ಶಹಾಪುರ : ನಾವು ನಂಬಿರುವ ದೇವರನ್ನ ಅಥವಾ ಗುರುಗಳನ್ನ ಶ್ರಾವಣ ಮಾಸದಲ್ಲಿ ವಿಶೇಷವಾಗಿ ಪೂಜೆ ಮಾಡಿ ಗೌರವ ಸಲ್ಲಿಸುವುದರಿಂದ ಬದುಕಿಗೆ ನೆಮ್ಮದಿ ಸಿಗುತ್ತದೆ,ಎಂದು ಮರುಳ ಮಹಾಂತ ಶಿವಾಚಾರ್ಯರು ಹೇಳಿದರು.
ತಾಲೂಕಿನ ಸಗರ ಗ್ರಾಮದ ಕರಬಸವೇಶ್ವರ ಒಕ್ಕಲಿಗರ ಹಿರೇಮಠದಲ್ಲಿ ಒಂದು ತಿಂಗಳ ಕಾಲ ಆಯೋಜಿಸಿರುವ ಶ್ರಾವಣ ಮಾಸದ ನಿಮಿತ್ಯ,ಮೊದಲನೇ ಸೋಮವಾರ ಬೆಳಗಿನ ಪೂಜಾ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದರು. ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬರೂ ಪೂಜೆ ಪುನಸ್ಕಾರ ಮಾಡುವುದರಿಂದ ತಮ್ಮ ಇಷ್ಟಾರ್ಥಗಳನ್ನೆಲ್ಲ ಈಡೇರುವದು ಎಂಬ ಅಪಾರ ನಂಬಿಕೆ ಇದೆ.
ಪ್ರತಿ ದಿನಾಲು ಸೂರ್ಯೋದಯಕ್ಕೂ ಮುಂಚೆ ಸ್ನಾನ ಮಾಡಿ ಪೂಜೆಗೆ ಸಿದ್ಧತೆ ಮಾಡಿಕೊಂಡು,ಪೂಜೆ ಪುನಸ್ಕಾರದಲ್ಲಿ ತೊಡಗಿ,ಲಿಂಗಕ್ಕೆ ಗಂಗಾ ಜಲ ಅರ್ಪಿಸಿ ಧ್ಯಾನದಲ್ಲಿ ತಲ್ಲಿನರಾದಾಗ ಜೀವನದಲ್ಲಿ ಬರುವ ಸಂಕಷ್ಟಗಳು ಎಲ್ಲವೂ ದೂರವಾಗಿ ಉತ್ತಮ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಹೇಳಿದರು. ಸಂದರ್ಭದಲ್ಲಿ ಗ್ರಾಮದ ಅರ್ಚಕರಾದ ಸಿದ್ದಯ್ಯ ಸ್ವಾಮಿ, ಚಂದಣ್ಣ ಚಡಗುಂಡ ಸೇರಿದಂತೆ ಹಲವಾರು ಯುವ ಭಕ್ತ ಸಮೂಹ ಪ್ರಾರ್ಥನೆಯಲ್ಲಿ ತೊಡಗಿದ್ದರು.