ಮನುಷ್ಯನಿಗೆಆರೋಗ್ಯವೆ ಭಾಗ್ಯಆರೋಗ್ಯವಂತನಾಗಿದ್ದರೆ ಮಾತ್ರಉತ್ತಮಜೀವನ ಮಾಡಲು ಸಾಧ್ಯ

0
57

ಆಳಂದ: ಜೀವನದಲ್ಲಿ ಮನುಷ್ಯನಿಗೆಆರೋಗ್ಯ ಬಹಳ ಪ್ರಾಮುಖ್ಯವಾದದ್ದು, ಮಾನಸಿಕ ಹಾಗೂ ದೈಹಿಕವಾಗಿ ಸರಿಯಾಗಿದ್ದರೆಅದಕ್ಕಿಂತದೊಡ್ಡ ಸಂಪತ್ತು  ಮತ್ತೊಂದಿಲ್ಲ. ಆರೋಗ್ಯ ಸರಿಯಾಗಿಕಾಪಾಡಿಕೊಂಡು ಹೋದರೆ ಮಾತ್ರಉತ್ತಮರೀತಿಯಲ್ಲಿ ಬದುಕನ್ನು ಸಾಧಿಸಲು ಸಾಧ್ಯವಾಗುತ್ತದೆಎಂದುಖ್ಯಾತದಂತ ವೈದ್ಯರಾದಡಾ.ಸರೂಪ ಬೆಳಗಲಿ ಅಭಿಪ್ರಾಯ ಪಟ್ಟರು.

ತಾಲೂಕಿನ ನಿಂಬರ್ಗಾಗ್ರಾಮದಲ್ಲಿ ‘ಕಲಬುರಗಿ ಪ್ರಭ’ ಕನ್ನಡ ದಿನ ಪತ್ರಿಕೆ ಹಾಗೂ ಆರೋಗ್ಯ ಮತ್ತುಕುಟುಂಬ ಕಲ್ಯಾಣಇಲಾಖೆಯರಾಷ್ಟ್ರೀಯ ಬಾಯಿ ಆರೋಗ್ಯಕಾರ್ಯಕ್ರಮ ಹಾಗೂ ನಿಂಬರ್ಗಾ ಸಮುದಾಯಆರೋಗ್ಯಕೇಂದ್ರ ಸಹಯೋಗದಲ್ಲಿಡಾ.ಅಂಬೇಡ್ಕರ್ ಶಾಲೆಯಲ್ಲಿಆಯೋಜನೆ ಮಾಡಲಾಗಿದ್ದ ಬಾಯಿ ಆರೋಗ್ಯಅರಿವು ಹಾಗೂ ತಪಾಸಣೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ನಂತರ ಮಾತನಾಡಿದಅವರು, ಮಕ್ಕಳು ಇವತ್ತುಅವೈಜ್ಞಾನಿಕರೀತಿಯಲ್ಲಿ ಹಲ್ಲುಗಳನ್ನು ಉಜ್ಜುವುದರಿಂದ ಹಲ್ಲುಗಳು ಬೇಗನೆ ಬಿಳುತ್ತಿವೆ. ಅದಕ್ಕೆತುಂಬಾ ಮೃದುವಾದ ಬ್ರೇಶ್ ದಿಂದ ದಿನಕ್ಕೆ ಎರಡು ಸಾರಿ ಬ್ರೇಶ್ ಮಾಡಬೇಕೆಂದು ಮಕ್ಕಳಿಗೆ ತಿಳುವಳಿಕೆ ನೀಡಿದರು.

Contact Your\'s Advertisement; 9902492681

ಮುಂದುವರಿದು ಮಾತನಾಡಿದವರು, ಪ್ರಸ್ತುತ ಸಂದರ್ಭದಲ್ಲಿಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿದ್ದುಇದಕ್ಕೆ ಮೂಲ ಕಾರಣ ವಿಪರೀತತಂಬಾಕು ಸೇವನೆ. ತಂಬಾಕು ಸೇವನೆ ಮಾಡಿ ಸರಿಯಾಗಿ ಬಾಯಿಯನ್ನು ತೋಳೆದುಕೊಳ್ಳದೆ ಇರುವುದುಕ್ಯಾನ್ಸರ್ ಬಾದೆಗೆ ಕಾರಣವಾಗುತ್ತದೆ. ಮನೆಯಲ್ಲಿಕುಟುಂಬದ ಸದಸ್ಯರಾಗಲಿ ಅಥವಾ ಸುತ್ತಮುತ್ತಲಿನ ಕುಟುಂಬದವರಿಗೆ ಈ ಬಗ್ಗೆ ಜಾಗೃತಿ ಮೂಡಿಸಬೇಕು. ಹಲ್ಲುಗಳಿಗೆ ಹುಳುಗಳು ತಗ್ಗುಲಿದರೆಕಿವಿಯಲ್ಲಿಎಣ್ಣೆ ಹಾಕಿಕೊಳ್ಳುವುದು ಅಥವಾಇನ್ನಿತರೆ ಮೌಡ್ಯಚಾರಣೆಗಳಿಗೆ ಒಳಗಾಗದೆ ದಂತ ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಅವರ ಮಾರ್ಗದರ್ಶನದಂತೆಉಪಚಾರ ಪಡೆಯವಬೇಕುಎಂದು ತಿಳಿಸಿದರು.

