ಹೋರಾಟಗಾರರಿಗೆ ವಿಶೇಷ ಗೌರವ ನೀಡಿದ ಪರಿಷತ್ತು: ಜಮಾದಾರ ಶ್ಲಾಘನೆ

0
363

ಪ್ರಥಮ ದಲಿತ ಚಳವಳಿ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ಧತೆ

ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇದೇ ಮೊದಲ ಬಾರಿಗೆ ಆಗಷ್ಟ್ 17 ಮತ್ತು 18 ರಂದು ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಜರುಗುತ್ತಿರುವ ಪ್ರಥಮ ದಲಿತ ಚಳವಳಿ ಸಾಹಿತ್ಯ ಸಮ್ಮೇಳನದ ಯಶಸ್ವಿಗಾಗಿ ಸಿದ್ಧತೆ ಭರದಿಂದ ನಡೆದಿದ್ದು, ಸಮ್ಮೇಳನವನ್ನು ಅದ್ಧೂರಿ ಹಾಗೂ ವಿಜೃಂಬಣೆಯಿಂದ ನಡೆಸಲು ತಯ್ಯಾರಿ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.

ಇದಕ್ಕೆ ಪೂರಕವಾಗಿ ರಚಿಸಲ್ಪಟ್ಟ ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷರನ್ನಾಗಿ ಹಿರಿಯ ಹೋರಾಟಗಾರ – ಕೋಲಿ ಕಬ್ಬಲಿಗ ಎಸ್ ಟಿ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಲಚ್ಚಪ್ಪ ಎಸ್ ಜಮಾದಾರ ಅವರನ್ನು ಸತ್ಕರಿಸಿ, ಅವರ ನೇತೃತ್ವದಲ್ಲಿ ಶುಕ್ರವಾರ ನಗರದ ಕನ್ನಡ ಭವನದಲ್ಲಿ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ತೇಗಲತಿಪ್ಪಿ ಯವರು, ಇಂದಿನ ಸಮಾಜದಲ್ಲಿ ಸಮಾನತೆ ಬಯಸುವುದೇ ನಿಜವಾದ ದಲಿತ ಅಥವಾ ಬಂಡಾಯ ಸಾಹಿತ್ಯವಾಗಿದೆ. ಮತ್ತು ಅದರ ಉದ್ದೇಶವೂ ಕೂಡ ಅದೇ ಆಗಿದೆ. ಯಾವುದೇ ರಾಷ್ಟ್ರ ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ಆ ರಾಷ್ಟ್ರದ ದಲಿತ, ಶೋಷಿತ ಸಮುದಾಯಗಳ ಅಭಿವೃದ್ಧಿ ಆಗಬೇಕು. ಆ ಕಾರಣಕ್ಕಾಗಿ ಶೋಷಿತ ಜನಾಂಗದವರ ಬದುಕಿನ ಬವಣೆಗಳನ್ನು ಅವಲೋಕಿಸುವ ಸಮ್ಮೇಳನ ಇದಾಗಲಿದೆ ಎಂದರು.

Contact Your\'s Advertisement; 9902492681

ಹಿರಿಯ ಹೋರಾಟಗಾರ ಲಚ್ಚಪ್ಪ ಎಸ್ ಜಮಾದಾರ ಮಾತನಾಡಿ, ದಲಿತ ದಮನಿತರ ಧ್ವನಿಯಾಗಿ ಕಳೆದ ನಾಲ್ಕು ದಶಕಗಳಿಂದ ಹೋರಾಟ ಮಾಡುತ್ತಾ ಬಂದಿರುವ ಡಾ. ಡಿ.ಜಿ. ಸಾಗರ ಅವರನ್ನು ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಹೋರಾಟಗಾರರಿಗೆ ಪರಿಷತ್ತು ವಿಶೇಷ ಗೌರವ ಕೊಟ್ಟಂತಾಗಿದೆ. ಹಾಗೆಯೇ ಹೋರಾಟಗಾರರಲ್ಲಿ ಹೊಸದೊಂದು ಭರವಸೆ ಮೂಡಿದಂತಾಗಿದೆ. ಇದೊಂದು ಹೊಸ ಇತಿಹಾಸ ನಿರ್ಮಿಸಿದಂತಾಗಿದೆ ಎಂದು ಅಭಿಪ್ರಾಯ ಪಟ್ಟರು.

ಜಿಲ್ಲಾ ಕಸಾಪ ದ ಗೌರವ ಕಾರ್ಯದರ್ಶಿಗಳಾದ ಶಿವರಾಜ ಎಸ್ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ಪ್ರಮುಖರಾದ ಹಣಮಂತಪ್ರಭು, ಹರವಾಳ, ಧರ್ಮರಾಯ ಜವಳಿ, ಚಂದ್ರಕಾಂತ ತಳವಾರ, ಸಿದ್ಧಲಿಂಗ ಜಿ ಬಾಳಿ, ನಾರಾಯಣ ಜೋಶಿ, ರಾಜೇಂದ್ರ ಮಾಡಬೂಳ, ರಾಮಲಿಂಗ ನಾಟೀಕಾರ, ಗುರುಬಸಪ್ಪ ಸಜ್ಜನಶೆಟ್ಟಿ ಎಸ್ ಕೆ ಬಿರಾದಾರ, ಪ್ರಭುಲಿಂಗ ಮೂಲಗೆ, ಪ್ರಭವ ಪಟ್ಟಣಕರ್, ರಮೇಶ ಡಿ ಬಡಿಗೇರ, ಮಲ್ಲಿಕಾರ್ಜುನ ಇಬ್ರಾಹಿಂಪುರ, ರಾಜೇಂದ್ರ ದೊಡ್ಮನಿ, ಶಿವಾನಂದ ಮಠಪತಿ, ಮಲ್ಲಿನಾಥ ಸಂಗಶೆಟ್ಟಿ, ಬಾಬುರಾವ ಪಾಟೀಲ, ಸೋಮಶೇಖರಯ್ಯಾ ಹೊಸಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here