ಕಲಬುರಗಿ: ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಸುಕ್ಷೇತ್ರ ಗೊಬ್ಬುರವಾಡಿಯ ಸದ್ಗುರು ಶ್ರೀ ಸೇವಾಲಾಲ ಬಂಜಾರಾ ಶಕ್ತಿಪೀಠದಲ್ಲಿ ಪೀಠಾಧಿಪತಿಗಳಾದ ಪರಮಪೂಜ್ಯ ಸಂತ ತಪಸ್ವಿ ಶ್ರೀ ಬಳಿ ರಾಮ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ನವರಾತ್ರಿ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ದಸರಾ ಮಹೋತ್ಸವವನ್ನು ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಜಗದಂಬಾ ದೇವಿ ಹಾಗೂ ವಾಗ್ಜಾಯಿ ದೇವಿಯ ಮೂರ್ತಿಗಳಿಗೆ ಅಭಿಷೇಕ, ಧರ್ಮ ದ್ವಜಾರೋಹಣ ನಂತರ ಗಂಗಾಪೂಜೆ, ಶ್ರೀ ದುರ್ಗಾ ಸಪ್ತಸತಿ ಚಂಡಿ ಹವನ ಜರುಗಲಿದೆ. ಸಾಯಂಕಾಲ ಮಹಾಪೂಜೆ ಹಾಗೂ ಭೋಗಪೂಜೆಯನ್ನು ನೆರವೇರಿಸಲಾಗುವುದು. ರಾತ್ರಿ ೮.೦೦ ಗಂಟೆಗೆ ಧರ್ಮಸಭೆ ನಂತರ ಬಂಜಾರಾ ಭಜನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಮಠದ ಕಾರ್ಯದರ್ಶಿಗಳಾದ ಸಂತೋಷ ಜಾಧವ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಮಾರಂಭಕ್ಕೆ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರ, ಆಂಧ್ರ ಪ್ರದೇಶದಿಂದ ಸಾವಿರಾರು ಭಕ್ತರು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆಂದು ವಿವರಿಸಿದ್ದಾರೆ.