ಕಲಬುರಗಿ: ಮಹಾನಗರದ ಶ್ರೀ ಶರಣಬಸವೇಶ್ವರ ಸಂಸ್ಥಾನ ಹಾಗೂ ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಲಿಂಗರಾಜ ಅಪ್ಪಾ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಭಾಜನರಾಗಿದ ನೇಕಾರ ಬಳಗ ವತಿಯಿಂದ ಅವರ ಸ್ವಗೃಹಕ್ಕೆ ಭೇಟಿ ನೀಡಿ, ಪ್ರಪ್ರಥಮವಾಗಿ ಸನ್ಮಾನಿಸಿ, ಗೌರವಿಸಲಾಯಿತು.
ಮ್ಯಾಳಗಿ ಚಂದ್ರಶೇಖರ್ ಎಲ್ಲರನ್ನೂ ಸ್ವಾಗತಿಸಿದರು ನಂತರ ದಾಸಿಮಯ್ಯ ಕಾನೂನು ಸೇವಾ ಸಂಸ್ಥೆಯ ಅಧ್ಯಕ್ಷರಾದ ಶಿವಲಿಂಗಪ್ಪಾ ಅಷ್ಟಗಿ ಸನ್ಮಾನಿಸಲಾಯಿತು. ರೈತ ಪರ ಸಮಾಜ ಸೇವಾ ಕಾರ್ಯ ಪರಿಗಣಿಸಿ ಗೌರವ ಡಾಕ್ಟರೇಟ್ ಗೆ ಆಯ್ಕೆ ಮಾಡಿ, ವಿಶ್ವವಿದ್ಯಾಲಯದ ಪ್ರಶಸ್ತಿ ಮೌಲ್ಯ ಹೆಚ್ಚಿಸಿ ಕೊಂಡಂತಾಗಿದೆ ಎಂದರು.
ಗೌರವ ಸ್ವೀಕರಿಸಿ ನ್ಯಾಯವಾದಿ ಡಾ. ಲಿಂಗರಾಜ ಅಪ್ಪಾ ಮಾತನಾಡಿ ನ್ಯಾಯದೇವತೆಯ ತಕ್ಕಡಿಯಲ್ಲಿ ನೋಡಿದಾಗ ರೈತ ಮತ್ತು ನೇಕಾರ ಸಮಾನರು, ಎರಡು ವೃತ್ತಿಗಳು ನಸಿಸುವ ಮಾತುಗಳು ಕೇಳಿದ್ದು ಸಾಕು, ನಾವೆಲ್ಲರೂ ಸೇರಿ ಸಕಾರಾತ್ಮಕವಾಗಿ ಆಲೋಚಿಸಿ, ಅಭಿವೃದ್ಧಿ ಕಡೆ ಸಾಗೋಣ ಎಂದರು.
ಕೊನೆಯಲ್ಲಿ ಶ್ರೀನಿವಾಸ ಬಲಪೂರ ವಂದಿಸಿದರು. ಗೃಹ ಸನ್ಮಾನ ಕಾರ್ಯಕ್ರಮದಲ್ಲಿ ನ್ಯಾಯವಾದಿಗಳಾದ ನಿತ್ಯಾನಂದ ಬಂಡಿ, ವಿನೋದಕುಮಾರ ಜೇನವೆರಿ, ಹಿರಿಯರಾದ ಮಲ್ಲಿಕಾರ್ಜುನ ಶ್ಯಾವಿ, ಸಚಿನ ಜಾವಾಜಿ, ಚಂದ್ರಕಾಂತ್ ನಾಗನಹಳ್ಳಿ, ಪತ್ರಿಕಾ ಛಯಾ ಗ್ರಾಹಕ ರಾಜು ಕೋಸ್ಟಿ ಇತರರು ಉಪಸ್ಥಿತರಿದ್ದರು.