ನಿಷ್ಠಿ ಕಡ್ಲೆಪ್ಪನವರ ವಿರಕ್ತ ಮಠದಲ್ಲಿ ಶ್ರಾವಣ ಶ್ರವಣ ವಚನ ಚಿಂತನ ಕಾರ್ಯಕ್ರಮ

0
97

ಸುರಪುರ: ಶರಣರು ಭಕ್ತಿಗೆ ಹೊಸ ಭಾಷ್ಯ ಬರೆಯುತ್ತಾರೆ, ಹೊಸ ವ್ಯಾಖ್ಯಾನ, ಹೊಸ ಹೊಳಪು ಕೊಡುತ್ತಾರೆ. ತುಕ್ಕು ಹಿಡಿದು ಸವಕಳಿಯಾಗಿದ್ದ “ಭಕ್ತಿ’ ಪದ ಶರಣರ ಕಾಲದಲ್ಲಿ ಪರಿಪೂರ್ಣಗೊಂಡ ಹೊಸ ರೂಪದಲ್ಲಿ ಪ್ರಜ್ವಲಿಸುತ್ತದೆ ಆ ಬೆಳಕಿನಲ್ಲಿ ಜಗತ್ತು ಮಿಂದೇಳುತ್ತದೆ ಎಂದು ರಂಗಂಪೇಟೆಯ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ವಾರ್ಡನ್ ಸೋಮಶೇಖರ ನಾಯಕ್ ಹೇಳಿದರು.

ನಗರದ ಶ್ರೀ ನಿಷ್ಠಿ ಕಡ್ಲಪ್ಪನವರ ವಿರಕ್ತ ಮಠದಲ್ಲಿ ಜರುಗಿದ ಶ್ರಾವಣ ಶ್ರವಣ ಶಿವಾನುಭವ ಚಿಂತನದಲ್ಲಿ ಶರಣರ ಭಕ್ತಿ ಮಾರ್ಗ ಕುರಿತು ಹೇಳಿದ ಅವರು,ಆತ್ಮ ಸಾಕ್ಷಾತ್ಕಾರಕ್ಕಾಗಿ ಭಗವಂತನಲ್ಲಿ ಭಕ್ತಿಯನ್ನು ಅರ್ಪಿಸಿಕೊಂಡ ಶರಣರು ಕಾಯಕದಲ್ಲಿ ಕೈಲಾಸ ಅಡಗಿದೆ ಎಂದು ಹೇಳುವ ಮೂಲಕ ಕಾಯಕದಲ್ಲಿ ಭಕ್ತಿಯನ್ನು ತೋರ್ಪಡಿಸಿದರು ಎಂದು ಹೇಳಿದರು.

Contact Your\'s Advertisement; 9902492681

ಸಾನಿಧ್ಯವಹಿಸಿ ಜ್ಯೋತಿ ಬೆಳಗಿಸಿ ಶ್ರಾವಣ ಶ್ರಾವಣ ಶಿವಾನುಭವ ಚಿಂತನಕ್ಕೆ ಚಾಲನೆ ನೀಡಿದ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳವರು, ಪರಿಪೂರ್ಣ ಭಕ್ತಿಯು ಪ್ರಮುಖವಾಗಿ ಅರಿವು, ಆಚಾರ, ಅನುಭಾವ ಎಂಬ ಮೂರು ಅಂಗಗಳನ್ನು ಒಳಗೊಂಡಿದೆ. ಭಕ್ತನ ಭಕ್ತಿಯ ದೇವರಿಗೆ ನಿವೇದನೆಯಾಗುವುದು ಆಚಾರವೆಂಬ ಮುಖದಲ್ಲಿ, ಆಚಾರ ಪ್ರಕಟವಾಗುವುದು ಭಕ್ತನ ಬಹಿರಂಗದ ಆಚರಣೆಗಳಲ್ಲಿ. ಭಕ್ತನ ಆಚಾರಕ್ಕೆ ಪೂರಕವಾಗಿರುವುದು ಅಂತರಂಗದ ಅರಿವು, ಆಚಾರದ ಮೂಲಕ ವೇದ್ಯವಾದ ಅನುಭವ ಸ್ವಯಾನುಭಾವವಾಗಿ ಭಕ್ತನು ಆನಂದ ಪರವಶನಾಗುವನು. ಇದುವೆ ಭಕ್ತಿಯ ಪರಿಪೂರ್ಣತೆ ಯಾಗಿದೆ ಎಂದರು.

