ಕಲಬುರಗಿ : ಸರಕಾರ ಕಟ್ಟಡ ಕಾರ್ಮಿಕರ ಕಾಯಕ ಸಲುವಾಗಿ ವಿತರಿಸಲು ಖರಿದಿಸಿರುವ ಸಾಮಗ್ರಿಗಳಿಗೆ ಸಂಬಂಧಪಟ್ಟಂತೆ ಜಿಲ್ಲಾ ಕಾರ್ಮಿಕ ಅಧಿಕಾರಿಗಳು, ಕಟ್ಟಡ ಕಾರ್ಮಿಕರ ಮುಖಂಡರಿಗೆ ಕರೆದಿರುವ ಸಾಮಗ್ರಿಗಳ ಪರಿಶೀಲನಾ ಸಭೆಯಲ್ಲಿ ಸಾಮಗ್ರಿಗಳನ್ನು ಪರಿಶೀಲಿಸಿದಾಗ ಕಟ್ಟಡ ಕಾರ್ಮಿಕರಿಗೆ ವಿತರಿಸುವ ಎಲ್ಲಾ ಸಾಮಗ್ರಿಗಳು ಸಂಪೂರ್ಣ ಕಳಪೆ ಗುಣಮಟ್ಟದ್ದಾಗಿರುತ್ತವೆ ಎಂದು ನವಕಲ್ಯಾಣ ಕರ್ನಾಟಕ ಕಾರ್ಮಿಕರ ಸಂಘ ಅಧ್ಯಕ್ಷ ಭೀಮರಾಯ ಕಂದಳ್ಳಿ ಆರೋಪಿಸಿದ್ದಾರೆ.
ಈ ಸಾಮಗ್ರಿಗಳು ಖರೀದಯಲ್ಲಿ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಅರೋಪಿಸಿದ ಅವರು ಸಂಘದಿಂದ ಮನವಿ ಪತ್ರ ಸಲ್ಲಿಸಿ ಕಟ್ಟಡ ಕಾರ್ಮಿಕರಿಗೆ ವಿತರಿಸಲು ಖರಿದಿಸಿರುವ ಕಳಪೆ ಕಾಮಗಾರಿಗಳನ್ನು ತಕ್ಷಣ ವಾಪಸ್ಸು ಮಾಡಿ ಗುಣಮಟ್ಟದ ಸಾಮಗ್ರಿಗಳನ್ನು ಖರೀದಿಸಿ ಕಟ್ಟಡ ಕಾರ್ಮಿಕರಿಗೆ ವಿತರಿಸಬೇಕೆಂದು ಒತ್ತಾಯಿಸಿದ್ದಾರೆ.
ಇಲಾಖೆ ಇದಕ್ಕೆ ಸ್ಪಂದಿಸದಿದ್ದರೆ, ಬರುವ ದಿನಗಳಲ್ಲಿ ಕಾರ್ಮಿಕ ಇಲಾಖೆಯ ಎದುರುಗಡೆ ಉಗ್ರ ಹೋರಾಟ ಮಾಡುವುದಾಗಿ ಸಂಘದ ಗೌರವಾಧ್ಯಕ್ಷರಾದ ರಾಜು ಜಮಾದಾರ, ಮುಖಂಡರಾದ ಶಿವುಕುಮಾರ ಬೆಳಗೇರಿ, ಮಹಾಂತೇಶ ದೊಡ್ಡಮನಿ, ಮರೆಪ್ಪ ರೊಟ್ಟನೊಡಗಿ, ದೇವಿಂದ್ರ ಉಳ್ಳಾಗಡ್ಡಿ, ಬಾಬುರಾವ ದೇವರಮನಿ ತಿಳಿಸಿದ್ದಾರೆ.