ಕಲಬುರಗಿ: ಇಲ್ಲಿನ ಗುಲ್ಬರ್ಗ ವಿವಿಯ 42ನೇ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿನಿಯೊಬ್ಬಳು ಕೈಯಲ್ಲಿ ಪತ್ರವೊಂದನ್ನು ಹಿಡಿದು ವೇದಿಕೆ ಮೇಲೆ ನುಗ್ಗುತ್ತಿದ್ದಾಗ ಪೊಲೀಸರು ಅವಳನ್ನು ತಡೆದ ಘಟನೆ ನಡೆಯಿತು.
ಆಂಗ್ಲ ವಿಭಾಗದ ರೋಶನಿ ಮಾಳಗೆ ಎಂಬ ವಿದ್ಯಾರ್ಥಿನಿಗೆ ಮೊದಲನೆ ರ್ಯಾಂಕ್ ಬಂದಿರುವುದರಿಂದ ಗೋಲ್ಡ್ ಮೆಡಲ್ ಸ್ವೀಕರಿಸಲು ನಿಮ್ಮ ಫೋಟೊ ಇತ್ಯಾದಿ ಕಳಿಸುವಂತೆ ಪತ್ರ ಬರೆದಿದ್ದರಂತೆ! ನಿನ್ನೆ ಫೋನ್ ಮಾಡಿ ಅಂಕ ಎಣಿಕೆ ಮಾಡುವವರ ಕಣ್ತಪ್ಪನಿಂದಾಗಿ ಹೆಚ್ಚು ಕಮ್ಮಿಯಾಗಿದ್ದು, ಇನ್ನೊಬ್ಬ ವಿದ್ಯಾರ್ಥಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುವುದು ಎಂದು ಹೇಳಿದ್ದರಂತೆ.
ಹೀಗಾಗಿ ಆ ವಿದ್ಯಾರ್ಥಿನಿ ತನಗೆ ಬಂದ ಪತ್ರದ ಪ್ರತಿ ಹಿಡಿದು ವಿಸಿ ಹಾಗೂ ಪೊಲೀಸ್ ಮತ್ತು ಮಾಧ್ಯಮದವರ ಮುಂದೆ ತನ್ನ ಅಳಲು ತೋಡಿಕೊಂಡಳು.