ದೊಡ್ಡಪ್ಪ ಅಪ್ಪ ಪ.ಪೂ. ಕಾಲೇಜಿನಲ್ಲಿ ಓರಿಯೆಂಟೇಶನ್

0
105

ಕಲಬುರಗಿ: ನಗರದ ದೊಡ್ಡಪ್ಪ ಅಪ್ಪ ವಸತಿ ಪದವಿಪೂರ್ವ ವಿಜ್ಞಾನ ಮಹಾ ವಿದ್ಯಾಲಯದಲ್ಲಿ ಕಾಲೇಜಿನ ಶಿಕ್ಷಣ ವ್ಯವಸ್ಥೆಯ ಪರಿಚಯಾತ್ಮಕ ಕಾರ್ಯಕ್ರಮ ವಾದ ಓರಿಯೆಂಟೇಷನ್ ಜರುಗಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಎಂಎಸ್ಐ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ನರೇಂದ್ರ ಬಡಶೇಸಿ ಅವರು ಮಾತನಾಡುತ್ತಾ ಶಿಕ್ಷಣವೆಂದರೆ ವ್ಯಕ್ತಿತ್ವ ವಿಕಸನಗೊಳಿಸುವುದಾಗಿದೆ .ತಾಯಿ ಮಗುವಿನಲ್ಲಿ ತನ್ನ ಭಾಷೆಯಲ್ಲಿ ಸಂಸ್ಕಾರವನ್ನು ತುಂಬುತ್ತಾಳೆ .ಅದಕ್ಕಾಗಿಯೇ ಮಾತೃಭಾಷೆ ಎಂದು ಕರೆಯುತ್ತಾರೆ . ವಿದ್ಯಾರ್ಥಿಗಳಿಗೆ ಪ್ರಥಮ ಚಿಕಿತ್ಸೆಯ ತರಬೇತಿ ಅವಶ್ಯಕತೆ ಇದೆ .ವಿದ್ಯಾರ್ಥಿಗಳು ಕಂಠಪಾಠ ಮಾಡಿ ಕಲಿಯುವುದಕ್ಕಿಂತ ಅರ್ಥ ಮಾಡಿಕೊಂಡು ಕಲಿತರೆ ಕಲಿಕೆ ಏರ್ಪಡುತ್ತದೆ.

Contact Your\'s Advertisement; 9902492681

ಕರ್ನಾಟಕದ ಇತರ ಭಾಗಗಳಿಗಿಂತಲೂ ಕಲ್ಬುರ್ಗಿಯಲ್ಲಿ ಶೈಕ್ಷಣಿಕ ಅವಕಾಶಗಳು ಹೆಚ್ಚಾಗಿವೆ . ಟೀಚರ್ ಗೂ ಗುರುವಿಗೂ ವ್ಯತ್ಯಾಸವಿದೆ . ಟೀಚ್ ಮಾಡುವವರು ಟೀಚರ್ . ಗುರುವೆಂದರೆ ತನ್ನ ಅಂತರ್ ದೃಷ್ಟಿಯಿಂದ ವಿದ್ಯಾರ್ಥಿಗಳ ಒಳಗಿರುವ ಆಂತರ್ಯದ ಶಕ್ತಿಯನ್ನು ಹೊರ ಹಾಕುವನಾಗಿದ್ದಾನೆ .ವಿದ್ಯಾರ್ಥಿಗಳು ಸಕಾರಾತ್ಮಕ ಭಾವನೆಗಳನ್ನು ಇಟ್ಟುಕೊಳ್ಳಬೇಕು. ವಿಶ್ವದಲ್ಲಿ ಭಾರತದ ಕೀರ್ತಿಯನ್ನು ಎತ್ತಿ ಹಿಡಿಯುತ್ತೇನೆ ಎಂಬ ಮಹತ್ತರ ಗುರಿ ಇಟ್ಟುಕೊಳ್ಳಬೇಕು ಎಂದು ನುಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here