ನಿಸರ್ಗವನ್ನು ಪ್ರೀತಿಸುವುದು ನಿಸರ್ಗವನ್ನು ಕಾಪಾಡುವುದು ಕೂಡ ಭಕ್ತಿಯ ಪ್ರತಿಫಲನವಾಗಿದೆ ನಿಸರ್ಗ ಹಾಳು ಮಾಡುವುದರಿಂದ ಜಗತ್ತು ಇವತ್ತು ಹಲವಾರುತೊಂದರೆ ಅನುಭವಿಸುತ್ತಿದೆ ವಿಷಾದನೀಯ ಸಂಗತಿ ಎಂದರು.

ಹುಣಸಗಿ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ವಾರ್ಡನ್ ಬಸವರಾಜ ಸಜ್ಜನ್ ಮುದನೂರು ಉಪಸ್ಥಿತರಿದ್ದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶರಣಬಸಪ್ಪ ಯಾಳವಾರ ಪ್ರಾಸ್ಥಾವಿಕ ಮಾತುಗಳನ್ನಾಡಿದರು. ತಾಕಸಾಪ ಗೌರವ ಕಾರ್ಯದರ್ಶಿ ಎಚ್ ವೈ ರಾಠೋಡ್ ನಿರೂಪಿಸಿದರು,ಶಿವಶರಣಯ್ಯ ಸ್ವಾಮಿ ಬಳುಂಡಗಿಮಠ ಪ್ರಾರ್ಥಿಸಿದರು,ರಮೇಶ್ ಕುಲಕರ್ಣಿ ಸ್ವಾಗತಿಸಿದರು,ಸಿದ್ದಲಿಂಗಯ್ಯ ಸ್ವಾಮಿ ಕಡ್ಲಪ್ಪನವರಮಠ ಮಂಗಳಗೀತೆಯನ್ನು ಹಾಡಿದರು.

ಶಿವಶರಣಯ್ಯಸ್ವಾಮಿ ಬಳುಂಡಗಿಮಠ, ಪ್ರಾಣೇಶ್ ಕುಲಕರ್ಣಿ, ಜಗದೀಶ್ ಮಾನು, ಶರಣಬಸವ ಕೊಂಗಂಡಿ, ಸಾಹುಕಾರ, ಸೂಗಮ್ಮ ಕೊಂಗಂಡಿ ರಮೇಶ್ ಕುಲಕರಣಿ ಸುರೇಶ್ ಅಂಬುರೆ,ಉಮೇಶ್ ಯಾದವ್ ಮಹಾಂತೇಶ್ ಶಹಪುರ್ಕರ ಸೇರಿದಂತೆ ಹಲವಾರು ಕಲಾವಿದರು ಸಂಗೀತ ಸೇವೆಯನ್ನು ನೀಡಿದರು.

ಪ್ರಮುಖರಾದ ವೀರೇಶ ನಿಷ್ಠಿ ದೇಶಮುಖ, ಸುಭಾಷ ಹೂಗಾರ, ಸುನಿಲ್ ಪಂಚಾಂಗ ಮಠ, ಶಿವಶರಣಬಸವ ಪುರಾಣಿಕ ಮಠ ಮಹೇಶ್ ಅಂಗಡಿ ಕೋನಾಳ, ವಿಶ್ವನಾಥ ರೆಡ್ಡಿ ಮುದ್ನಾಳ, ಹಣಮಂತರಾಯ ಯಾಳವಾರ ಸೇರಿದಂತೆ ಹಲವಾರು ಜನರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here