ಮುಖ್ಯ ಅಥಿತಿಗಳಾಗಿ ಪಾಲ್ಗೊಂಡಿದ್ದ ಮುಖಂಡರಾದ ಶಿವಪುತ್ರ ಮದಗುಣಕಿ ಮಾತನಾಡಿ, ಮಕ್ಕಳು ಶಿಕ್ಷಣದ ಜೊತೆಗೆಆರೋಗ್ಯದಕಡೆ ಹೆಚ್ಚಿನ ಗಮನ ಹರಿಸುವುದುಅತ್ಯಗತ್ಯವಾಗಿದೆ. ಮನುಷ್ಯನಿಗೆಎμÉ್ಟೀ ಆಸ್ತಿ, ಅಂತಸ್ತುಇದ್ದರೂಆರೋಗ್ಯ ಸರಿಯಿಲ್ಲದಿದ್ದರೆಎಲ್ಲವು ವ್ಯರ್ಥ, ಯಾವುದೇದುಷ್ಟಚಟಕ್ಕೆ ಬಲಿಯಾಗದೆ ಬದುಕನ್ನುಉತ್ತಮರೀತಿಯಲ್ಲಿ ರೂಪಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.

ಕಲಬುರಗಿ ಪ್ರಭ ಪತ್ರಿಕೆಯ ಸಂಪಾದಕ ವಿಜಯಕುಮಾರಜಿಡಗಿ ಮಾತನಾಡಿ, ಮಕ್ಕಳು ದೇಶದ ಸಂಪತ್ತುಉತ್ತಮರೀತಿಯಲ್ಲಿ ಶಿಕ್ಷಣ ಪಡೆದುಕೊಂಡು ಶಿಕ್ಷಕರಿಗೂ, ಹೆತ್ತತಂದೆ, ತಾಯಿಗಳಿಗೂ ಜತೆಗೆ ಹುಟ್ಟಿ ಬೆಳೆದ ಗ್ರಾಮಕ್ಕೆಕೀರ್ತಿತರಬೇಕು. ಯಾವುದೇ ದುಷ್ಟಚಟಗಳಿಗೆ ಒಳಗಾಗದೆ ಜೀವನ ರೂಪಿಸಿಕೊಂಡು ಇನ್ನೊಬ್ಬರಿಗೆ ಸ್ಪೂರ್ತಿಯಾವಂತೆ ಬೆಳೆದು ನಿಲ್ಲುವಂತಾಗಬೇಕೆಂದುಅಭಿಲಾಶೆ ವ್ಯಕ್ತ ಪಡಿಸಿದರು.

ಡಾ.ಅಂಬೇಡ್ಕರ್ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಅಕ್ಕಾಮಹಾದೇವಿ ಶರಣಅವರುಕಾರ್ಯಕ್ರಮದಅಧ್ಯಕ್ಷತೆ ವಹಿಸಿದರು. ದಲಿತ ಸಮುದಾಯದ ಹಿರಿಯ ಮುಖಂಡರಾದ ಶಾಮರಾವ್‍ಜಿಡಗಿ, ಆಶಾ ಕಾರ್ಯಕರ್ತೆಚಂದ್ರಭಾಗ ಮಂಗನಕರ್, ಶ್ರೀಮತಿ ಗೀತಾ, ಶಿಕ್ಷಕರಾದ ದುಂಡಪ್ಪಾಜಮಾದಾರ, ಯಲ್ಲಾಲಿಂಗ್ ಮೀರಗಿ, ಪರಮೇಶ್ವರ ಕೂಲಾಲಿ, ಅಶೋಕ ಜಮಾದಾರ, ಸುನೀತಾ ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥೀತರಿದ್ದರು. ಸಂಗಮ್ಮ ಪುಕ್ಕನ್‍ಅವರು ಸ್ವಾಗತ ನೇರವೇರಿಸಿದರು. ಶರಣಬಸಪ್ಪಾ ನಿರ್ಮಲ್ಕರ್‍ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here