ಕಲಬುರಗಿ ವಿಮಾನ ನಿಲ್ದಾಣದ ಅಭಿವೃದ್ದಿಗೆ ರಾಧಾಕೃಷ್ಣ ದೊಡ್ಡಮನಿ ಕೇಂದ್ರ ವಿಮಾನಯಾನ ಸಚಿವರಿಗೆ ಪತ್ರ

0
68

ಕಲಬುರಗಿ: ವಿಮಾನ ನಿಲ್ದಾಣದ ಅಭಿವೃದ್ದಿ ಸೇರಿದಂತೆ ಉಡಾನ್ ಯೋಜನೆಯಲ್ಲಿ ಹೆಚ್ಚಿನ ವಿಮಾನಗಳ ಹಾರಾಟ ನಡೆಸುವಂತೆ ಆಗ್ರಹಿಸಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ ನಾಯ್ಡು ಅವರಿಗೆ ಕಲಬುರಗಿ ಸಂಸದ ರಾಧಾಕೃಷ್ಣ ದೊಡ್ಡಮನಿ‌ ಅವರು ಪತ್ರಬರೆದಿದ್ದಾರೆ.

ಕಲಬುರಗಿ ವಿಮಾನ ನಿಲ್ದಾಣ ಕಲ್ಯಾಣ ಕರ್ನಾಟಕ ಭಾಗದ ಪ್ರಮುಖ ನಿಲ್ದಾಣವಾಗಿದ್ದು ಹಲವಾರು ಅಭಿವೃದ್ದಿ ಯೋಜನೆಗಳಲ್ಲಿ ಕುಂಠಿತವಾಗಿದ್ದರಿಂದ ನಾಗರಿಕ ಸೌಲಭ್ಯ ಹಾಗೂ ಸರಕು ಸಾಗಾಣಿಕೆಯಲ್ಲಿ ತೊಡಕುಂಟಾಗಿದೆ ಎಂದು ರಾಧಾಕೃಷ್ಣ ದೊಡ್ಡಮನಿ ಪತ್ರದಲ್ಲಿ ಒತ್ತಿ ಹೇಳಿ, ಈ ಕೆಳಕಂಡ ಅಭಿವೃದ್ದಿಯನ್ನು ಕೂಡಲೇ ನಿರ್ವಹಿಸುವಂತೆ ಅವರು ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಅಭಿವೃದ್ದಿಯಿಂದ ವಂಚಿತವಾಗಿದ್ದ ಪ್ರದೇಶಗಳ ವೈಮಾನಿಕ ಸಂಪರ್ಕಕ್ಕೆ ಅನುಕೂಲವಾಗಲು ಉಡಾನ್ ಯೋಜನೆಯನ್ನು ಜಾರಿಗೊಳಿಸಲಾಗಿತ್ತು. ಇದೇ ಯೋಜನೆಯಡಿಯಲ್ಲಿ ಕಲಬುರಗಿ ವಿಮಾನ ನಿಲ್ದಾಣದಿಂದ ಬೇರೆ ಬೇರೆ ನಗರಗಳಿಗೆ ವಿಮಾನ ಸೇವೆ ಸಂಪರ್ಕ ಕಲ್ಪಿಸಲಾಗುತ್ತು. ಆದರೆ ವಿಮಾನ ಸೇವೆಯಲ್ಲಿ ದಿಢೀರ್ ರದ್ದತೆ ಮಾಡಿದ್ದರಿಂದ ಪ್ರಯಾಣಿಕರಿಗೆ, ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಅನಾನುಕೂಲವಾಗಿದೆ. ಅದರಂತೆ, ಕಲಬುರಗಿ ಘಾಜಿಯಾಬಾದ್ ನವದೆಹಲಿ ವಿಮಾನ ರದ್ದಾಗಿದ್ದರಿಂದ ಈ ಭಾಗದ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳ ಪ್ರಯಾಣಿಕರಿಗೆ ತೊಂದರೆಯಾಗಿದೆ. ಹಾಗಾಗಿ ಈ ಕೂಡಲೇ ಕಲಬುರಗಿ ದೆಹಲಿ ವಿಮಾನ ಸೇವೆ ಪುನರಾರಂಭಿಸಬೇಕು ಎಂದು ಅವರು ಹೇಳಿದ್ದಾರೆ.

ಪ್ರಸ್ತುತ ಅಲೈಯನ್ಸ್ ಏರ್ ಸಂಸ್ಥೆಯ‌ ವಿಮಾನಗಳು ವಾರದಲ್ಲಿ ಮೂರು ದಿನ ಮಾತ್ರ ಕಲಬುರಗಿ ಯಿಂದ ಬೆಂಗಳೂರಿಗೆ ಸೇವೆ ಒದಗಿಸುತ್ತಿದೆ. ಕಲಬುರಗಿ ವಿಮಾನ ನಿಲ್ದಾಣದಲ್ಲಿ ರಾತ್ರಿ ವೇಳೆ ನಿಲುಗಡೆಗೆ ಅನುಮತಿ ಸಿಕ್ಕಿರುವುದರಿಂದ ಕಲಬುರಗಿ ಹಾಗೂ ಬೆಂಗಳೂರಿನ ನಡುವೆ ಹೆಚ್ಚಿನ‌ ಸಂಖ್ಯೆಯ ವಿಮಾನಗಳ ಹಾರಾಟ ನಡೆಸುವುದರಿಂದ ಈ ಭಾಗದ ಪ್ರಯಾಣಿಕರಿಗೆ ಅನುಕೂಲವಾಗುವುದಷ್ಟೆ ಅಲ್ಲದೇ ಈ‌ ಭಾಗದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ.

