ಕೃತಿ ಜನಾರ್ಪಣೆ ಆ. 4 ರಂದು

0
36

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಂಟಿ ಆಶ್ರಯದಲ್ಲಿ ಲೇಖಕಿ-ಆದರ್ಶ ಶಿಕ್ಷಕಿ ಡಾ. ಪರ್ವೀನ್ ಸುಲ್ತಾನಾ ಅವರ ರಚಿತ ಶರಣರÀ ನಾಡಿನ ಸೂಫಿ ಮಾರ್ಗ ಎಂಬ ಕೃತಿ ಜನಾರ್ಪಣೆ ಸಮಾರಂಭವನ್ನು ಆ. 4 ರಂದು ಬೆಳಗ್ಗೆ 10.45 ಕ್ಕೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತೀಳಿಸಿದ್ದಾರೆ.

ಈ ಕೃತಿಯು ವರ್ತಮಾನದ ಕಲುಷಿತ ರಾಜಕಾರಣದ ಅಪಸವ್ಯಗಳಿಗೆ ಸಮರ್ಥವಾದ ಉತ್ತರ ನೀಡಬಲ್ಲ, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಧರ್ಮಾಂಧರ ಕಣ್ಣು ತೆರೆಯಿಸಬಲ್ಲ ಕೃತಿ ಇದಾಗಿದೆ. ಈ ನೆಲವು ಶರಣ ಮತ್ತು ಸೂಫಿಗಳ ಆಡುಂಬೊಲ. ಇಲ್ಲಿನ ಬಸವಾದಿ ಶರಣರ ಚಳವಳಿಯು ಕನ್ನಡ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ನೀಡಿರುವ ಕೊಡುಗೆಯೆಂದು ಗುರುತಿಸಲಾಗಿರುವಂತೆಯೇ ಇಲ್ಲಿನ ಸೂಫಿ ಪಂಥಗಳು ಭಾರತದ ದಾರ್ಶನಿಕ ಪರಂಪರೆಗೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನೂ ಸಹ ನೀಡಿದೆ ಎಂದು ಅವರು ವಿವರಿಸಿದರು.

Contact Your\'s Advertisement; 9902492681

ಜಿಲ್ಲಾಧಿಕಾರಿ ಬಿ. ಫೌಜಿಯಾ ತರನ್ನುಮ್ ಕೃತಿ ಜನಾರ್ಪಣೆ ಮಾಡಲಿದ್ದು, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಲಿದ್ದಾರೆ.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅಪ್ಪುಗೆರೆ ಸೋಮಶೇಖರ ಅವರು ಕೃತಿ ಪರಿಚಯ ಮಾಡಲಿದ್ದು, ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷೆ ಡಾ. ಮೀನಾಕ್ಷಿ ಬಾಳಿ, ಜಿಲ್ಲಾ ಪ್ರೌಢ ಶಾಲಾ ಸಹ ಶಿಕ್ಷಕರ ಜಿಲ್ಲಾಧ್ಯಕ್ಷ ಮಹೇಶ ಹೂಗಾರ, ದೇಸಿ ಪುಸ್ತಕ ಪ್ರಕಾಶನದ ಪ್ರಕಾಶಕ ಸೃಷ್ಟಿ ನಾಗೇಶ, ಸಮುದಾಯ ದ ಅಧ್ಯಕ್ಷ ದತ್ತಾತ್ರೇಯ ಇಕ್ಕಳಕಿ ಅವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಎಸ್ ಅಂಡಗಿ, ಧರ್ಮಣ್ಣ ಎಚ್ ಧನ್ನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here