ವಿದ್ಯಾರ್ಥಿಗಳ ಯಶಸ್ವಿಗೆ ಡಾ. ಶರಣು ಮಾರ್ಗದರ್ಶನ ಅಗತ್ಯ 

0
24

ಕಲಬುರಗಿ: ಅತಿ ಚಿಕ್ಕ ವಯಸ್ಸಿನಲ್ಲಿ ಹಂಸಿಕಾ ಶಿಕ್ಷಣ ಸಂಸ್ಥೆಯನ್ನು ಸ್ಥಾಪನೆ ಮಾಡಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಡಾ. ಶರಣು ಹೊನ್ನಗೆಜ್ಜೆ ಆಶಾ ಕಿರಣವಾಗಿದ್ದಾರೆ ಎಂದು ನಿವೃತ್ತ ಪ್ರಾಂಶುಪಾಲರಾದ ಕೋಕಟ್ನೂರ್ ಅಭಿಪ್ರಾಯ ಪಟ್ಟರು.

ಅವರು ನಗರದ ಅನನ್ಯ ಪದವಿ ಮತ್ತು ಸ್ನಾತಕೋತ್ತರ ಪದವಿ ಮಹಾವಿದ್ಯಾಲಯದಲ್ಲಿ ಡಾಕ್ಟರ್ ಶರಣ ಅವರ ಜನ್ಮದಿನದ ಸಂದರ್ಭದಲ್ಲಿ ಸರ್ವಜಾತಿ ಜನಾಂಗದ ಎಲ್ಲರಿಗೂ ಅನನ್ಯ ಪದವಿ ಮಹಾವಿದ್ಯಾಲಯದಲ್ಲಿ ಗುಣಮಟ್ಟದ ಶಿಕ್ಷಣ ಒಳ್ಳೆಯ ರೀತಿಯಲ್ಲಿ ಅವಕಾಶ ಕಲ್ಪಿಸಿ ಅವರನ್ನು ಪದವೀದಾರರನ್ನಾಗಿ ಮಾಡುವುದು ಹಂಸಿಕ ಸಂಸ್ಥೆಯ ಗುರಿ ಉದ್ದೇಶ ಆಗಿದೆ ಎಂದು ನಿವೃತ್ತ ಪ್ರಾಂಶುಪಾಲ ಕುಕಟನೂರ್ ಹೇಳಿದರು.

Contact Your\'s Advertisement; 9902492681

ಅನನ್ಯ ಪದವಿ ಮಹಾವಿದ್ಯಾಲಯದಲ್ಲಿ ಶರಣು ಅವರ ಅಭಿಮಾನಿ ಬಳಗದ ಮತ್ತು ಶಿಷ್ಯ ಬಳಗದ ವತಿಯಿಂದ ಡಾ. ಎಸ್ ಹೂನ್ನ ಗೆಜ್ಜೆ ಅವರಿಗೆ ಅದ್ದೂರಿಯಾಗಿ ಸನ್ಮಾನ ಮಾಡಿ ಮಾತನಾಡಿದ ಅವರು ಶರಣು ಶೈಕ್ಷಣಿಕ ಕ್ಷೇತ್ರದಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಪರಿಗಣಿಸಿ ಗುರುತಿಸಿ ಹಲವಾರು ಸಂಘ ಸಂಸ್ಥೆಗಳು ದೇವಮಾನವ, ಕಾಯಕ ರತ್ನ, ಪ್ರಶಸ್ತಿಗಳನ್ನು ಕೊಟ್ಟಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಚಿತ್ರಕಲಾ ಶಿಕ್ಷಕರಾದ ಖಧಿರ್‌ ಸರ್‌, ಜಗನ್ನಾಥ್, ಸರಿತಾ ಕರಿಗುಡ್ಡ, ರಾಜೇಶ್ವರಿ ಕಿರಣಗಿ ,ರಾಹುಲ್ ಸಿರಿಕರ್, ಅಕ್ಷತಾ ಪಾಟೀಲ್, ಪ್ರೀತಿ ಸಜ್ಜನ್, ರಾಜೇಶ್ವರಿ, ಸುಜಾತ ದೇವನೂರ್‌ ಕರ್ ಅಧ್ಯಕ್ಷರಾದ ಸುಷ್ಮಾವತಿ ಎಸ್, ಅನನ್ಯ ಸಮಾಜ ಕಾರ್ಯ ಸ್ನಾತಕೋತ್ತರ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here