ಕಲಬುರಗಿ ಹಾಗೂ ಮುಂಬೈ, ಕಲಬುರಗಿ ಹಾಗೂ ದೆಹಲಿ ಸೇರಿದಂತೆ ದೇಶದ‌ ಪ್ರಮುಖ ನಗರಗಳ ನಡುವೆ ವಿಮಾನ ಸೇವೆ ಆರಂಭಿಸಬೇಕೆಂಬುದು ಕಲಬುರಗಿ ಹಾಗೂ ಸುತ್ತಮುತ್ತಲಿನ ನಗರಗಳ ಜನರ ಬೇಡಿಕೆಯಾಗಿದೆ. ಹೀಗೆ ಮಾಡುವುದರಿಂದ ಆರ್ಟಿಕಲ್ 371 ಜೆ ಅಡಿಯಲ್ಲಿ ವಿಶೇಷ ಸವಲತ್ತು ಹೊಂದಿರುವ ಕಲ್ಯಾಣ ಕರ್ನಾಟಕ ಪ್ರದೇಶ ಗಣನೀಯ ಬೆಳವಣಿಗೆ ಕಾಣುತ್ತಿತ್ತು. ಆದರೆ, ನೇರ‌ವಿಮಾನಗಳ ಅನುಪಸ್ಥಿತಿ, ಈ ಭಾಗದ ಅಭಿವೃದ್ದಿಗೆ ಕುಂಠಿತವಾಗುವುದರ ಜೊತೆಗೆ ಶೈಕ್ಷಣಿಕ, ಪ್ರವಾಸೋದ್ಯಮ ಹಾಗೂ ಕಲಬುರಗಿ ಮುಂಬೈ ನಡುವಿನ ನೇರ ವಾಣಿಜ್ಯ ವ್ಯವಹಾರಕ್ಕೆ ಹಿನ್ನೆಡೆಯಾಗಿದೆ.

ಕಲಬುರಗಿ ವಿಮಾನನಿಲ್ದಾಣದಲ್ಲಿ ಮರುರೂಪಿಸಲಾದ ರನ್ ವೇ, ಮುಂದುವರೆದ ತಾಂತ್ರಿಕತೆಯುಳ್ಳ ಲೈಟಿಂಗ್ ಹಾಗೂ ವಿಮಾನ ಇಳಿಸುವ ವ್ಯವಸ್ಥೆ ಹೊಂದಿದ್ದು, ನಿರ್ವಹಣೆ,‌ದುರಸ್ತಿ ಹಾಗೂ ಕೂಲಂಕುಷ ಪರೀಕ್ಷೆ ಸೌಲಭ್ಯಗಳನ್ನು ಒದಗಿಸುವುದು ಅವಶ್ಯಕವಾಗಿದೆ. ಇದು ನಿಲ್ದಾಣದಲ್ಲಿ ಏರ್‌ಬಸ್ 320 ನಂತಹ ವಿಮಾನಗಳನ್ನು ನಿರ್ವಹಿಸುವ ಏರ್‌ಫೀಲ್ಡ್ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸಲು ಒತ್ತು ನೀಡಿದಂತಾಗುತ್ತದೆ ಎನ್ನಬಹುದು.

ಈ ಮೂಲಕ ಸ್ಥಳೀಯ ಯುವಕರಿಗೆ ಅವಕಾಶಗಳನ್ನು ಸೃಷ್ಟಿಸುವುದರ ಜೊತೆಗೆ ಪ್ರಾದೇಶಿಕ ಅಭಿವೃದ್ಧಿಗೆ ಬೆಂಬಲ ನೀಡುವ ಮೂಲಕ ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳನ್ನು ಉತ್ತೇಜಿಸಿ ಉದ್ಯೋಗಾವಕಾಶಗಳನ್ನು ಗಮನಾರ್ಹವಾಗಿ ಸುಧಾರಿಸುತ್ತದೆ. ಹೀಗಾದರೆ, ಈ ಪ್ರದೇಶದಲ್ಲಿ ಪ್ರಮುಖ ವಾಣಿಜ್ಯ ಮತ್ತು ಶಿಕ್ಷಣ ಕೇಂದ್ರವಾದ ಬೆಂಗಳೂರಿಗೆ ಸುಧಾರಿತ ಪ್ರವೇಶವನ್ನು ಒಳಗೊಂಡಂತೆ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲಾಗಲಿದೆ ಎಂದು ರಾಧಾಕೃಷ್ಣ ದೊಡ್ಡಮನಿ‌ ಅವರು ಒತ್ತಿ ಹೇಳಿದ್ದಾರೆ.

ನಾಗರಿಕ ವಿಮಾನಯಾನದ ಹೆಚ್ಚಿನ ಸೌಲಭ್ಯಕ್ಕಾಗಿ ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ದಿಗಾಗಿ‌ ಹೆಚ್ಚುತ್ತಿರುವ ಬೇಡಿಕೆಗಳಿಗೆ ಅನುಗುಣವಾಗಿ ಈ ಮೇಲಿನ ಕ್ರಮ/ ಯೋಜನೆಗಳನ್ನು ಜಾರಿಗೊಳಿಸುವುದು ಮಹತ್ವದ್ದಾಗಿದೆ. ಹಾಗಾಗಿ, ಈ ವಿಷಯದಲ್ಲಿ ಮಧ್ಯೆ ಪ್ರವೇಶಿಸಿ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಅಗತ್ಯ ಅಭಿವೃದ್ದಿ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರುತ್ತೇನೆ ಎಂದು ಸಂಸದರು ಹೇಳಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here