ಜನತಂತ್ರ ಪರಿಕಲ್ಪನೆ ಕೊಟ್ಟವರು ಬಸವಣ್ಣ: ಡಾ. ಜೆ. ಎಸ್. ಪಾಟೀಲ

0
92

ಕಲಬುರಗಿ: ಪ್ರಜೆಗಳು ಪ್ರಭುಗಳಂತೆ ಇರುವುದೇ ಪ್ರಜಾಪ್ರಭುತ್ವ” ಎಂಬ ಮಾತಿಗೆ ನಾಂದಿ ಹಾಡಿದವರು ಭಕ್ತಿ ಭಂಡಾರಿ ಬಸವಣ್ಣ. ಇಡೀ ಜಗತ್ತಿಗೆ ಮೊಟ್ಟ ಮೊದಲ ಬಾರಿಗೆ ಜನತಂತ್ರ ಸಂಸದೀಯ ಪರಿಕಲ್ಪನೆಯನ್ನು ಕೊಟ್ಟವರು ಬಸವಣ್ಣನವರು ಎಂದು ವಿಜಯಪುರದ ಸಾಂಸ್ಕೃತಿಕ ಚಿಂತಕ ಡಾ. ಜೆ. ಎಸ್. ಪಾಟೀಲ ಹೇಳಿದರು.

ಗುಲ್ಬರ್ಗ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆ ಸರಣಿ ಉಪನ್ಯಾಸ ಮಾಲೆಯ “ಬಸವವಾದ ಮತ್ತು ಸಂವಿಧಾನದ ಆಶಯಗಳು” ಎಂಬ ವಿಷಯದ ಮೇಲೆ ಅವರು ಮಾತನಾಡಿ ಬಸವವಾದನ್ನು ನಮಗೆ ಅರ್ಥ ಆಗಬೇಕು ಆದರೆ ನಾವು ಮೊದಲು ಸಂವಿಧಾನವನ್ನು ಓದಬೇಕು. ಆಗ ಬಸವಣ್ಣ ಅರ್ಥ ಆಗುತ್ತಾರೆ ಎಂದರು.

Contact Your\'s Advertisement; 9902492681

ಯಾರು ಈ ದೇಶದಲ್ಲಿ ಜಾತಿ ವ್ಯವಸ್ಥೆಯನ್ನು ಹುಟ್ಟು ಹಾಕಿದರೋ ಅದೇ ಮನೆಯಲ್ಲಿಯೇ ಬಸವಣ್ಣನ ಜನನ ಆಗಿದೆ. ಬಸವಣ್ಣ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು ಅನೇಕ ತಂತ್ರಗಳನ್ನು ಮಾಡಿ ಶರಣರಿಗೆ ಲಿಂಗ ದೀಕ್ಷೆಯನ್ನು ನೀಡಿದ. ಭಾರತದ ನೆಲದಲ್ಲಿ ಅನೇಕ ವಾದಗಳನ್ನು ಬಹಳ ವರ್ಷಗಳಿಂದ ಮನುವಾದದ ವಿರುದ್ಧ ನಿರಂತರವಾಗಿ ಹೋರಾಟ ನಡೆಯುತ್ತಲೇ ಇದೆ.

ಈ ಸಮಾಜದಲ್ಲಿ ಅನಾದೀ ಕಾಲದಿಂದಲೂ ಅಸಮಾನತೆಗಳು ತಾಂಡವಾಡುತ್ತಲೆ ಇದೆ ಜಾತಿ ವ್ಯವಸ್ಥೆಯನ್ನು ಸಂವಿಧಾನ ಜಾರಿಗೆ ಬಂದು ಇಷ್ಟು ವರ್ಷ ಕಳೆದರೂ ಇನ್ನೂ ಅದು ಜೀವಂತವಾಗಿ ಉಳಿದಿದೆ. ಬಸವಣ್ಣ 12ನೇ ಶತಮಾನದಲ್ಲಿಯೇ ಲಿಂಗ ಸಮಾನತೆಯನ್ನು ಮಾಡಿದರು.

ಯಾಕೆಂದರೆ ಪುರೋಹಿತಶಾಹಿಗಳು ಹಾಕಿರುವ ವ್ಯವಸ್ಥೆಯನ್ನು ಬದಲಾವಣೆ ಮಾಡುವುದೇ ಬಸವಣ್ಣನ ಚಳವಳಿಯ ಆಶವಾಗಿತ್ತು. ಆದರೆ ಇಂದು ಅದೇ ಪುರೋಹಿತಶಾಹಿಗಳು ಭಾರತವನ್ನು ಮರಳಿ ಶಿಲಾಯುಗಕ್ಕೆ ತೆಗೆದುಕೊಂಡು ಹೋಗುವ ವ್ಯವಸ್ಥೆ ಈ ದೇಶದಲ್ಲಿ ನಡಿತಾ ಇದೆ. ಅದನ್ನು ಬಸವಾದಿಗಳು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ವಾದಗಳು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಚ್. ಟಿ. ಫೋತೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಬಸವಣ್ಣ ಯಾವೊಂದು ವರ್ಗಕ್ಕೆ ಸೀಮಿತವಾಗಿಲ್ಲ ಅವರು ಸಾಂಸ್ಕೃತಿಕ ನಾಯಕ ಮತ್ತು ಈ ನಾಡಿನ ಆಸ್ತಿ ಆಗಿದ್ದಾರೆ.

ಹಳ್ಳಿಗಳಲ್ಲಿ ದಲಿತರಷ್ಟು ಬಸವ ತತ್ವಗಳನ್ನು ಅಪ್ಪಿಕೊಂಡಷ್ಟು ಯಾರು ಅಪ್ಪಿಕೊಂಡಿಲ್ಲ. ಪ್ರತಿಯೊಬ್ಬ ದಲಿತನೂ ಬಸವ ತತ್ವವನ್ನು ಪಾಲನೆ ಮಾಡುತ್ತಾರೆ ಎಂದು ಅವರು ಹೇಳಿದರು. ಈ ಸರಣಿ ಉಪನ್ಯಾಸ ಮಾಲೆಯ ಕಾರ್ಯಕ್ರಮದಲ್ಲಿ ಸಾಹಿತಿ ಆರ್. ಕೆ ಹುಡಗಿ, ಶ್ರೀಮತಿ ರೇಣುಕಾ ಸಿಂಗೆ, ಪ್ರಭುಲಿಂಗ ಮಹಾಗಾಂವಕರ್ ಹಾಜರಿದ್ದರು. ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ಯಾವಂತರು ಎಷ್ಟೇ ಉನ್ನತ ಸ್ಥಾನಕ್ಕೆ ಹೋದರು ಅದು ನಮಗೆ ಅಂಟಿದ ಅಸ್ಪೃಶ್ಯತೆ ಹೋಗುತ್ತಿಲ್ಲ. ಕೊನೆಗೆ ಜಾತಿಯ ಆಧಾರದ ಮೇಲೆ ಅವರನ್ನು ಗುರುತಿಸುವುದು. – ಪ್ರೊ, ಎಚ್. ಟಿ. ಫೋತೆ, ನಿರ್ದೇಶಕರು. ಕನ್ನಡ ಅಧ್ಯಯನ ಸಂಸ್ಥೆಯ ಗುಲ್ಬರ್ಗ ವಿಶ್ವವಿದ್ಯಾಲಯ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here