ಶರಣಬಸವೇಶ್ವರ ಸಂಸ್ಥಾನದ ಕೊಡುಗೆಗಳ ಕುರಿತು ಆ.4 ರಿಂದ 30 ದಿನ ಪ್ರವಚನ

0
79

ಕಲಬುರಗಿ; ಕಲಬುರಗಿ ನಗರದ ಶರಣಬಸವೇಶ್ವರ ಪುಣ್ಯಾಶ್ರಮದಲ್ಲಿರುವ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಆಗಸ್ಟ್ 04 ರಿಂದ, ಪವಿತ್ರ ಶ್ರಾವಣ ಮಾಸದ ಅಂಗವಾಗಿ ಶರಣಬಸವೇಶ್ವರ ಸಂಸ್ಥಾನದ ವಿವಿಧ ಕ್ಷೇತ್ರಗಳ ಕೊಡುಗೆಗಳ ಕುರಿತು 30 ದಿನಗಳ ಸುದೀರ್ಘ ವಾರ್ಷಿಕ ಪ್ರವಚನ “ಶಿವಾನುಭವ ಉಪನ್ಯಾಸ ಮಾಲಿಕೆ” ನಡೆಯಲಿದೆ.

ಶರಣಬಸವೇಶ್ವರ ಸಂಸ್ಥಾನ ಮತ್ತು ಅಖಿಲ ಭಾರತ ಶಿವಾನುಭವ ಮಂಟಪವು ಪ್ರತಿ ವರ್ಷವೂ ಶ್ರಾವಣ ಮಾಸದ ಪ್ರಯುಕ್ತ ಮಹಾದಾಸೋಹಿ ಶರಣಬಸವೇಶ್ವರರ ಪುಣ್ಯಸ್ಮರಣೆ, ಸಂಸ್ಥಾನದ 7ನೇ ಪೀಠಾಧಿಪತಿ ಪೂಜ್ಯ ದೊಡ್ಡಪ್ಪ ಅಪ್ಪಾಜಿಯವರ ಪುಣ್ಯಸ್ಮರಣೋತ್ಸವ ಹಾಗೂ ಸಂಸ್ಥಾನದ 8ನೇ ಪೀಠಾಧಿಪತಿ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾಜಿ ಅವರು ಪೀಠಾಧಿಪತಿಯಾಗಿ ಅಧಿಕಾರ ಸ್ವೀಕರಿಸಿ 40ನೇ ವμರ್Áಚರಣೆ ಅಂಗವಾಗಿ ಧಾರ್ಮಿಕ ಪ್ರವಚನಗಳನ್ನು ಆಯೋಜಿಸಿದೆ.

Contact Your\'s Advertisement; 9902492681

30 ದಿನಗಳ ವಾರ್ಷಿಕ ಪ್ರವಚನವನ್ನು ಶ್ರೀಶೈಲಂ ಮತ್ತು ಸುಲಫಲ ಮಠದ ಪೂಜ್ಯ ಜಗದ್ಗುರು ಡಾ. ಸಾರಂಗಧÀರ ದೇಶಿಕೇಂದ್ರ ಮಹಾಸ್ವಾಮಿಗಳು ಉದ್ಘಾಟಿಸಲಿದ್ದಾರೆ. ಚೌಡಾಪುರಿ ಹಿರೇಮಠದ ಪೂಜ್ಯ ಡಾ. ರಾಜಶೇಖರ ಶಿವಾಚಾರ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಸ್ಥಾನದ 9ನೇ ಪೀಠಾಧಿಪತಿ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪಾಜಿ ಅವರು ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರುವರು.

ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಮತ್ತು ಅವರ ಸಹೋದರಿಯರಾದ ಕುಮಾರಿ ಶಿವಾನಿ, ಕುಮಾರಿ ಕೋಮಲ್ ಮತ್ತು ಕುಮಾರಿ ಮಹೇಶ್ವರಿ ಅವರ ವಿಶೇಷ ಪ್ರಾರ್ಥನೆ ಗೀತೆ ಉದ್ಘಾಟನಾ ಸಮಾರಂಭದ ಪ್ರಮುಖ ಅಂಶವಾಗಿದೆ.

ಈ ಕಾರ್ಯಕ್ರಮದಲ್ಲಿ ಇನ್ನೊಂದು ವಿಶೇಷವೆಂದರೆ ಆಗಸ್ಟ್ 10ನೇ ತಾರೀಕಿನಂದು ದಕ್ಷಿಣಕನ್ನಡ ತಂಡದ ವತಿಯಿಂದ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಪ್ರತಿದಿನ ಸಂಜೆ 7.00 ರಿಂದ 8.00 ರವರೆಗೆ ಗರೂರಿನ ಶ್ರೀ ಶಿವಲಿಂಗ ಶಾಸ್ತ್ರಿಯವರಿಂದ ಶರಣಬಸವೇಶ್ವರ ಪುರಾಣ ಪ್ರವಚನ ನಡೆಯಲಿದ್ದು, ರಾತ್ರಿ 8.00 ರಿಂದ 8.30 ರವರೆಗೆ ವಿವಿಧ ಕ್ಷೇತ್ರಗಳಲ್ಲಿ ಸಂಸ್ಥಾನದ ಕೊಡುಗೆ ಕುರಿತು ವಿಶೇಷ ಉಪನ್ಯಾಸಗಳು ನಡೆಯಲಿವೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here