ ಕಾಲೋನಿಯ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ವಿದ್ಯಾನಗರ ವೆಲ್‍ಫೇರ ಸೊಸೈಟಿಯ ವತಿಯಿಂದ ಯಾದಗಿರಿ ಜಿಲ್ಲೆಯ ಸಗರನಾಡಿನ ಶಹಾಪೂರದ ಮಹಾತ್ಮಾ ಶ್ರೀ ಚರಬಸವೇಶ್ವರರ ಪುರಾಣ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಆಗಸ್ಟ 05ರಂದು ಸೋಮವಾರ ಸಾಯಂಕಾಲ 6-00ಗಂಟೆಗೆ ಪುರಾಣ ಪ್ರವಚನ ಪ್ರಾರಂಭಗೊಂಡು ಶ್ರಾವಣಮಾಸ ತಿಂಗಳ ಪರ್ಯಂತ ಪ್ರತಿನಿತ್ಯ ಸಾಯಂಕಾಲ 6:30ಗಂಟೆಯಿಂದ 8:30ಗಂಟೆಯವರೆಗೆ ಪುರಾಣ ಪ್ರವಚನ ಜರುಗುವುದು ಸದ್ಭಕ್ತರು ಪ್ರತಿನಿತ್ಯ ಆಗಮಿಸಿ ಪುರಾಣ ಆಲಿಸಿ ಪುನಿತರಾಗಬೇಕೆಂದು ವಿದ್ಯಾನಗರ ವೆಲ್‍ಫೇರ ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Contact Your\'s Advertisement; 9902492681

ಕರ್ನಾಟಕ ಸರಕಾರದ ಸಣ್ಣ ಕೈಗಾರಿಕಾ ಹಾಗು ಸಾರ್ವಜನಿಕ ಉದ್ಯಮ ಮತ್ತು ಯಾದಗಿರಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಶರಣಬಸಪ್ಪ ದರ್ಶನಾಪೂರ ಪುರಾಣ ಪ್ರವಚನ ಉದ್ಘಾಟಿಸಲಿದ್ದಾರೆ. ಕಡಗಂಚಿ ಕಟ್ಟಿಮನಿ ಸಂಸ್ಥಾನದ ಪೂಜ್ಯ ವೀರತಪಸ್ವಿ ಶ್ರೀ ಷ.ಬ್ರ. ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದಾರೆ.

ಶ್ರೀ ಚರಬಸವೇಶ್ವರ ಗದ್ದುಗೆ ವಂಶಸ್ಥರು ಹಾಗು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಡಾ. ಶರಣು ಬಿ.ಗದ್ದುಗೆ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಎಂ.ಬಿ ನಗರದ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಶಿವಾನಂದ ವಾಲೀಕಾರ ಅತಿಥಿಗಳಾಗಿ ಆಗಮಿಸಲಿದ್ದಾರೆ. ವಿದ್ಯಾನಗರ ವೆಲ್‍ಫೇರ ಸೊಸೈಟಿಯ ಅಧ್ಯಕ್ಷರಾದ ಮಲ್ಲಿನಾಥ ದೇಶಮುಖ ಅಧ್ಯಕ್ಷತೆ ವಹಿಸಲಿದ್ದಾರೆ.

ಪುರಾಣ ಪ್ರವಚನಕಾರರು : ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳ ಶಿಷ್ಯರಾದ ವೇ.ಮೂ. ಶಂಭುಲಿಂಗ ಶಾಸ್ತ್ರಿಗಳು ಪ್ರವಚನ ಮಾಡಲಿದ್ದಾರೆ.

ಸಂಗೀತಗಾರರು: ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾದ ಶಿವಕುಮಾರ ಎಂ. ಹಿರೇಮಠ ಜಾಲಹಳ್ಳಿ ಸಂಗೀತ ಸೇವೆ ನೀಡಲಿದ್ದಾರೆ.

ತಬಲಾವಾದಕರು: ಖ್ಯಾತ ಆಕಾಶವಾಣಿ ಮತ್ತು ದೂರದರ್ಶನ ಕಲಾವಿದರಾದ ಸಿದ್ಧಣ್ಣ ದೇಸಾಯಿ ಕಲ್ಲೂರ ತಬಲಾ ಸಾಥ ನೀಡಲಿದ್ದಾರೆ.

ಸೊಸೈಟಿಯ ಉಪಾಧ್ಯಕ್ಷರಾದ ಉಮೇಶ ಶೆಟ್ಟಿ, ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಖಜಾಂಚಿಗಳಾದ ಗುರುಲಿಂಗಯ್ಯ ಮಠಪತಿ, ಹಾಗು ಸೊಸೈಟಿಯ ಪದಾಧಿಕಾರಿಗಳು, ಯುವಘಟಕದ ಹಾಗೂ ಮಹಿಳಾ ಟ್ರಸ್ಟನ ಪದಾಧಿಕಾರಿಗಳು ಉಪಸ್ಥಿತರಿರುವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here