ಸುರಪುರ:ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪೂರ್ವಭಾವಿ ಸಭೆ

0
33

ಸುರಪುರ: ಮುಂಬರುವ ಆಗಷ್ಟ್ 15 ರಂದು ಮುಂಜಾನೆ ಎಲ್ಲಾ ಸರಕಾರಿ ಕಚೇರಿ ಶಾಲಾ ಕಾಲೇಜುಗಳಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಣೆ ಮಾಡಿ ನಂತರ ತಾಲೂಕ ಆಡಳಿತ ದಿಂದ ನಡೆಯುವ ಕಾರ್ಯಕ್ರಮದಲ್ಲಿ ಎಲ್ಲರು ಪಾಲ್ಗೊಳ್ಳುವಂತೆ ತಹಸಿಲ್ದಾರ್ ಕೆ.ವಿಜಯಕುಮಾರ ತಿಳಿಸಿದರು.

ನಗರದ ತಹಸಿಲ್ದಾರ್ ಕಚೇರಿಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಪ್ರತಿ ವರ್ಷದಂತೆ ಈ ವರ್ಷವೂ ನಗರದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿ ತಾಲೂಕ ಆಡಳಿತ ದಿಂದ ಕಾರ್ಯಕ್ರ ಹಮ್ಮಿಕೊಳ್ಳಲಾಗುವುದು,ಎಲ್ಲಾ ಇಲಾಖೆಗಳು ಬೆಳಿಗ್ಗೆ 8 ಗಂಟೆಯ ಒಳಗಾಗಿ ಧ್ವಜಾರೋಹಣ ಮುಗಿಸಿ ನಂತರ 8:45ಕ್ಕೆ ನಡೆಯುವ ತಾಲೂಕ ಆಡಳಿತದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.

Contact Your\'s Advertisement; 9902492681

ಧ್ವಜಾರೋಹಣದ ಸಂದರ್ಭದಲ್ಲಿ ಶಾಸಕರಾದ ರಾಜಾ ವೇಣುಗೋಪಾಲ ನಾಯಕ ಅವರು ಭಾಗವಹಿಸಲಿದ್ದಾರೆ ಎಂದರು.ಅಲ್ಲದೆ ಈ ವರ್ಷವೂ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಅಲ್ಲದೆ ಈ ವರ್ಷ ಎಲ್ಲೆಡೆಯೂ ಧ್ವಜಾರೋಹಣ ಸಂದರ್ಭದಲ್ಲಿ ಕಡ್ಡಾಯವಾಗಿ ಮಹಾತ್ಮ ಗಾಂಧಿ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರ ಇಡುವಂತೆ ಸರಕಾರದ ಆದೇಶವಿದ್ದು ಇದನ್ನು ಕಡ್ಡಾಯವಾಗಿ ಪಾಲಿಸುವಂತೆ ತಿಳಿಸಿದರು ಹಾಗೂ 14ನೇ ತಾರಿಕು ರಾತ್ರಿ ಕಚೇರಿಗಳಿಗೆ ಮತ್ತು ಎಲ್ಲಾ ವೃತ್ತಗಳಿಗೆ ದೀಪಾಲಂಕಾರ ಮಾಡುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ತಾಲೂಕ ಆರೋಗ್ಯಾಧಿಕಾರಿ ಡಾ.ಆರ್.ವಿ ನಾಯಕ,ದೈಹಿಕ ಶಿಕ್ಷಣಾಧಿಕಾರಿ ಮಲ್ಲಣ್ಣ ದೊಡ್ಮನಿ,ಕ್ಷೇತ್ರ ಸಮನ್ವಯಾಧಿಕಾರಿ ಪಂಡೀತ ನಿಂಬೂರ,ಸಂಘಟನೆಗಳ ಮುಖಂಡರಾದ ಶೀವಮೋನಯ್ಯ ಎಲ್.ಡಿ ನಾಯಕ,ಉಸ್ತಾದ ವಜಾಹತ್ ಹುಸೇನ್,ವಕೀಲ ಯಲ್ಲಪ್ಪ ಹುಲಿಕಲ್ ಮಾತನಾಡಿದರು.

ಸಭೆಯಲ್ಲಿ ಹೋರಾಟಗಾರ ಚಂದ್ರಶೇಖರ ನಾಯಕ ಬಿಚ್ಚಗತ್ತಿಕೇರ,ಉಪ ಖಜಾನೆ ಅಧಿಕಾರಿ ಸಣ್ಣಕೆಪ್ಪ ಕೊಂಡಿಕಾರ್,ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ಸಿರಸ್ತೆದಾರ ಭೀಮು ನಾಯಕ,ಪಶುಸಂಗೋಪಮಾ ಇಲಾಖೆಯ ಸುರೇಶ ಅಚ್ಚಡ್,ಗೃಹರಕ್ಷಕ ದಳದ ಸಿನಿಯರ್ ಫ್ಲಾಟೂನ್ ಕಮಾಂಡರ್ ವೆಂಕಟೇಶ ಸುರಪುರ,ಸೇರಿದಂತೆ ನಗರಸಭೆ,ಲೋಕಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here