ರಂಗಾಯಣಗಳಿಗೆ ಅರ್ಹ ನಿರ್ದೇಶಕರುಗಳನ್ನು ನೇಮಿಸುವಲ್ಲಿ ತಾತ್ಸಾರ: ಶಂಕ್ರಯ್ಯ ಘಂಟಿ ಆರೋಪ

0
62

ಕಲಬುರಗಿ: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಶಿವರಾಜ್ ಎಸ್. ತಂಗಡಗಿ ಅವರು ರಂಗಭೀಷ್ಮೆ ಡಿ. ಬಿ.ವಿ ಕಾರಂತರ ಕನಸಿಗೆ ಕೊಳ್ಳಿಯಿಟ್ಟಿದ್ದಾರೆ. ಕರ್ನಾಟಕ ರಂಗಾಯಣಗಳಿಗೆ ಅರ್ಹ ನಿರ್ದೇಶಕರುಗಳನ್ನು ನೇಮಿಸುವಲ್ಲಿ ತಾತ್ಸಾರ ಮಾಡಿ ರಂಗ ಸಮಾಜವನ್ನು ಘಾಷಿಗೊಳಿಸಿದ್ದಾರೆ ಎಂದು ಜನರಂಗ ಸಂಸ್ಥೆಯ ಶಂಕ್ರಯ್ಯ ಘಂಟಿ ಅವರು ಆರೋಪಿಸಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿವರಾಜ್ ತಂಗಡಗಿ ಅವರ ನಡೆಯನ್ನು ಜನರಂಗ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ. ಇಡೀ ರಾಜ್ಯದಲ್ಲಿ ಹಲವಾರು ದಶಕಗಳಿಂದ ರಂಗ ಚಟುವಟಿಕೆಗಳ ಮೂಲಕ ಸಮಾಜಮುಖಿ ಚಿಂತನೆಗೆ ಹಚ್ಚುತ್ತಾ ರಂಗಭೂಮಿಯ ಸತ್ವ, ಸಾಮರ್ಥ್ಯ ಮತ್ತು ಪರಿಣಾಮದ ಬಗ್ಗೆ ಚಿಂತಿಸುವ ವರ್ಗವೊಂದಿದೆ ಎಂಬುದು ಸಚಿವರ ಗಮನಕ್ಕೆ ಬಾರದಿರುವುದು ಇಡೀ ರಂಗಲೋಕವೇ ತಲೆತಗ್ಗಿಸುವಂತಾಗಿದೆ ಎಂದು ಕಿಡಿಕಾರಿದರು.

Contact Your\'s Advertisement; 9902492681

ಇನ್ನು ಇದೆ ವೇಳೆ ಮಾತನಾಡಿದ ಅವರು, ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಘನ ಸರ್ಕಾರ ರಂಗಾಯಣ ನಿರ್ದೇಶಕರ ನೇಮಕ ಕ್ರಮವನ್ನು ಮರು ಪರಿಶೀಲಿಸಿ ಬದಲಾವಣೆ ಮಾಡದಿದ್ದರೆ ಘನ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಾಟಕ ಅಕಾಡೆಮಿ ಮತ್ತು ಬಾಲವಿಕಾಸ ಅಕಾಡೆಮಿಗಳು ನನ್ನ ರಂಗಭೂಮಿ ಸೇವೆಯನ್ನು ಗುರುತಿಸಿ ನನಗೆ ಕೊಡಮಾಡಿದ ಎರಡೂ ಪ್ರಶಸ್ತಿ ಸ್ಮರಣಿಕೆ ಮತ್ತು ಪ್ರಶಸ್ತಿ ಪತ್ರಗಳನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಹಿಂತಿರುಗಿಸುವ ಮೂಲಕ ರಾಜ್ಯದಾದ್ಯಂತ ಉಗ್ರ ಪ್ರತಿಭಟನೆಯನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಟಿಯಲ್ಲಿ ಸಂಘಟನೆಯ ಆಶಾ ಚಿತ್ರಶೇಖರ್, ಎಸ್ ಬಿ ಹರಿಕೃಷ್ಣ, ಶಂಭುಲಿಂಗಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here