ವಿದ್ಯಾರ್ಥಿಗಳ ಸ್ವಾಗತ ಸಮಾರಂಭ; ಸಾಂಸ್ಕøತಿಕ ಉತ್ಸವ

0
145

ಕಲಬುರಗಿ: ಪ್ರತಿಯೊಂದು ಮಗುವಿನಲ್ಲೂ ವೈಜ್ಞಾನಿಕ ಮನೋಭಾವ ಇದ್ದೇ ಇರುತ್ತದೆ. ಅದು ಪ್ರಶ್ನೆ ಮಾಡುವುದರ ಮೂಲಕ ಗುರುತಿಸುತ್ತದೆ. ಸಮಾಜದಲ್ಲಿ ಕಂಡು ಬರುವ ಪ್ರಸ್ತುತ ಸಮಸ್ಯೆ, ಸವಾಲುಗಳು ಮತ್ತು ಬದಲಾವಣೆಗಳನ್ನು ನಾವು ವೈಚಾರಿಕತೆಯಿಂದ ನೋಡುವ ದೃಷ್ಟಿ ಬೆಳೆಸಿಕೊಂಡಾಗ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹಿರಿಯ ಪತ್ರಕರ್ತ-ಲೇಖಕ ಡಾ. ಶ್ರೀನಿವಾಸ ಸಿರನೂರಕರ್ ಹೇಳಿದರು.

ನಗರದ ಎಕೆಆರ್ ದೇವಿ ವಿಜ್ಞಾನ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಬುಧವಾರ ಜರುಗಿದ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಸಾಂಸ್ಕøತಿಕ ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Contact Your\'s Advertisement; 9902492681

ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ನಮ್ಮ ಕನ್ನಡ ನಾಡು ನುಡಿಯ ಮೇಲೆ ಅಭಿಮಾನವನ್ನು ಹೊಂದುವುದು ಮನದಾಳದ ಸಂಕಲ್ಪವಾಗಬೇಕು. ಮಾತೃ ಭಾಷೆಯ ಬಗ್ಗೆ ಅಪಾರ ಪ್ರೀತಿ ಹೊಂದಿರುವುದು ಅತ್ಯಗತ್ಯವಾಗಿದೆ. ಇಂದಿನ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಹೆತ್ತ ತಾಯಿಯಂತೆ ಪ್ರೀತಿಸಬೇಕೆಂದು ಹೇಳಿದರು.

ಗುಲಬರ್ಗಾ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ರಮೇಶ ಲಂಡನಕರ್ ಮಾತನಾಡಿ, ತಮ್ಮ ವಿದ್ಯಾರ್ಥಿ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡು ಪರಸ್ಪರ ಸ್ನೇಹ ಸೌಹಾರ್ದತೆಯಿಂದ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬದುಕು ನಡೆಸಬೇಕು. ನಮ್ಮ ದೇಶ ಸರ್ವಧರ್ಮಗಳ ರಾಷ್ಟ್ರವಾಗಿದ್ದು, ಸಂಸ್ಕøತಿ, ಕಲೆ, ಪರಂಪರೆ, ಜಾತಿ ಧರ್ಮಗಳನ್ನು ಒಗ್ಗೂಡಿಸುವ ಶಕತಿ ಹೊಂದಿದೆ. ಬೇಧವನ್ನು ಮರೆತು ಸಾಮರಸ್ಯದಿಂದ ಇರುವುದನ್ನು ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತಾಧಿಕಾರಿ ವಿದ್ಯಾಸಾಗರ ದೇಶಮುಖ, ಶಾಲಾ-ಕಾಲೇಜುಗಳಲ್ಲಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮಗಳಿಂದ ಸಮನ್ವಯ ಮನೋಭಾವನೆ ಬೆಳೆಯುತ್ತದೆ. ಪ್ರೀತಿ ವಿಶ್ವಾಸ ಹೆಚ್ಚಿಸುವ ಕಾರ್ಯ ವಿದ್ಯಾರ್ಥಿಗಳಿಂದ ಆಗುತ್ತದೆ ಎಂದರು.

ಕಾಲೇಜಿನ ವ್ಯವಸ್ಥಾಪಕ ಎಂ.ವಿ. ಎಸ್ ಸುಬ್ರಹ್ಮಣ್ಯಂ, ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿ ಶಿವರಾಜ ಎಸ್ ಅಂಡಗಿ, ರಾಜೇಂದ್ರ ಮಾಡಬೂಳ, ಎಂ ಎನ್ ಸುಗಂಧಿ, ಉಪನ್ಯಾಸಕರಾದ ಕಿರಣ ಗೋಡಬಾಲೆ, ಡಾ. ಶಿವರಾಜ ಪಾಟೀಲ, ರಾಜಶೇಖರ ಕೋರೆ, ವಿಕ್ರಮ್ ಭಾದ್ರಿ, ನಾಗೇಂದ್ರಪ್ಪ ವಾಲಿ, ಸನಾ ಫರೀನ್, ಹೀನಾ ತಬಸ್ಸುಮ್, ಸುಷ್ಮಾ ಸೊಪ್ಪಣ್ಣ, ಭಾಗ್ಯವಂತಿ, ನಾಗಾರ್ಜುನ್ ರೋಗನ್, ಅರ್ಪಿತಾ ಕುಲಕರ್ಣಿ, ರೇಷ್ಮಾ ಕವಳೆ, ಕು. ಸೃಷ್ಟಿ ತಳವಾರ ರೇವೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here